ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

K 47 Movie: ಕಿಚ್ಚ ಸುದೀಪ್‌ ನಟನೆಯ ʼಕೆ 47ʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

Kichcha Sudeepa: ಕಿಚ್ಚ ಸುದೀಪ್‌ ಸೆಪ್ಟೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಮಹತ್ವದ ಸುದ್ದಿಗೋಷ್ಠಿ ನಡೆಸಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ʼಕೆ 47' ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ.

ಕಿಚ್ಚ ಸುದೀಪ್‌ ನಟನೆಯ ʼಕೆ 47ʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

-

Ramesh B Ramesh B Sep 1, 2025 3:49 PM

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ನಿರೂಪಕ ಕಿಚ್ಚ ಸುದೀಪ್ (Kichcha Sudeepa) ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭದ ದಿನಾಂಕವನ್ನು ಈಗಾಗಲೇ ಸುದೀಪ್‌ ಘೋಷಿಸಿದ್ದಾರೆ. ಸೆಪ್ಟೆಂಬರ್‌ 2ರಂದು ಹುಟ್ಟುಹಬ್ಬ ಆಚರಿಸಲಿರುವ ಅವರು ಸೆಪ್ಟೆಂಬರ್‌ 1ರಂದು ಸುದ್ದಿಗೋಷ್ಠಿ ನಡೆಸಿ ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿರುವ ʼಕೆ 47ʼ (K 47 Movie) ಸಿನಿಮಾದ ರಿಲೀಸ್‌ ಡೇಟ್‌ ಪ್ರಕಟಿಸಿದ್ದಾರೆ. ದರ್ಶನ್‌ ನಟನೆಯ ‘ಡೆವಿಲ್’ ಹಾಗೂ ಶಿವ ರಾಜ್‌ಕುಮಾರ್‌-ಉಪೇಂದ್ರ-ರಾಜ್‌ ಬಿ. ಶೆಟ್ಟಿ ಕಾಂಬಿನೇಷನ್‌ನ ‘45’ ಚಿತ್ರದ ಜತೆ ಈ ಸಿನಿಮಾ ಕ್ಲ್ಯಾಶ್ ಆಗಲಿದೆ.

‘ʼನಾವು ಅಂದುಕೊಂಡಂತೆ ವೇಗವಾಗಿ ಶೂಟಿಂಗ್ ಮಾಡುತ್ತಿದ್ದೇವೆ. ಈಗಾಗಲೇ ಸಿನಿಮಾದ ಶೇ. 60ರಷ್ಟು ಶೂಟ್ ಪೂರ್ಣಗೊಂಡಿದೆ. ಅಕ್ಟೋಬರ್ ವೇಳೆಗೆ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದೆ. ನವೆಂಬರ್​​ನಲ್ಲಿ​ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯಲಿದ್ದು, ಇದಾದ ಬಳಿಕ ಅನೂಪ್‌ ಭಂಡಾರಿ ಜತೆಗಿನ ʼಬಿಲ್ಲ ರಂಗ ಬಾಷʼ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದೇನೆ. ಕ್ರಿಸ್​ಮಸ್​ಗೆ ʼಕೆ 47ʼ ಬಂದೇ ಬರುತ್ತದೆ’' ಎಂದು ಸುದೀಪ್ ಹೇಳಿದರು. ವಿಶೇಷ ಎಂದರೆ ʼಕೆ 47ʼ ಚಿತ್ರದ ಟೈಟಲ್‌ ಮತ್ತು ಫಸ್ಟ್‌ ಲುಕ್‌ ಟೀಸರ್‌ ಸೆಪ್ಟೆಂಬರ್‌ 1ರ ಸಂಜೆ 7.02 ಗಂಟೆಗೆ ಹೊರಬೀಳಲಿದೆ. ಈ ಚಿತ್ರವನ್ನು ವಿಜಯ್‌ ಕಾರ್ತಿಕೇಯ ನಿರ್ದೇಶಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Billa Ranga Baasha: ಸುದೀಪ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಈ ದಿನದಂದು ಹೊರ ಬೀಳಲಿದೆ ʼಬಿಲ್ಲ ರಂಗ ಭಾಷʼದ ಫಸ್ಟ್‌ ಲುಕ್‌ ಪೋಸ್ಟರ್‌



ಬರ್ತ್‌ ಡೇ ಸೆಲೆಬ್ರೇಷನ್‌ ಬಗ್ಗೆ ಹೇಳಿದ್ದೇನು?

ಇದೇ ವೇಳೆ ತಮ್ಮ ಹುಟ್ಟುಹಬ್ಬ ಆಚರಣೆ ಬಗ್ಗೆ ಸುದೀಪ್‌ ಮಾಹಿತಿ ನೀಡಿದರು. ಸೆಪ್ಟೆಂಬರ್‌ 1ರ ಮಧ್ಯ ರಾತ್ರಿ ಬೆಂಗಳೂರಿನ ನಂದಿ ಲಿಂಕ್​ ಗ್ರೌಂಡ್ಸ್​​ನಲ್ಲಿ ಸೆಲೆಬ್ರೇಷನ್ ಇರಲಿದೆ ಎಂದು ತಿಳಿಸಿದರು. ʼʼಸದ್ಯಕ್ಕೆ ರಾಜಕೀಯಕ್ಕೆ ಬರುವ ಯೋಚನ, ಯೋಜನೆ ಇಲ್ಲ. ಆದರೆ ಆಗಾಗ ಯೋಚನೆ ಬರುವ ಹಾಗೆ ಮಾಡುತ್ತಿರುತ್ತಾರೆ ಕೆಲವರು’ʼ ಎಂದು ಹೇಳಿದರು.

ಬಿಗ್‌ ಬಾಸ್‌ ಶೋ ಯಾವಾಗ ಆರಂಭ?

ಆಗಸ್ಟ್ 31ರಂದು ಮೈಸೂರಿಲ್ಲಿ ಆಯೋಜಿಸಿದ್ದ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಹುಟ್ಟುಹಬ್ಬದ‌ ಕಾರ್ಯಕ್ರಮದಲ್ಲಿ ಸುದೀಪ್‌ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ʼ‘ಶೀಘ್ರವೇ ತೆರೆ ಮೇಲೆ ಬರಲಿದ್ದೇನೆ. ಸೆಪ್ಟೆಂಬರ್ 28ರಿಂದ ಕಿರುತೆರೆಗೆ ಬರಲಿದ್ದೇನೆ. ಆಶೀರ್ವಾದ ಮಾಡಿʼ’ ಎಂದರು. ಆ ಮೂಲಕ ಸೆಪ್ಟೆಂಬರ್‌ 28ರಂದು ಬಿಗ್‌ ಬಾಸ್‌ ಆರಂಭವಾಗುವ ಸೂಚನೆ ನೀಡಿದರು. ಜತೆಗೆ ತಮ್ಮ ಮುಂಬರುವ ಚಿತ್ರ ಈ ವರ್ಷವೇ ತೆರೆಗೆ ಬರಲಿದೆ ಎನ್ನುವ ಗುಟ್ಟನ್ನೂ ಬಿಟ್ಟು ಕೊಟ್ಟರು. ಈ ಸುದ್ದಿ ತಿಳಿದು ಅವರ ಫ್ಯಾನ್ಸ್‌ ಸಂತಸಗೊಂಡಿದ್ದು ಮತ್ತೆ ಸುದೀಪ್‌ ಅವರನ್ನು ಕಿರುತೆರೆ, ಹಿರಿತೆರೆಯಲ್ಲಿ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಸೆಪ್ಟೆಂಬರ್‌ 2ರಂದು ಸುದೀಪ್‌ ನಟನೆಯ ಬಹುನಿರೀಕ್ಷಿತ ಚಿತ್ರ ʼಬಿಲ್ಲ ರಂಗ ಭಾಷʼದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡುವುದಾಗಿ ನಿರ್ದೇಶಕ ಅನೂಪ್‌ ಭಂಡಾರಿ ಸೋಶಿಯಲ್‌ ಮೀಡಿಯಾ ಮೂಲಕ ಪ್ರಕಟಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಬಾರಿಯ ಸುದೀಪ್‌ ಬರ್ತ್‌ಡೇ ವಿಶೇಷವಾಗಿರಲಿದೆ.