ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

Dhurandhar The Revenge Review: ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ. ಭಾರತೀಯ ಸೈನಿಕನಾಗಬೇಕಿದ್ದ ಜಸ್ಕೀರತ್ ಸಿಂಗ್, ಹಮ್ಝಾ ಅಲಿ ಮಝಾರಿಯಾಗಿ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಮಟ್ಟಹಾಕುವ ರೋಚಕ ಕಥೆಯೇ ಈ ಸಿನಿಮಾ.

Ranveer Singh: ʻಧುರಂಧರ್‌ 2ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

-

Avinash GR
Avinash GR Mar 19, 2026 12:42 PM

ಪ್ರಮೋದ್‌ ಮೋಹನ್‌ ಹೆಗಡೆ

ಗಲ್ಲು ಶಿಕ್ಷೆ ಪಡೆದು ಮರಣಹೊಂದಬೇಕಾಗಿದ್ದ ಪಂಜಾಬ್‌ನ ಸಣ್ಣ ಹಳ್ಳಿಯ ಹುಡುಗನೊಬ್ಬ ಪಾಕಿಸ್ತಾನದ ಒಳಗೆ ಹೋಗಿ ಅಲ್ಲಿನ ಆತಂಕವಾದಿ ಗುಂಪುಗಳನ್ನು ಸರ್ವನಾಶ ಮಾಡುವ ಕೆಲಸದಲ್ಲಿ ತೊಡಗುವ ರೋಚಕ ಕಥೆ ಧುರಂಧರ್. ಈಗಾಗಲೇ ಮೊದಲ ಭಾಗದಲ್ಲಿ ಹಮ್ಝಾ ಅಲಿ ಮಝಾರಿ ಆಗಿ ಪಾಕಿಸ್ತಾನದೊಳಗೆ ಬಂದಿರುವ ಜಸ್ಕೀರತ್ ಸಿಂಗ್ ರಾಂಗಿ ಹೇಗೆ ರೆಹಮಾನ್ ಡಕೈತ್ ಎಂಬ ಗ್ಯಾಂಗ್‌ಸ್ಟರ್‌ನ ಸಾಯಿಸಿ ಲ್ಯಾರಿ ಮೇಲೆ ತನ್ನ ಹುಕೂಮತ್ ಚಾಲಾಯಿಸಲು ಸಿದ್ಧನಾಗಿದ್ದಾನೆ ಎನ್ನುವುದನ್ನು ತೋರಿಸಲಾಗಿದೆ. ಆದರೆ, ಅವನ ಪಯಣ ಇನ್ನೂ ದೊಡ್ಡದು. ಮೇಜರ್ ಇಕ್ಬಾಲ್, ಭುಟ್ಟೊವಿ, ಎಸ್ಪಿ ಅಸ್ಲಂ ಹೀಗೆ ಅನೇಕರನ್ನು ಮಟ್ಟ ಹಾಕಬೇಕಿದೆ. ಆ ದಾರಿಯ ಯಾವುದೂ ಸುಲಭದ್ದಲ್ಲ.

ʼಧುರಂಧರ್: ದಿ ರಿವೆಂಜ್ʼ ಶುರುವಾಗುವುದೇ ಭಾರತ ಸೇನೆ ಸೇರಬೇಕು ಎಂಬ ಆಸೆ ಹೊತ್ತು ತಯಾರಿ ನಡೆಸಿ ಆದರೆ ಕುಟುಂಬದವರಿಗಾಗಿ ಜಸ್ಕೀರತ್ ಎಂಬ ಯುವಕ ಹೇಗೆ ʻರಿವೆಂಜ್ʼ ದಾರಿಯಲ್ಲಿ ನಡೆಯುತ್ತಾನೆ ಎನ್ನುವುದನ್ನು ಅನಾವರಣ ಮಾಡುವ ಮೂಲಕ. ಮೊದಲ ಕೆಲವು ನಿಮಿಷಗಳಲ್ಲೇ ಸಿನಿಮಾ ತನ್ನೊಳಗೆ ಸಳೆದುಕೊಂಡುಬಿಡುತ್ತದೆ. ಅಲ್ಲಿಂದ ಶುರುವಾಗುವ ಕಥೆ, ಅವನು ತನ್ನ ಸರ್ವಸ್ವವನ್ನು ಬಿಟ್ಟು ಹೇಗೆ ಹೊಸ ಹೆಸರು, ಪರಿಚಯದೊಂದಿಗೆ ಶತ್ರು ದೇಶದೊಳಗೆ ಸ್ಪೈ ಆಗಿ ಕೆಲಸ ಮಾಡುತ್ತಾನೆ ಎನ್ನುವುದನ್ನು ತೋರಿಸುತ್ತದೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

ಧುರಂಧರ್‌ 2 ಚಿತ್ರದ ಕಥೆ ಏನು?

ಭಾರತದಲ್ಲಿ ಯಾವುದೇ ಆತಂಕವಾದಿ ಆಕ್ರಮಣ ನಡೆದಾಗ ಅದು ಇಲ್ಲಿನ ಜನರ ಮೇಲೆ ಹೇಗೆ ಪರಿಣಾಮ ಬೀರಿತು, ಬಳಿಕ ಭಾರತ ಅದಕ್ಕೆ ಹೇಗೆ ಪ್ರತಿಕ್ರಿಯಿಸಿತು ಎನ್ನುವುದರ ಬಗ್ಗೆ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆದರೆ, ಧುರಂಧರ್ 2 ಏಕೆ ವಿಭಿನ್ನ ಎಂದರೆ, ಈ ಇಡೀ ಸಂದರ್ಭವನ್ನು ಪಾಕಿಸ್ತಾನದ ದೇಶದೊಳಗೆ ನಿಂತು ಆ ದೃಷ್ಟಿಕೋನದಲ್ಲಿ ತೋರಿಸುತ್ತದೆ. ನಿರ್ದೇಶಕ ಹಾಗೂ ಬರಹಗಾರ ಆದಿತ್ಯ ಧರ್ ಮೊದಲು ಗೆದ್ದಿದ್ದು ಇಲ್ಲಿಯೇ! ಕಥೆಯ ದೃಷ್ಟಿಕೋನವನ್ನು ಬದಲಾಯಿಸಿ ಹೇಳಿದಾಗ ಅದು ಇನ್ನಷ್ಟು ವಿಶೇಷವಾಗುತ್ತದೆ. ಎರಡನೇಯದಾಗಿ ಚಿತ್ರಕ್ಕೆ ಬೇಕಾದ ಸಶಕ್ತ ಚಿತ್ರಕಥೆ ಇದರಲ್ಲಿದೆ. ಯಾವ ಸಂದರ್ಭಕ್ಕೆ ಯಾವ ವಿಷಯ ಹೇಳಬೇಕು, ಹೇಗೆ ಹೇಳಬೇಕು ಎನ್ನುವುದರಲ್ಲಿ ಆದಿತ್ಯ ಧರ್ ಪ್ರೋ ಆಗಿದ್ದಾರೆ.

Akhanda 2 Box Office Collection: ಡೆವಿಲ್‌, ಧುರಂಧರ್‌ ನಡುವೆಯೂ ಅಬ್ಬರಿಸಿದ 'ಅಖಂಡ 2' ! ಬಾಲಯ್ಯ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು?

ಸಣ್ಣ ಉದಾಹರಣೆ ಹೇಳುವುದಾದರೆ, ಯಾವುದೇ ದೇಶದ ಯಾವುದೇ ಹೊಸ ನಡೆ ಇನ್ನೊಂದು ದೇಶದ ಮೇಲೆ ಪ್ರಭಾವ ಬಿದ್ದೇ ಬೀರುತ್ತದೆ. ಭಾರತದಲ್ಲಿ ನೋಟ್ ಬ್ಯಾನ್ ಆದಾಗ ಪಾಕಿಸ್ತಾನದಲ್ಲಿ ಏನೆಲ್ಲ ಆಗಿರಬಹುದು ಎಂಬುದನ್ನು ತೆರೆಯ ಮೇಲೆ ತೋರಿಸುವುದು ಜಾಣತನ. ಕೆಲವು ದೃಶ್ಯಗಳಲ್ಲಿ ನೈಜ ಘಟನೆಗಳನ್ನು ಯಥಾವತ್ತಾಗಿ ತೋರಿಸಲಾಗಿದೆ. ಇದು ಬಹಳ ಅಚ್ಚುಕಟ್ಟಾಗಿ ಮಾಡಿದ್ದರೂ, ಇಡೀ ಸಿನಿಮಾ ಕಾಲ್ಪನಿಕ ಕಥಾವಸ್ತು ಎನ್ನುವುದನ್ನು ಬಿಂಬಿಸುತ್ತಾ ಸಾಗುವಾಗ ಇದನ್ನು ಅದೇ ರೀತಿ ಸೂಚ್ಯವಾಗಿ ಹೇಳಿದ್ದರೆ ಚಿತ್ರವಾಗಿ ಇನ್ನೂ ಗಮನ ಸೆಳೆಯಬಹುದಿತ್ತು. ಈ ಕಥೆಯ ಸ್ಕೇಲ್ ದೊಡ್ಡದು. ಹಮ್ಝಾ ರಾಜ್ಯಭಾರ ಶುರು ಮಾಡಿದ ಮೇಲೂ ಟೆರರಿಸ್ಟ್ ಆಕ್ಟಿವಿಟಿ ತಡೆಯುವುದು ಸುಲಭದ ಕೆಲಸ ವಾಗಿರುವುದಿಲ್ಲ. ಹಮ್ಝಾಗೆ ಮಾಡಲು ಬಹಳ ಕೆಲಸಗಳಿವೆ. ಕಾಲ ಸಾಕಷ್ಟು ಬೇಕು, ಎದುರಾಗುವ ಜನರು ಸಾಕಷ್ಟಿದ್ದಾರೆ. ಈ ಎಲ್ಲ ಹಂತಗಳನ್ನು ಹೇಳಲು ನಾಲ್ಕು ಗಂಟೆ ಕೂಡ ಕಡಿಮೆ ಅನಿಸುತ್ತದೆ.

ವಿಸ್ತಾರವಾದ ಕಥೆ ಆಗಿರುವುದರಿಂದ ವೇಗವಾಗಿ ಹೇಳಲಾಗಿದೆ. ಮೊದಲ ಭಾಗದಲ್ಲಿ ಎಲ್ಲ ಪಾತ್ರಗಳನ್ನು ಎಸ್ಟಾಬ್ಲಿಶ್ ಮಾಡಲು ಹಾಗೂ ವಾತಾವಣವನ್ನು ಪರಿಚಯಿಸಲು ಸಮಯ ತೆಗೆದುಕೊಳ್ಳುತ್ತಾರೆ. ಈ ಚಿತ್ರದಲ್ಲಿಎಲ್ಲವೂ ಪಟ ಪಟ ಸಾಗುತ್ತದೆ. ಇದು ಇನ್ನೂ ಸಾವಧಾನದಿಂದ ಹೇಳಿದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತಿತ್ತು. ಆದರೆ, ಆಗ ವೆಬ್ ಸೀರೀಸ್ ಮಾಡಬೇಕಾಗಿತ್ತು. ಕೆಲವು ಟ್ವಿಸ್ಟ್ಗಳು ಬಹಳ ಖುಷಿ ಕೊಡುತ್ತವೆ. ಯಾವುದೇ ಸಿನಿಮಾ ಆಪ್ತವಾಗಬೇಕಾದರೆ ಆ ಚಿತ್ರದ ಪಾತ್ರ ಇಷ್ಟವಾಗಬೇಕು. ಇಲ್ಲಿ ಆ ಕೆಲಸ ಆಗಿದೆ. ಇಡೀ ಸಿನಿಮಾದಲ್ಲಿ ರಾಜಕೀಯ, ಯುದ್ಧ, ಟೆರರಿಸಂ, ವೈಲೆನ್ಸ್ ಎಲ್ಲವೂ ಇದ್ದರೂ ಹಮ್ಝಾ ಎಂಬ ಪಾತ್ರದ ಕಥೆಯಿದು. ಹೀಗಾಗಿ ಸಿನಿಮಾ ಇನ್ನಷ್ಟು ಅಪ್ತವಾಗುತ್ತದೆ. ಇನ್ನೂ ಕೆಲವು ವಿಷಯಗಳನ್ನು ಸಿನಿಮಾದಲ್ಲಿ ನೋಡಿ ಅನುಭವಿಸಬೇಕು. ಅದನ್ನು ಹೇಳಿದರೆ ಸ್ಪಾಯ್ಲರ್ ಕೊಟ್ಟಂತಾಗುತ್ತದೆ.

ರಣʻವೀರʼನ ಆರ್ಭಟ

ಮೊದಲ ಚಿತ್ರದಲ್ಲಿ ಎಲ್ಲ ಭಾವನೆಗಳನ್ನು ತನ್ನೊಳಗೆ ಇಟ್ಟುಕೊಂಡು ಸೈಲೆಂಟ್ ಅಗಿದ್ದ ಹಮ್ಝಾ ಈ ಚಿತ್ರದಲ್ಲಿ ಬ್ರಿಲಿಯಂಟ್ ಆಗಿದ್ದಾರೆ. ಮೊದಲ ಕೆಲವು ನಿಮಿಷಗಳಲ್ಲಿ ಬರುವ ಆಕ್ಷನ್ ಹಾಗೂ ಎಮೊಷನಲ್ ಸನ್ನಿವೇಶದಲ್ಲೇ ರಣವೀರ್‌ಗೆ ಅದ್ಭುತ ನಟನೆಗೆ ನೀಡಬಹುದಾದ ಎಲ್ಲ ಬಿರುದುಗಳನ್ನು ನೀಡಬಹುದು. ಇನ್ನು ಸಿನಿಮಾದುದ್ದಕ್ಕೂ ಸಿಗುವುದೆಲ್ಲವೂ ಅದಕ್ಕೆ ಬೋನಸ್ ಹೊರತು ಕಡಿಮೆ ಏನೂ ಇಲ್ಲ. ಪ್ರತಿ ಫ್ರೇಮ್ ಅಲ್ಲು ತಾನೆಂಥ ಪ್ರತಿಭಾವಂತ ಎನ್ನುವುದನ್ನು ಸಾಬೀತು ಮಾಡುತ್ತಾರೆ ರಣವೀರ್. ಅಷ್ಟೇ ಅದ್ಭುತವಾಗಿ ಅರ್ಜುನ್ ರಾಮ್ಪಾಲ್, ಮಾಧವನ್, ಸಂಜಯ್ ದತ್, ರಾಕೇಶ್ ಬೇಡಿ, ಗೌರವ್ ಗೇರಾ, ದಾನಿಶ್, ಪಾಂಡೋರ್, ಸಾರಾ ಅರ್ಜುನ್ ನಟಿಸಿದ್ದಾರೆ. ಪ್ರತಿಯೊಬ್ಬರೂ ʻನಾನು ಕೂಡ ಬೆಸ್ಟ್ʼ ಎನ್ನುವುದನ್ನು ಸಾಬೀತು ಮಾಡುವಂತೆ ನಟಿಸಿದ್ದಾರೆ.

ಧುರಂಧರ್‌ 2 ಸಿನಿಮಾ ವಿಮರ್ಶೆ



ಈ ಸಿನಿಮಾದ ತಾಂತ್ರಿಕ ಶಕ್ತಿ ಹೇಗಿದೆ?

ಎಲ್ಲದಕ್ಕೂ ಪೂರಕವಾಗಿ ಕೆಲಸ ಮಾಡಿರುವುದು ಚಿತ್ರದ ತಾಂತ್ರಿಕ ವರ್ಗ. ಶಾಶ್ವತ ಸಚ್ದೇವ್ ಸಂಗೀತ ಈ ಚಿತ್ರದಲ್ಲೂ ಬಹಳ ಕಾಲ ನೆನಪಿನಲ್ಲಿ ಇರುವಂತೆ ಹಾಗೂ ಬಹಳ ಸಮಯದ ನಂತರ ಅದ್ಭುತ ಆಲ್ಬಂ ಕೇಳೀದ ಅನುಭವ ನೀಡುತ್ತದೆ. ವಿಕಾಶ್ ಛಾಯಾಗ್ರಹಣ ಹಾಗೂ ಶಿವಕುಮಾರ್ ಸಂಕಲನದ ಮೂಲಕ ಪ್ರತಿ ಫ್ರೇಮ್ ಅಲ್ಲೂ ಕುತೂಹಲ ಹುಟ್ಟಿಸಿ ಹಾಗೂ ವಾವ್ ಎನಿಸುವ ದೃಶ್ಯಗಳನ್ನು ಕಟ್ಟಿಕೊಡಲಾಗಿದೆ. ವೇಗವಾಗಿ ಸಾಗುವುದರಿಂದ ಎಲ್ಲಿಯೂ ಒಂದು ಕ್ಷಣ ಬೋರ್ ಆಗುವುದಿಲ್ಲ, ಮುಂದೇನು ಎಂಬ ಕುತೂಹಲ ಹುಟ್ಟಿಸುತ್ತಲೇ ಸಾಗುತ್ತದೆ.

Movie: ಧುರಂಧರ್‌: ದಿ ರಿವೆಂಜ್‌
Release Date: ಮಾ.19, 2026
Language: ಹಿಂದಿ
Genre: ಸಸ್ಪೆನ್ಸ್‌, ಥ್ರಿಲ್ಲರ್‌, ಆಕ್ಷನ್‌, ಡ್ರಾಮಾ
Director: ಆದಿತ್ಯ ಧರ್
Cast: ರಣವೀರ್‌ ಸಿಂಗ್‌, ಸಾರಾ ಅರ್ಜುನ್‌, ಮಾಧವನ್‌, ಅರ್ಜುನ್‌ ರಾಮ್‌ಪಾಲ್‌, ಸಂಜಯ್‌ ದತ್‌, ರಾಕೇಶ್‌ ಬೇಡಿ
Duration: 229 ನಿಮಿಷ
Rating: 4/5