Rani Serial: ರಾಣಿಗೆ ಅಪ್ಪ ಇಲ್ವಾ? ಈ ಪಾತ್ರಕ್ಕೆ ನಟ ಯಾರು?
Rani Serial: ಕಲರ್ಸ್ ಕನ್ನಡ ಈಗಾಗಲೇ ಕೌಟುಂಬಿಕ ಹಾಗೂ ಮಹಿಳಾ ಪ್ರಧಾನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಹೊಚ್ಚ ಹೊಸ ಧಾರಾವಾಹಿಯೇ 'ರಾಣಿ'. ಅಮ್ಮ ಹಾಗೂ ಮಗಳ ಬಾಂಧವ್ಯದ ಕಥೆ ಬಂದಿದೆ. "ತಾಯಿ ಇದ್ದರೂ ಅನಾಥೆಯಾಗಿ ಜೈಲಿಂದ ಹೊರ ಬರ್ತಿದಾಳೆ ರಾಣಿ. ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ತೀರಲ್ವಾ?" ಅಂತ ಪ್ರಶ್ನೆ ಮಾಡುತ್ತಾ ಪ್ರೋಮೋ ರಿಲೀಸ್ ಮಾಡಲಾಗಿತ್ತು. ರಾಣಿಯ ಅಮ್ಮ ಯಾವುದೋ ಕಾರಣಕ್ಕೆ ಜೈಲು ಸೇರಿದ್ದಾಳೆ.
ರಾಣಿ ಧಾರಾವಾಹಿ -
ಕಲರ್ಸ್ ಕನ್ನಡ (Colors Kannada) ಈಗಾಗಲೇ ಕೌಟುಂಬಿಕ ಹಾಗೂ ಮಹಿಳಾ ಪ್ರಧಾನ ಧಾರಾವಾಹಿಗಳನ್ನು (Serial) ಪ್ರಸಾರ ಮಾಡುತ್ತಿದೆ. ಹೊಚ್ಚ ಹೊಸ ಧಾರಾವಾಹಿಯೇ 'ರಾಣಿ'. ಅಮ್ಮ ಹಾಗೂ ಮಗಳ ಬಾಂಧವ್ಯದ ಕಥೆ ಬಂದಿದೆ. "ತಾಯಿ ಇದ್ದರೂ ಅನಾಥೆಯಾಗಿ ಜೈಲಿಂದ ಹೊರ ಬರ್ತಿದಾಳೆ ರಾಣಿ. ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ತೀರಲ್ವಾ?" ಅಂತ ಪ್ರಶ್ನೆ ಮಾಡುತ್ತಾ ಪ್ರೋಮೋ ರಿಲೀಸ್ ಮಾಡಲಾಗಿತ್ತು.
ಇದನ್ನೂ ಓದಿ: Ramayana Movie: ಲೀಕ್ ಆಯ್ತು ರಣಬೀರ್-ಸಾಯಿ ಪಲ್ಲವಿ ʻರಾಮಾಯಣʼ ಮೂವಿ ಲುಕ್! ವೈರಲ್ ಫೋಟೋಗಳ ಹಿಂದಿನ ಸತ್ಯವಾದ್ರೂ ಏನು?
ರಾಣಿಗೆ ಅಪ್ಪ ಇಲ್ವಾ?
ರಾಣಿಗೆ ಅಪ್ಪ ಇಲ್ವಾ? ಇದ್ದರೆ ಅವನ್ಯಾರು, ಅಪ್ಪನೇ ವಿಲನ್ನಾ? ಏನಿದು ಕಥೆ ಎಂದೆಲ್ಲಾ ವೀಕ್ಷಕರು ಕಮೆಂಟ್ ಮಾಡಿದ್ದರು. ರಾಣಿಯಾಗಿ ಬಾಲಕಿ ಧನ್ವಿ, ಅಮ್ಮನಾಗಿ ಐಶ್ವರ್ಯಾ ಕಾಣಿಸಿಕೊಂಡಿದ್ದಾರೆ. ಇನ್ನು ಅಪ್ಪ ಅರ್ಜುನ್ ಆಗಿ ನಟಿಸುತ್ತಿರುವವರು ಆರವ್ ಸೂರ್ಯ. ಈ ಬಗ್ಗೆ ಮಾಧ್ಯಮವೊಂದರ ಜೊತೆ ಇದಾಗಲೇ ನಟ ಆರವ್ ಮಾತನಾಡಿದ್ದು, ತಮ್ಮ ರೋಲ್ ಬಗ್ಗೆ ತಿಳಿಸಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯ ಜೇನುಗೂಡು’ ಸೀರಿಯಲ್‌ನಲ್ಲಿ ನಾಯಕನಾಗಿ ನಟಿಸಿದ್ದ ಇವರು ಇದೀಗ ಇದರಲ್ಲಿ ರಾಣಿಯ ಅಪ್ಪ ಆಗಿ ಕಾಣಿಸಿಕೊಂಡಿದ್ದಾರೆ. ನನ್ನದು ನೆಗೆಟಿವ್ ಶೇಡ್ ಪಾತ್ರವಾಗಿದೆ. ಇದಾಗಲೇ 25 ಸಂಚಿಕೆಗಳ ಶೂಟಿಂಗ್ ಮುಗಿದಿದೆ ಎಂದಿದ್ದಾರೆ ಆರವ್ ಸೂರ್ಯ.ಈ ಧಾರಾವಾಹಿಯಲ್ಲಿ ಅಪ್ಪನೇ ವಿಲನ್ ಆಗಿದ್ದಾರೆ.
ಸ್ವಪ್ನ ಕೃಷ್ಣ ಸಾರಥ್ಯ
'ರಾಣಿ' ಧಾರಾವಾಹಿಯನ್ನು ನಿರ್ದೇಶಕಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಸ್ವಪ್ನ ಕೃಷ್ಣ ಈ ಧಾರಾವಾಹಿಯನ್ನು ನಿರ್ದೇಶನ ಮಾಡುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಜೈಲಿನಲ್ಲಿ ಇರುವವರನ್ನು ಹಾಗೂ ಅಲ್ಲಿಂದ ಬಂದವರನ್ನು ಸಮಾಜ ಹೇಗೆ ನೋಡುತ್ತದೆ ಅನ್ನೋ ದೃಷ್ಟಿಕೋನ ಈ ಸೀರಿಯಲ್‌ನಲ್ಲಿ ಇದೆ. ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಈಗಿನ ಸಮಾಜಕ್ಕೂ ಅಜಗಜಾಂತರ ವ್ಯತ್ಯಾಸವಿದೆ.
ಇದನ್ನೂ ಓದಿ: Ranveer Singh: ಧುರಂಧರ್ 2ರ ಹೊಸ ಪೋಸ್ಟರ್ ಔಟ್! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ
ಹಗೆತನ, ಸೇಡು, ಜೈಲಿನ ಕಂಬಿಗಳಿಗಿಂತಲೂ ಪ್ರೀತಿಯೇ ಶಕ್ತಿಶಾಲಿ ಎಂಬುದನ್ನು 'ರಾಣಿ' ಧಾರಾವಾಹಿ ಸಾರಲಿದೆ. ಈ ಧಾರಾವಾಹಿಯಲ್ಲಿ ರಾಣಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನೆ ಮಾಡಲಿದೆ. ವೀಕ್ಷಕರನ್ನು ಚರ್ಚೆಗೆ ಒಳಪಡಿಸುತ್ತದೆ. ಮನರಂಜನೆಯ ಜೊತೆಗೆ ಸಮಾಜ, ಅಲ್ಲಿನ ತಾರತಮ್ಯಗಳು, ತಾಯಿ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸಲಾಗುತ್ತಿದೆ.