IFFI 2025: ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ರಜನಿಕಾಂತ್‌ಗೆ IFFI ಗೌರವ ; ಅಮರನ್ 'ಗೋಲ್ಡನ್ ಪೀಕಾಕ್ ಪ್ರಶಸ್ತಿ'ಗೆ ನಾಮನಿರ್ದೇಶನ
ಕಮಲ್ ಹಾಸನ್ ನಿರ್ಮಾಣದ ನಟ ಶಿವಕಾರ್ತಿಕೇಯನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ 'ಅಮರನ್' (Amaran) ಚಿತ್ರವು ಉತ್ಸವದ ಅತ್ಯುನ್ನತ ಪ್ರತಿಷ್ಠಿತ 'ಗೋಲ್ಡನ್ ಪೀಕಾಕ್ ಪ್ರಶಸ್ತಿ'(Golden Peacock Award)ಗೆ ನಾಮನಿರ್ದೇಶನಗೊಂಡಿದೆ. ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(IFFI)ದ ಸಮಾರೋಪ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಲಾಗಿದೆ.
Rajinikanth honoured at IFFI -
56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI 2025)ವು ನವೆಂಬರ್ 20 ರಿಂದ 28ರವರೆಗೆ ಗೋವಾದಲ್ಲಿ ಈ ಉತ್ಸವ ನಡೆಯುತ್ತಿದೆ. ರಜನಿಕಾಂತ್ ತಮ್ಮ ಸಾಧನೆಗಾಗಿ ವಿಶೇಷ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರಿಗೆ ಈ ಬಾರಿಯ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI)ದ ಅತ್ಯಂತ ಮಹತ್ವದ ವೇದಿಕೆಯಾಗಲಿದೆ. ತಮಿಳು ಸೂಪರ್‌ಸ್ಟಾರ್ ಮುಂದಿನ ಬಹುನಿರೀಕ್ಷಿತ ನೆಲ್ಸನ್ ದಿಲೀಪ್‌ಕುಮಾರ್ ಅವರ ಆಕ್ಷನ್ ಚಿತ್ರ 'ಜೈಲರ್ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
'ಗೋಲ್ಡನ್ ಪೀಕಾಕ್ ಪ್ರಶಸ್ತಿ'
ಕಮಲ್ ಹಾಸನ್ ನಿರ್ಮಾಣದ ನಟ ಶಿವಕಾರ್ತಿಕೇಯನ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ 'ಅಮರನ್' (Amaran) ಚಿತ್ರವು ಉತ್ಸವದ ಅತ್ಯುನ್ನತ ಪ್ರತಿಷ್ಠಿತ 'ಗೋಲ್ಡನ್ ಪೀಕಾಕ್ ಪ್ರಶಸ್ತಿ'(Golden Peacock Award)ಗೆ ನಾಮನಿರ್ದೇಶನಗೊಂಡಿದೆ. ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡ ಕಮಲ್, "ಭಾರತದ ಆತ್ಮವನ್ನು ಕಲಕುವ ಅಮರ ಮೇಜರ್ ಮುಕುಂದ್ ವರದರಾಜನ್ ಅವರ ಕಥೆಯನ್ನು ಹಂಚಿಕೊಳ್ಳಲು ಹೆಮ್ಮೆಯಾಗುತ್ತದೆ, ಅದು ಈಗ ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತದೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಕಣ್ಣೀರಿಡುತ್ತಾ ಬಿಗ್ ಬಾಸ್ ಮನೆಯಿಂದ ಹೊರಟೇ ಬಿಟ್ಟ ಚಂದ್ರಪ್ರಭ!
'ಇಂಡಿಯನ್ ಪನೋರಮಾ' ವಿಭಾಗ
ಮಲಯಾಳಂ ನಟ ಮೋಹನ್ ಲಾಲ್ ಅಭಿನಯದ 'ಥುದರುಮ್' ಚಿತ್ರವು 56ನೇ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ ( IFFI ) ದಲ್ಲಿ ಪ್ರದರ್ಶನಗೊಳ್ಳಲಿದೆ. ಈ ಚಿತ್ರವು 'ಇಂಡಿಯನ್ ಪನೋರಮಾ' ವಿಭಾಗದಲ್ಲಿ ಆಯ್ಕೆಯಾಗಿದೆ. ಟೊವಿನೊ ಥಾಮಸ್ ಅಭಿನಯದ 'ARM' ಚಿತ್ರವೂ 'ಬೆಸ್ಟ್ ಡೆಬ್ಯೂಟ್ ಡೈರೆಕ್ಟರ್ ಕಾಂಪಿಟೇಷನ್' ವಿಭಾಗದಲ್ಲಿ ಆಯ್ಕೆಯಾಗಿದೆ.
IFFI 2025 81 ದೇಶಗಳಿಂದ 240 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಿದೆ. ಇದರಲ್ಲಿ 13 ವರ್ಡ್ ಪ್ರೀಮಿಯರ್ಸ್, 4 ಅಂತರರಾಷ್ಟ್ರೀಯ ಪ್ರಥಮ ಪ್ರದರ್ಶನಗಳು ಮತ್ತು 46 ಏಷ್ಯನ್ ಪ್ರಥಮ ಪ್ರದರ್ಶನಗಳು ಸೇರಿವೆ. 127 ದೇಶಗಳಿಂದ ದಾಖಲೆಯ 2,314 ಚಲನಚಿತ್ರ ಸಲ್ಲಿಕೆಗಳು ಬಂದಿವೆ ಎಂದು ಆಯೋಜಕರು ತಿಳಿಸಿದ್ದಾರೆ.
Proud to share the immortal Major Mukund Varadarajan’s story that stirred India’s soul will now echo across the world.
— Kamal Haasan (@ikamalhaasan) November 7, 2025
Extremely delighted to share that #Amaran has been nominated for the Golden Peacock Award under the International Competition and will be the opening feature… pic.twitter.com/efQFneEQDe
ಈ ಐತಿಹಾಸಿಕ 50ನೇ ವರ್ಷದ ಸಿನಿ ಪಯಣಕ್ಕಾಗಿ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(IFFI)ದ ಸಮಾರೋಪ ಸಮಾರಂಭದಲ್ಲಿ ರಜನಿಕಾಂತ್ ಅವರಿಗೆ ವಿಶೇಷ ಸನ್ಮಾನವನ್ನು ಏರ್ಪಡಿಸಲಾಗಿದೆ.
ಗುರುದತ್, ರಾಜ್ ಖೋಸ್ಲಾ, ರಿತ್ವಿಕ್ ಘಟಕ್, ಪಿ. ಭಾನುಮತಿ, ಭೂಪೇನ್ ಹಜಾರಿಕಾ ಮತ್ತು ಸಲೀಲ್ ಚೌಧರಿ ಅವರ ಜನ್ಮ ಶತಮಾನೋತ್ಸವವನ್ನು ಈ ಉತ್ಸವದಲ್ಲಿ ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾಗೆ ಬೇಕು ಅಂತಲೇ ಪತ್ರ ಸಿಗದಂತೆ ಮಾಡಿದೆ ! ಕಿಚ್ಚನ ಮುಂದೆ ತಪ್ಪು ಒಪ್ಪಿಕೊಂಡ ಅಶ್ವಿನಿ ಗೌಡ
'ದಿ ಬ್ಲೂ ಟ್ರಯಲ್' ಸಿನಿಮಾ
ಚಲನಚಿತ್ರೋತ್ಸವದ ಆರಂಭಿಕ ಚಿತ್ರ 'ದಿ ಬ್ಲೂ ಟ್ರಯಲ್' ಆಗಿದ್ದು, ಇದನ್ನು ಬ್ರೆಜಿಲಿಯನ್ ಚಲನಚಿತ್ರ ನಿರ್ಮಾಪಕ ಗೇಬ್ರಿಯಲ್ ಮಸ್ಕಾರೊ ನಿರ್ದೇಶಿಸಿದ್ದಾರೆ. ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2025 ರಲ್ಲಿ ಸಿಲ್ವರ್ ಬೇರ್ ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಯನ್ನು ಗೆದ್ದ ಈ ವೈಜ್ಞಾನಿಕ ಕಾಲ್ಪನಿಕ ಫ್ಯಾಂಟಸಿ ಚಿತ್ರವು 75 ವರ್ಷದ ಮಹಿಳೆಯ ಪ್ರಯಾಣದ ಕಥೆಯನ್ನು ಹೇಳುತ್ತದೆ. ಈ ವರ್ಷ ಜಪಾನ್ ಅನ್ನು ಗಮನ ಸೆಳೆಯುವ ದೇಶವಾಗಿ ಆಯ್ಕೆ ಮಾಡಲಾಗಿದೆ.