ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಧುರಂಧರ್‌ʼ ಚಿತ್ರದ ನಟಿ ಸಾರಾ ಅರ್ಜುನ್‌ ಭುಜಕ್ಕೆ ಮುತ್ತು ಕೊಟ್ಟಿದ್ದ ರಾಕೇಶ್‌ ಬೇಡಿ; ನೆಟ್ಟಿಗರ ಟೀಕೆಗಳಿಗೆ ಸಿಕ್ತು ಭಾವನಾತ್ಮಕ ಪ್ರತಿಕ್ರಿಯೆ!

Dhurandhar Controversy: 'ಧುರಂಧರ್' ಸಿನಿಮಾ 500 ಕೋಟಿ ಕ್ಲಬ್ ಸೇರಿ ದಾಖಲೆ ಬರೆಯುತ್ತಿರುವ ಹೊತ್ತಲ್ಲೇ, ಹಿರಿಯ ನಟ ರಾಕೇಶ್ ಬೇಡಿ ಅವರು ನಟಿ ಸಾರಾ ಅರ್ಜುನ್ ಅವರ ಭುಜಕ್ಕೆ ಮುತ್ತಿಟ್ಟ ವಿಡಿಯೋ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ರಾಕೇಶ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

Dhurandhar: ಸಾರಾ ಭುಜಕ್ಕೆ ಮುತ್ತಿಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಾಕೇಶ್‌

-

Avinash GR
Avinash GR Dec 20, 2025 5:40 PM

ರಣವೀರ್‌ ಸಿಂಗ್‌, ಸಾರಾ ಅರ್ಜುನ್‌ ನಟನೆಯ ʻಧುರಂಧರ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಕಮಾಯಿ ಮಾಡುತ್ತಿದೆ. ಈಗಾಗಲೇ ಈ ಚಿತ್ರದ ಗಳಿಕೆಯು ಭಾರತದಲ್ಲಿ 500 ಕೋಟಿ ರೂ. ದಾಟಿದೆ. ನಿರ್ಮಾಪಕ ಮತ್ತು ನಿರ್ದೇಶಕ ಆದಿತ್ಯ ಧರ್‌ ಅವರ ಖುಷಿಗೆ ಸದ್ಯಕ್ಕೆ ಪಾರವೇ ಇಲ್ಲ. ಈ ನಡುವೆ ಒಂದು ವಿವಾದ ಕೂಡ ಹುಟ್ಟಿಕೊಂಡಿದೆ. ಅದು ಚಿತ್ರದ ಕುರಿತಲ್ಲ, ಅದರಲ್ಲಿ ನಟಿಸಿದ ಕಲಾವಿದರ ಕುರಿತು!

ಹೌದು, ನವೆಂಬರ್‌ನಲ್ಲಿ ನಡೆದ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಒಂದು ವಿಡಿಯೋ ವೈರಲ್ ಆಗಿತ್ತು. ಅದರಲ್ಲಿ ಹಿರಿಯ ನಟ ರಾಕೇಶ್ ಬೇಡಿ ಅವರು ನಟಿ ಸಾರಾ ಅರ್ಜುನ್ ಅವರನ್ನು ಅಭಿನಂದಿಸಿದ್ದರು ಮತ್ತು ಸಾರಾ ಅವರ ರಾಕೇಶ್‌ ಭುಜಕ್ಕೆ ಮುತ್ತಿಟ್ಟಿದ್ದರು. ಧುರಂಧರ್‌ ಚಿತ್ರದಲ್ಲಿ ಮಗಳ ಪಾತ್ರ ಮಾಡಿರುವ 20ರ ಹರೆಯದ ಸಾರಾಗೆ 70 ವರ್ಷದ ಈ ನಟ ಹೀಗೆ ಬಹಿರಂಗವಾಗಿ ಭುಜಕ್ಕೆ ಚುಂಬಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ನೆಟ್ಟಿಗರು ಮಾಡಿದ್ದರು. ಈ ವಿಡಿಯೋ ಕೂಡ ಸಾಕಷ್ಟು ವೈರಲ್‌ ಆಗಿತ್ತು. ಇದೀಗ ಆ ಬಗ್ಗೆ ರಾಕೇಶ್‌ ಬೇಡಿ ಮಾತನಾಡಿದ್ದಾರೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ನಮ್ಮಿಬ್ಬರದು ತಂದೆ ಮಗಳ ಸಂಬಂಧ

"ಸಾರಾ ನನ್ನ ವಯಸ್ಸಿನ ಅರ್ಧಕ್ಕಿಂತ ಕಡಿಮೆ ವಯಸ್ಸಿನವಳು. ಆಕೆ ಈ ಸಿನಿಮಾದಲ್ಲಿ ನನ್ನ ಮಗಳ ಪಾತ್ರವನ್ನು ನಿರ್ವಹಿಸಿದ್ದಾಳೆ. ನಾವು ಚಿತ್ರೀಕರಣದ ಸಮಯದಲ್ಲಿ ಭೇಟಿಯಾದಾಗಲೆಲ್ಲಾ, ಮಗಳು ತನ್ನ ತಂದೆಯೊಂದಿಗೆ ಇರುವಂತೆಯೇ ಅವಳು ನನ್ನನ್ನು ಅಪ್ಪಿಕೊಂಡು ಸ್ವಾಗತಿಸುತ್ತಿದ್ದಳು. ನಾವು ಉತ್ತಮ ಬಾಂಧವ್ಯ ಮತ್ತು ಸೌಹಾರ್ದತೆಯನ್ನು ಹಂಚಿಕೊಳ್ಳುತ್ತೇವೆ, ಅದು ಪರದೆಯ ಮೇಲೂ ಕಂಡಿದೆ" ಎಂದು ರಾಕೇಶ್‌ ಬೇಡಿ ಹೇಳಿದ್ದಾರೆ.

Ranveer Singh: 6 ದೇಶಗಳಲ್ಲಿ 'ಧುರಂಧರ್‌' ಬ್ಯಾನ್, ಆದರೂ ಗಲ್ಲಾಪೆಟ್ಟಿಗೆಯಲ್ಲಿ ಸಿಡಿಲಬ್ಬರದ ಕಲೆಕ್ಷನ್!‌ ಈವರೆಗೂ ಆಗಿರುವ ಗಳಿಕೆ ಎಷ್ಟು?

ನೋಡುಗರ ಕಣ್ಣಿನಲ್ಲಿ ದೋಷ ಇದೆ!

"ಹಾಗಾಗಿ, ಟ್ರೇಲರ್‌ ರಿಲೀಸ್‌ ದಿನವು ಅದು ಭಿನ್ನವಾಗಿರಲಿಲ್ಲ, ಆದರೆ ಜನರು ಅಲ್ಲಿ ಪ್ರೀತಿಯನ್ನು ನೋಡುತ್ತಿಲ್ಲ. ಒಬ್ಬ ವಯಸ್ಸಾದ ವ್ಯಕ್ತಿಯೊಬ್ಬ ಚಿಕ್ಕ ಹುಡುಗಿಯ ಬಗ್ಗೆ ಹೊಂದಿದ್ದ ಪ್ರೀತಿ. ನೋಡುಗರ ಕಣ್ಣಿನಲ್ಲಿ ದೋಷ ಇದ್ದರೆ ನೀವು ಏನು ಮಾಡಲು ಸಾಧ್ಯ? ವೇದಿಕೆಯ ಮೇಲೆ ಸಾರ್ವಜನಿಕವಾಗಿ ಕೆಟ್ಟ ಉದ್ದೇಶದಿಂದ ನಾನು ಅವಳನ್ನು ಏಕೆ ಚುಂಬಿಸಬೇಕು? ಅವಳ ಪೋಷಕರು ಕೂಡ ಅಲ್ಲಿಯೇ ದ್ದರು. ಜನರು ಈ ರೀತಿ ಚರ್ಚೆ ಮಾಡುವಾಗ ನಿಜವಾಗಿಯೂ ಹುಚ್ಚರಾಗುತ್ತಾರೆ. ಏನೂ ಇಲ್ಲದಿದ್ದರೂ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಮಸ್ಯೆಯನ್ನು ಸೃಷ್ಟಿಸಬೇಕಾಗಿದೆ. ಅದಕ್ಕೆ ಹೀಗೆಲ್ಲಾ ಮಾಡುತ್ತಾರೆ" ಎಂದಿರುವ ಹೀಗೆ ಆರೋಪ ಮಾಡುತ್ತಿರುವವರನ್ನು ಮೂರ್ಖರು ಎಂದು ರಾಕೇಶ್ ಬೇಡಿ ಕರೆದಿದ್ದಾರೆ.