ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Peddi Pehelwan Glimpse: ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ರಾಮ್‌ ಚರಣ್‌ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

Peddi Pehelwan Glimpse: ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ ನಟನೆಯ 'ಪೆದ್ದಿ' ಸಿನಿಮಾ ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಪೆದ್ದಿ ಚಿತ್ರದಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸಿದ್ದಾರೆ ಮತ್ತು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಗ್ರಾಮೀಣ ಕ್ರೀಡಾ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಇಂದು ರಾಮ್‌ಚರಣ್‌ಗೆ ಜನುಮದಿನದ ಸಂಭ್ರಮ. ಹೀಗಾಗಿ ಚಿತ್ರತಂಡ ನಟನಿಗೆ ಸರ್‌ಪ್ರೈಸ್‌ ಒಂದನ್ನು ನೀಡಿದೆ.

ʻಪೆದ್ದಿʼ ಹೊಸ ಗ್ಲಿಂಪ್ಸ್ ಔಟ್‌; ನಟನ ರಗಡ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ರಾಮ್‌ ಚರಣ್‌ -

Yashaswi Devadiga
Yashaswi Devadiga Mar 27, 2026 10:51 AM

ಬುಚ್ಚಿಬಾಬು ನಿರ್ದೇಶನದಲ್ಲಿ ರಾಮ್‌ಚರಣ್ (Ram Charan) ನಟನೆಯ 'ಪೆದ್ದಿ' ಸಿನಿಮಾ (Peddi Movie) ತೆರೆಗೆ ಬರಲು ಇನ್ನೊಂದು ತಿಂಗಳು ಬಾಕಿಯಿದೆ. ಪೆದ್ದಿ ಚಿತ್ರದಲ್ಲಿ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸಿದ್ದಾರೆ ಮತ್ತು ಬುಚ್ಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ಈ ಗ್ರಾಮೀಣ ಕ್ರೀಡಾ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ (Peddi Pehelwan Glimpse). ಇಂದು ರಾಮ್‌ಚರಣ್‌ಗೆ ಜನುಮದಿನದ ಸಂಭ್ರಮ. ಹೀಗಾಗಿ ಚಿತ್ರತಂಡ ನಟನಿಗೆ ಸರ್‌ಪ್ರೈಸ್‌ ಒಂದನ್ನು ನೀಡಿದೆ.

ಅತ್ಯಂತ ರಗಡ್‌ ಲುಕ್‌

ರಾಮ ನವಮಿಯ ಶುಭ ಸಂದರ್ಭದಲ್ಲಿ, ರಾಮ್‌ ಚರಣ್‌ ಹುಟ್ಟುಹಬ್ಬದಂದು, ತಯಾರಕರು ರಾಮ್ ಚರಣ್ ಅವರನ್ನು ಹೊಸ ಅವತಾರದಲ್ಲಿ ಪರಿಚಯಿಸಿದ್ದಾರೆ. ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದರು. ತರಬೇತಿ ಪಡೆದ ಕುಸ್ತಿಪಟುವಿನ ರೀತಿ ಅತ್ಯಂತ ರಗಡ್‌ ಆಗಿ ಕಂಡಿದ್ದಾರೆ ನಟ. ಪೆದ್ದಿ ಪೆಹೆಲ್ವಾನ್‌ ಲುಕ್‌ ಕಂಡು ಸಖತ್‌ ಫಿದಾ ಆಗಿದ್ದಾರೆ ಫ್ಯಾನ್ಸ್‌.

ಇದನ್ನೂ ಓದಿ: Ram Charan birthday: ರಾಮ್‌ ಚರಣ್‌ ಬರ್ತ್‌ಡೇ; ಚಿರು ಪುತ್ರನ ಕುರಿತ ಅಪರೂಪದ ಸಂಗತಿಗಳು!

"ನನ್ನ ಆಟ ನನ್ನ ದುರಹಂಕಾರ" ಎಂಬ ಸಂಭಾಷಣೆ ಸಖತ್‌ ಹೈಲೈಟ್‌ ಆಗಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ದಿವ್ಯೆಂದು ಶರ್ಮಾ, ಜಗಪತಿ ಬಾಬು, ಬೋಮನ್ ಇರಾನಿ ಮತ್ತು ಸತ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ವೆಂಕಟ ಸತೀಶ್ ಕಿಲಾರು ನಿರ್ಮಿಸಿದ್ದಾರೆ ಮತ್ತು ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.



ಸಿನಿಮಾ ರಿಲೀಸ್‌ ಯಾವಾಗ?

ಈ ಚಿತ್ರವು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಪ್ರಿಲ್ 30, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ರಾಮ್ ಚರಣ್ ಅವರಿಗೆ ಚಿತ್ರೀಕರಣದ ಸಮಯದಲ್ಲಿ ಆಗಿರುವ ಗಾಯ ಹಾಗೂ ಅದರಿಂದ ರಾಮ್ ಚರಣ್ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ಸಿನಿಮಾದ ಬಿಡುಗಡೆ ಇನ್ನಷ್ಟು ತಡವಾಗುವ ಸಂಭವ ಇದೆ ಎನ್ನಲಾಗಿತ್ತು. ಆದರೀಗ ಎಲ್ಲ ಅಂತ ಕಂತೆಗಳಿಗೆ ಪೂರ್ಣ ವಿರಾಮ ಇಟ್ಟಿದೆ ತಂಡ.

ಹೈದರಾಬಾದ್‌ನ ಗಚಿಬೌಲಿ ಸ್ಟೇಡಿಯಂನಲ್ಲಿ ‘ಪೆದ್ದಿ’ ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ರಾಮ್ ಚರಣ್ ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಆರಂಭದಲ್ಲಿ ಇದು ಸಾಮಾನ್ಯ ಗಾಯ ಎಂದು ಭಾವಿಸಲಾಗಿತ್ತಾದರೂ, ಅವರ ಎಡಗಣ್ಣಿನ ರೆಪ್ಪೆಯ ಭಾಗಕ್ಕೆ ಪೆಟ್ಟಾಗಿದ್ದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು.

ಇದನ್ನೂ ಓದಿ: Ram Charan: ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

ನಿನ್ನೆಯಷ್ಟೇ ರಾಮ್‌ ಚರಣ್‌ ತಮ್ಮ ಫ್ಯಾನ್ಸ್‌ ಭೇಟಿ ಆಗಿದ್ದರು. ಅಯ್ಯಪ್ಪ ಮಾಲೆ ಧರಿಸಿಯೇ ಫ್ಯಾನ್ಸ್‌ ಭೇಟಿ ಆಗಿದ್ದಾರೆ. ನಟನು ತನ್ನ ಕಣ್ಣಿನ ಮೇಲೆ ಬ್ಯಾಂಡೇಜ್ ಧರಿಸಿದ್ದರೂ ಅದರಿಂದ ಯಾವುದೇ ತೊಂದರೆಗೊಳಗಾಗಲಿಲ್ಲ. ಅಭಿಮಾನಿಗಳು ಅವರಿಗೆ ಜಯಕಾರ ಹಾಕುತ್ತಿದ್ದಂತೆ, ಸೆಲ್ಫಿ ವೀಡಿಯೊ ಕ್ಲಿಕ್ಕಿಸಿಕೊಂಡರು.