ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕದಲ್ಲಿ 'ಧುರಂಧರ್ 2' ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? 'ಬಾಹುಬಲಿ 2' ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬೇಕು?

ಧುರಂಧರ್‌ 2 ಸಿನಿಮಾ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಬಿಡುಗಡೆಯಾದ ಕೇವಲ 18 ದಿನಗಳಲ್ಲಿ ರಾಜ್ಯಾದ್ಯಂತ ದಾಖಲೆ ಮೊತ್ತ ಗಳಿಸುವ ಮೂಲಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಪರಭಾಷಾ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಕರ್ನಾಟಕದಲ್ಲಿ 'ಧುರಂಧರ್ 2' ಸುನಾಮಿ; ಸ್ಯಾಂಡಲ್‌ವುಡ್‌ನಲ್ಲಿ ರಣವೀರ್ ಅಬ್ಬರ

-

Avinash GR
Avinash GR Apr 7, 2026 8:08 AM

ಕರ್ನಾಟಕವು ಪರಭಾಷಾ ಸಿನಿಮಾಗಳಿಗೆ ದೊಡ್ಡ ಮಾರುಕಟ್ಟೆಯನ್ನು ಒದಗಿಸಲು ಶುರು ಮಾಡಿ, ಸಾಕಷ್ಟು ವರ್ಷಗಳೇ ಆಗಿವೆ. ಬೇರೆ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಕರ್ನಾಟಕದಿಂದ ಬರುವ ಗಳಿಕೆ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡೇ ತಮ್ಮ ಸಿನಿಮಾಗಳನ್ನು ರಿಲೀಸ್‌ ಮಾಡುತ್ತಾರೆ. ಸದ್ಯ ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌ 2ʼ ಸಿನಿಮಾವು ಅಂಥದ್ದೊಂದು ದೊಡ್ಡ ಮ್ಯಾಜಿಕ್‌ ಮಾಡಿದೆ. ಕರ್ನಾಟಕದಲ್ಲಿ ಆಗಲೇ ಚಿತ್ರದ ಗಳಿಕೆಯು 120 ಕೋಟಿ ರೂ. ದಾಟಿದೆ.

18 ದಿನಗಳಿಗೆ 121 ಕೋಟಿ ರೂ.

ಆದಿತ್ಯ ಧರ್‌ ನಿರ್ದೇಶನದ ಧುರಂದರ್‌ ದಿ ರಿವೆಂಜ್‌ ಸಿನಿಮಾವು ವಿಶ್ವಾದ್ಯಂತ 18 ದಿನಗಳಿಗೆ 1622 ಕೋಟಿ ರೂ. ಬಾಚಿಕೊಂಡಿದೆ. ಭಾರತದಲ್ಲೇ ಈ ಸಿನಿಮಾದ ಗಳಿಕೆಯು 1200 ಕೋಟಿ ರೂ. ದಾಟಿದೆ ಎಂಬ ಮಾಹಿತಿಗಳಿವೆ. ಅಂದಹಾಗೆ, ಈ ಸಾವಿರಾರು ಕೋಟಿ ಗಳಿಕೆಯಲ್ಲಿ ಕರ್ನಾಟಕದಿಂದಲೂ ದೊಡ್ಡ ಕೊಡುಗೆಯು ಧುರಂಧರ್‌ 2 ಸಿನಿಮಾಗೆ ಸಿಕ್ಕಿದೆ. 18 ದಿನಗಳಲ್ಲಿ ಕರ್ನಾಟಕದಿಂದಲೇ ಈ ಚಿತ್ರಕ್ಕೆ 121 ಕೋಟಿ ರೂ. ಸಿಕ್ಕಿದೆ. ಇದೇ ಪ್ರಮಾಣದಲ್ಲಿ ಗಳಿಕೆ ಆಗುತ್ತಿದ್ದರೆ, ಕೆಲವೇ ದಿನಗಳಲ್ಲಿ ಈ ಗಳಿಕೆಯನ ಮೊತ್ತ 150 ಕೋಟಿ ರೂ. ತಲುಪಿದರೆ ಅಚ್ಚರಿ ಇಲ್ಲ.

Rajinikanth: ಪ್ರತಿಯೊಬ್ಬ ಭಾರತೀಯ ನೋಡಬೇಕಾದ ಸಿನಿಮಾ! ಧುರಂಧರ್‌ ಸಿನಿಮಾ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ಕಲೆಕ್ಷನ್‌ ಕುರಿತ ಟ್ವೀಟ್‌



ಬಾಹುಬಲಿ 2 ದಾಖಲೆ ಮುರಿಯಲು ಸಜ್ಜು

ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪರಭಾಷೆಯ ಸಿನಿಮಾ ಎಂಬ ಖ್ಯಾತಿಯು ಬಾಹುಬಲಿ 2 ಸಿನಿಮಾಗೆ ಇದೆ. ಈ ಚಿತ್ರವು ಸುಮಾರು 130 ಕೋಟಿ ರೂ. ಗಳನ್ನು ಕರ್ನಾಟಕದಿಂದಲೇ ಬಾಚಿಕೊಂಡಿದೆ ಎಂಬ ಮಾಹಿತಿ ಇದೆ. ಅದನ್ನು ಬ್ರೇಕ್ ಮಾಡಲು ಧುರಂಧರ್‌ 2 ಚಿತ್ರಕ್ಕೆ ಬೇಕಿರುವುದು ಈಗ 9 ಕೋಟಿ ರೂ. ಗಳು ಮಾತ್ರ. ಇನ್ನೂ ಕೆಲವೇ ದಿನಗಳಲ್ಲಿ ಆ ದಾಖಲೆ ನೆರವೇರುವುದು ಖಚಿತ. ಆ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಪರಭಾಷಾ ಸಿನಿಮಾ ಎಂಬ ಪಟ್ಟವು ರಣವೀರ್‌ ಸಿಂಗ್‌ ಅವರ ಧುರಂಧರ್‌ 2 ಸಿನಿಮಾಗೆ ಸಿಗಲಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 5 ಕನ್ನಡೇತರ ಚಿತ್ರಗಳು

  1. ಬಾಹುಬಲಿ 2 – 130 ಕೋಟಿ ರೂ.
  2. ಧುರಂಧರ್ 2 – 121 ಕೋಟಿ ರೂ. (18 ದಿನಗಳು)
  3. ಪುಷ್ಪ 2 – 95.3 ಕೋಟಿ ರೂ.
  4. ಬಾಹುಬಲಿ 1 – 85 ಕೋಟಿ ರೂ.
  5. ಧುರಂಧರ್ – 82 ಕೋಟಿ ರೂ.