ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rishab Shetty: ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!

Hombale Films: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಪೋಸ್ಟ್‌ ಬಂದಿದೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ "ಚಾಪ್ಟರ್ 2" ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.

ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್?

ರಿಷಬ್‌ ಶೆಟ್ಟಿ -

Yashaswi Devadiga
Yashaswi Devadiga Mar 20, 2026 11:00 AM

ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಪೋಸ್ಟ್‌ ಬಂದಿದೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ (Hombale Films) ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ "ಚಾಪ್ಟರ್ 2" ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಸಾಕಷ್ಟು ಚರ್ಚೆಗಳು ಆಗುತ್ತಿವೆ.

ಇದನ್ನೂ ಓದಿ: Amruthadhaare Serial: ಲಕ್ಷ್ಮೀಕಾಂತನಿಗೆ ಸಿಕ್ಕಿದ್ಯಾ ಕೇಡಿ ಕುತಂತ್ರದ ಸುಳಿವು?

ಮತ್ತೊಂದು ಸಿನಿಮಾ ಆರಂಭ

ರಿಷಬ್ ಶೆಟ್ಟಿ ಅವರು ಸಾಕಷ್ಟು ಜನಪ್ರಿಯತೆ ಪಡದಿದ್ದು ‘ಕಾಂತಾರ’ ಸಿನಿಮಾ ಮೂಲಕ. ಆ ಬಳಿಕ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮಾಡಿದರು. ಈ ಚಿತ್ರಕ್ಕೆ ಎರಡನೇ ಚಾಪ್ಟರ್ ಬರಬೇಕಿತ್ತು. ಆ ಬಗ್ಗೆ ಚಾಪ್ಟರ್ 1 ಅಂತ್ಯದಲ್ಲಿ ಘೋಷಣೆ ಆಗಿತ್ತು.

'ಕಾಂತಾರ ಚಾಪ್ಟರ್ 1' ಮೆಗಾ ಸಕ್ಸಸ್ ಕಂಡ ಬಳಿಕ ತೆಲುಗು ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಶುರುವಾಗಿದೆ ಎನ್ನುವಾಗಲೇ ರಿಷಬ್ ಶೆಟ್ಟಿ ಮತ್ತೊಂದು ಸಿನಿಮಾವನ್ನು ಆರಂಭ ಮಾಡಿದ್ದಾರೆ.

ಇತ್ತ ಹನುಮಾನ್ ಶುರುವಾಗುತ್ತಿದ್ದಂತೆ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಅದು ಅವರದ್ದೇ ನಿರ್ಮಾಣ ಸಂಸ್ಥೆ ರಿಷಬ್ ಶೆಟ್ಟಿ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಇತ್ತೀಚೆಗೆ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಅನ್ನು ಅನ್‌ಫಾಲೋ ಮಾಡಿದ್ದಾರೆಂಬ ಸುದ್ದಿ ಹರಿದಾಡಿತ್ತು.

ಇದು ಬೆಳಕಿಗೆ ಬರುತ್ತಿದ್ದಂತೆ ಇಬ್ಬರ ನಡುವೆ ವೈಮನಸ್ಸು ಮೂಡಿದೆ ಎಂಬ ಚರ್ಚೆನೂ ಆಗಿತ್ತು. ಅಷ್ಟರಲ್ಲೇ ಈಗ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಪೋಸ್ಟ್ ಮಾಡಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರಕ್ಕೆ ಎರಡನೇ ಚಾಪ್ಟರ್ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ‘ಕಾಂತಾರ: ಚಾಪ್ಟರ್ 2’ ಎನ್ನುತ್ತಿದ್ದಾರೆ.

ಜೈ ಹನುಮಾನ್‌ ಸಿನಿಮಾ

ಹನುಮಂತನ ಸುತ್ತ ಸಾಗುವ 'ಜೈ ಹನುಮಾನ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರು ಹನುಮಂತನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಅವರ ಪಾತ್ರವು ಹೇಗೆ ಇರಬಹುದು ಎಂಬ ಕುತೂಹಲ ಇದೆ.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ಶುರುವಾಯ್ತು ರಿಷಬ್‌ ಶೆಟ್ಟಿ ಹೊಸ ಸಿನಿಮಾ; ʻಜೈ ಹನುಮಾನ್‌ʼ ಚಿತ್ರಕ್ಕೆ ಅದ್ದೂರಿ ಮುಹೂರ್ತ

ನಿರ್ದೇಶಕ ಪ್ರಶಾಂತ್‌ ವರ್ಮಾ ಅವರು ಸಂಪೂರ್ಣವಾಗಿ ಪ್ರಿ-ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿಕೊಂಡಿದ್ದು, ಏಪ್ರಿಲ್‌ನಿಂದ ಶೂಟಿಂಗ್‌ ಆರಂಭವಾಗುವ ನಿರೀಕ್ಷೆ ಇದೆ. ʻಜೈ ಹನುಮಾನ್ʼ‌ ಸಿನಿಮಾವು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ.