Ranveer Singh: ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ; ಖುಷ್ ಆದ್ರು ಪ್ರೇಕ್ಷಕರು
Dhurandhar 2 Climax: ನಟ ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಅಭಿಮಾನಿಗಳು ಆದಿತ್ಯ ಧರ್ ನಿರ್ದೇಶನದ ಚಿತ್ರದ ಪ್ರತಿಯೊಂದು ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಎಐ ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ಗಮನ ಸೆಳೆದಿದೆ. ಕ್ಲೈಮ್ಯಾಕ್ಸ್ ಕಥೆಗೆ ಹೆಚ್ಚು ಭಾವನಾತ್ಮಕವಾಗಿ ಹೊಸ ಟಚ್ ಕೊಟ್ಟಿದ್ದಾರೆ.
ಧುರಂಧರ್ 2 ಸಿನಿಮಾ -
ನಟ ರಣವೀರ್ ಸಿಂಗ್ (Ranveer Singh) ಅವರ ಧುರಂಧರ್ 2 (Dhurandhar 2) ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸುತ್ತಿದ್ದು, ಅಭಿಮಾನಿಗಳು ಆದಿತ್ಯ ಧರ್ ನಿರ್ದೇಶನದ ಚಿತ್ರದ ಪ್ರತಿಯೊಂದು ದೃಶ್ಯಗಳನ್ನು ವಿಶ್ಲೇಷಿಸುತ್ತಿದ್ದಾರೆ. ಅಭಿಮಾನಿಯೊಬ್ಬರು ಎಐ (AI) ಮೂಲಕ ‘ಧುರಂಧರ್ 2’ ಚಿತ್ರದ ಕ್ಲೈಮ್ಯಾಕ್ಸ್ ಬದಲಾವಣೆ ಮಾಡಿದ್ದಾರೆ. ಈ ವಿಡಿಯೋ ವ್ಯಾಪಕ ಗಮನ ಸೆಳೆದಿದೆ. ಕ್ಲೈಮ್ಯಾಕ್ಸ್ (Climax) ಕಥೆಗೆ ಹೆಚ್ಚು ಭಾವನಾತ್ಮಕವಾಗಿ ಹೊಸ ಟಚ್ ಕೊಟ್ಟಿದ್ದಾರೆ.
ಧುರಂಧರ 2 ಕ್ಲೈಮ್ಯಾಲ್ಸ್‌ಗೆ AI ಟ್ವಿಸ್ಟ್
‘ಧುರಂಧರ್ 2’ ಸಿನಿಮಾದ ಅಂತ್ಯದಲ್ಲಿ ನಾಯಕ ತನ್ನ ಊರಿಗೆ ಮರಳುತ್ತಾನೆ. ಅಲ್ಲಿ ತಾನಿಲ್ಲದೆಯೂ ತಾಯಿ ಮತ್ತು ತಂಗಿ ನೆಮ್ಮದಿಯ ಜೀವನ ನಡೆಸುತ್ತಿರುವುದನ್ನು ದೂರದಿಂದಲೇ ನೋಡಿ ಮರುಗುತ್ತಾನೆ. ತನ್ನ ಉಪಸ್ಥಿತಿಯು ಅವರ ಶಾಂತಿಯನ್ನು ಕೆಡಿಸಬಹುದು ಎಂದು ಭಾವಿಸುವ ಆತ, ಅಲ್ಲಿಂದ ಗುಟ್ಟಾಗಿ ನಿರ್ಗಮಿಸುತ್ತಾನೆ. ಈ ದೃಶ್ಯವು ಭಾವುಕವಾಗಿದ್ದರೂ, ಅಭಿಮಾನಿಗಳಿಗೆ ಇದು ಸಮಾಧಾನ ನೀಡಿರಲಿಲ್ಲ.
ಇದನ್ನೂ ಓದಿ: Saregamapa Promo : ಬಡವರಿಗೆ ‘ಸರಿಗಮಪ’ ವೇದಿಕೆ ಅಂತ ಟ್ರೋಲ್ ಮಾಡೋರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಪರ್ಯಾಯ ಕ್ಲೈಮ್ಯಾಕ್ಸ್ ಏನು?
ಈಗ ಸೋಷಿಯಲ್ ಮೀಡಿಯಾದಲ್ಲಿ ಎಐ ಮೂಲಕ ಪರ್ಯಾಯ ಕ್ಲೈಮ್ಯಾಕ್ಸ್ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ರಚಿಸಲಾಗಿದೆ. "ಧುರಂಧರ್‌ನಲ್ಲಿ ಜಸ್ಸಿ ತನ್ನ ತಾಯಿಯನ್ನು ಭೇಟಿಯಾಗಲು ಏಕೈಕ ಮಾರ್ಗವೆಂದರೆ ಕೃತಕ ಬುದ್ಧಿಮತ್ತೆ... ಪೂರ್ಣ ವೀಡಿಯೊವನ್ನು ವೀಕ್ಷಿಸಿ" ಎಂಬ ಶೀರ್ಷಿಕೆಯೊಂದಿಗೆ ಅದನ್ನು ಪೋಸ್ಟ್ ಮಾಡಲಾಗಿದೆ.
ಜಸ್ಕಿರತ್ ಹಳ್ಳಿಯ ಹೊಲದಲ್ಲಿ ಒಬ್ಬಂಟಿಯಾಗಿ ನಿಂತಿರುತ್ತಾನೆ. ನಾಯಕ ತಾಯಿಯನ್ನು ನೋಡಿ ಭಾವುಕನಾಗುತ್ತಾನೆ. ತಾಯಿ ಮಗ ಇಬ್ಬರೂ ಬಿಗಿಯಾದ ಅಪ್ಪುಗೆಯನ್ನು ಹಂಚಿಕೊಳ್ಳುವಾಗ ಅತ್ಯಂತ ಭಾವನಾತ್ಮಕ ಕ್ಷಣ ಸಾಕ್ಷಿಯಾಗಿದೆ. ನಂತರ ಇಡೀ ಕುಟುಂಬ ಒಂದಾಗಿ ಗ್ರೂಪ್ ಫೋಟೋ ತೆಗೆಸಿಕೊಳ್ಳುವ ಮೂಲಕ ಸುಖಾಂತ್ಯ ಕಾಣುತ್ತದೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರದ ಫ್ರಾಂಚೈಸಿಯ ಈ ಪರ್ಯಾಯ ಅಂತ್ಯವನ್ನು ಇಷ್ಟಪಡುತ್ತಿದ್ದಾರೆ, ತಮ್ಮ ಪ್ರತಿಕ್ರಿಯೆಗಳು ಮತ್ತು ಮೆಚ್ಚುಗೆಯನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ಪ್ರೇಕ್ಷಕರಿಗೆ ಈ ಕ್ಲೈಮ್ಯಾಕ್ಸ್ನಿಂದ ಭಾವುಕವಾದ ಸಮಾಧಾನ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.
The only way Jassi could meet with his mother in Dhurandhar was AI.. watch the full video 🥺❤️ pic.twitter.com/YZaF70TQXR
— Peaky Balvinder (@peaky_balvinder) March 23, 2026
ಧುರಂಧರ್ 2 ಬಗ್ಗೆ
'ಧುರಂಧರ್ ದಿ ರಿವೆಂಜ್' ಎಂದು ಹೆಸರಿಸಲಾದ ಈ ಚಿತ್ರವು 2025 ರ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರದ ಮುಂದುವರಿದ ಭಾಗವಾಗಿದೆ. ಈ ಚಿತ್ರ ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ರಣವೀರ್ ಜೊತೆಗೆ, ಇದರಲ್ಲಿ ಆರ್ ಮಾಧವನ್, ಸಂಜಯ್ ದತ್, ಸಾರಾ ಅರ್ಜುನ್, ಗೌರವ್ ಗೆರಾ ಮತ್ತು ಅರ್ಜುನ್ ರಾಂಪಾಲ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: Radha Bhagavati Raanav: ಜೈದೇವ್ ಮೇಲೆ ಮಲ್ಲಿಗೆ ಪ್ರೀತಿ ಆಗಿದ್ದೇಗೆ? ಲವ್ ಸೀಕ್ರೆಟ್ ರಿವೀಲ್ ಮಾಡಿದ ನಟಿ ರಾಧಾ
ಈವರೆಗೂ ಭಾರತದಲ್ಲಿ 550 ಕೋಟಿ ರೂ. ಗಳಿಕೆಯಾಗಿದ್ದರೆ, ವಿದೇಶದಿಂದ 211 ಕೋಟಿ ರೂ. ಹರಿದು ಬಂದಿದೆ. ಭಾರತದಲ್ಲಿ ಈ ಚಿತ್ರವು ಮೊದಲ ದಿನ ಪೇಯ್ಡ್ ಪ್ರಿವ್ಯೂಗಳ ಗಳಿಕೆಯೂ ಸೇರಿದಂತೆ 145 ಕೋಟಿ ರೂ. ಬಾಚಿಕೊಂಡಿದೆ. ಎರಡನೇ ದಿನ 83 ಕೋಟಿ ರೂ. ಬಂದರೆ, ಮೂರನೇ ದಿನ 117 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ. ನಾಲ್ಕನೇ ದಿನ 121 ಕೋಟಿ ರೂ. ಗಳಿಕೆ ಆಗಿದೆ. 4 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಖ್ಯಾತಿಗೆ ಧುರಂಧರ್ 2 ಪಾತ್ರವಾಗಿದೆ.