ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Amruthadhaare Serial: ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್‌ ಆಗಿದೆ. ಆದರೀಗ ಜೈದೇವ್‌ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಮಾಡೋದೇ illegal ಬಿಸಿನೆಸ್‌. ಅದರಲ್ಲೂ ಕೆಡಿ ಜೈದೇವ್‌ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.

ಶಕುಂತಲಾಳಿಗೆ ತಲೆ ನೋವಾದ ಕೆಡಿ ಜೈದೇವ್‌; ಕಿಡಿ ಕಾರಿದ ಪಾರ್ಥ

ಅಮೃತಧಾರೆ ಧಾರಾವಾಹಿ -

Yashaswi Devadiga
Yashaswi Devadiga Apr 10, 2026 11:02 AM

ಜೀ ಕನ್ನಡ ವಾಹಿನಿಯಲ್ಲಿ(Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (amruthadhaare serial ) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಇಷ್ಟೂ ದಿನ ಮಲ್ಲಿ ಮದುವೆ ಮೇಲೆ ಕಥೆ ಸಾಗುತ್ತಿತ್ತು. ಅಂತೂ ಮಲ್ಲಿ ಬದುಕು ಒಂದು ಕಡೆ ಸೆಟಲ್‌ ಆಗಿದೆ. ಆದರೀಗ ಜೈದೇವ್‌ (Jaidev) ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಆಗುವ ಮುನ್ಸೂಚನೆ ಎದ್ದು ಕಾಣುತ್ತಿದೆ. ಮಾಡೋದೇ illegal ಬಿಸಿನೆಸ್‌. ಅದರಲ್ಲೂ ಕೆಡಿ ಜೈದೇವ್‌ ಅಹಂಕಾರ ಮಾತ್ರ ಕಡಿಮೆ ಆಗಿಲ್ಲ.

ಜೈದೇವ್‌ ತಪ್ಪು ದಾರಿ

ಜೈದೇವ್‌ ಈಗ ತಪ್ಪು ದಾರಿ ತುಳಿಯಲು ಸಜ್ಜಾಗಿದ್ದಾನೆ. ಗೌತಮ್‌ ನ್ಯಾಯವಾಗಿ ಮಾಡಿಟ್ಟ ಆಸ್ತಿಯನ್ನು ಅಕ್ರಮ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದಾನೆ. ಇದೀಗ ತನ್ನ ಅಕ್ರಮ ಕೆಲಸಕ್ಕಾಗಿ ಸಾಲ ಕೂಡ ಮಾಡಿದ್ದಾನೆ. ಕೊಟ್ಟ ಸಾಲಗಾರ ಕೂಡ, ಬಡ್ಡಿ ಸಮೇತ ಹಣ ವಾಪಸ್‌ ಬರಬೇಕು ಅಂತ ಶರತ್ತು ಹಾಕಿದ್ದಾನೆ. ತನ್ನ ಓರ್‌ ಕಾನ್‌ಫಿಡೆನ್ಸ್‌ ಇವಂದಾಗಿ ಜೈದೇವ್‌ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Ankita Jayaram: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ‘ಕರ್ಣ’ ನಟಿ ಅಂಕಿತಾ ಜಯರಾಮ್ ಗಳಿಸಿದ ಅಂಕವೆಷ್ಟು?

ಪಾರ್ಥ, ಮಹಿಮಾಗೂ ಕ್ಯಾರೆ ಅನ್ನದ ಜೈದೇವ್‌

ಆಸ್ತಿಯಲ್ಲಿ ಮಹಿಮಾ ಹಾಗೂ ಪಾರ್ಥ ಸಹಿ ಕೂಡ ಇದೆ. ಆದರೆ ಅವರಿಬ್ಬರ ಗಮನಕ್ಕೆ ಬಾರದೇ ಜೈದೇವ್‌ ತನ್ನ ಅಕ್ರಮ ಚಟುವಟಿಕೆ ಮುಂದುವರಿಸಿದ್ದಾನೆ. ಈ ವಿಚಾರ ಪಾರ್ಥ ಶಕುಂತಲಾ ಬಳಿ ವಿವರಿಸಿದ್ದಾನೆ. ಅಣ್ಣ ನ್ಯಾಯವಾಗಿ ಮಾಡಿಟ್ಟ ಆಸ್ತಿಯನ್ನು ಈ ರೀತಿ ಬಳಸಿಕೊಳ್ಳುತ್ತಿದ್ದಾನೆ ಎಂದಿದ್ದಾನೆ.

ಇದು ಶಕುಂತಲಾಗೂ ಕೋಪ ಬರಿಸಿದೆ. ಮಾಡೋದೇ illegal ಬ್ಯುಸಿನೆಸ್‌ , ಅದರಲ್ಲೂ ಸ್ವಂತ ತಮ್ಮ ಹಾಗೂ ತಂಗಿಗೆ ಮೋಸ ಮಾಡ್ತೀಯಾ ಅಂತ ಅಬ್ಬರಿಸಿದ್ದಾಳೆ. ಅಷ್ಟೇ ಅಲ್ಲ ಜೈದೇವ್‌ ಕೂಡ ಅತ್ಯಂತ ಅಹಂಕಾರದಿಂದ ಇದು ಆಸ್ತಿ ನನ್ನ ಹೆಸರಲ್ಲಿದೆ. ನಾನು ಏನೂ ಬೇಕಾದರೂ ಮಾಡುವೆ ಅಂತ ಕೂಗಾಡಿದ್ದಾನೆ. ತನ್ನ ಕಷ್ಟದ ದಿನಗಳಲ್ಲೂ ಗೌತಮ್‌ ತನ್ನ ತಂಗಿಗೆ ಆಸ್ತಿಯನ್ನು ಕೊಟ್ಟರೆ, ಇತ್ತ ಜೈದೇವ್‌ ಪಾರ್ಥ ಹಾಗೂ ತಂಗಿಗೆ ಮೋಸ ಮಾಡಿ ಅಹಂಕಾರದ ಮಾತುಗಳನ್ನು ಆಡಿದ್ದಾನೆ.



ತಂಗಿಗೆ ನೆರವಾದ ಗೌತಮ್‌

ಮನೆಯವರೆಲ್ಲರೂ ಮಾತುಕತೆ ಮಾಡುವಾಗ ಸುಧಾ ಜೀವನದ ಬಗ್ಗೆ ಮಾತಾಡುತ್ತಾರೆ. ಸುಧಾ ಕೂಡ, ಹೇಗೋ ನಾನು ಗಂಡ ಮನೆಯನ್ನು ನಡೆಸಿಕೊಂಡು ಹೋಗ್ತಾ ಇದ್ದೇವೆ ಎನ್ನುತ್ತಾಳೆ. ಗೌತಮ್‌ ಆಗ ಸಮಯದಲ್ಲಿ ಆಸ್ತಿ ಹಂಚುವಾಗ ಸುಧಾಗೆ ಕೊಟ್ಟಿರಲಿಲ್ಲ. ಈ ಬಗ್ಗೆ ಭೂಮಿನೂ ಯೋಚನೆ ಮಾಡುತ್ತಾಳೆ. ಇದೀಗ ಅಜ್ಜಿ ಹೆಸರಿನಲ್ಲಿ ಇರೋ ಎಸ್ಟೇಟ್‌ ಅನ್ನು ಸುಧಾ ಹೆಸರಿಗೆ ಬರೆದು ಕೊಟ್ಟಿದ್ದಾನೆ ಗೌತಮ್‌. ಇಲ್ಲಿಯೂ ಅಣ್ಣನಾಗಿ ತನ್ನ ಕರ್ತವ್ಯ ನಿಭಾಯಿಸಿದ್ದಾನೆ.

ಮುಂದೆ ಜೈದೇವ್‌ಗೆ ಇರೋ ಅಹಂಕಾರವೇ ಶಕುಂತಲಾಗೆ ಮುಳುವಾಗುತ್ತಾ? ಪಾರ್ಥ ಹಾಗೂ ತಂಗಿ ಗೌತಮ್‌ ಕಡೆ ಸೇರುತ್ತಾರಾ? ಶಕುಂತಲಾಗೂ ಜೈದೇವ್‌ ಕೆಟ್ಟ ದಿನಗಳನ್ನು ತರ್ತಾನಾ? ದಿಯಾ ಇಂದಿಗಾಗಿ ಜೈದೇವ್‌ ಆಸ್ತಿ ಕಳೆದುಕೊಳ್ತಾನಾ? ಜೈದೇವ್‌ ಮತ್ತೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬೀಳ್ತಾನಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Amruthadhaare Serial : ತಂಗಿಗಾಗಿ ಅಣ್ಣನ ಉಡುಗೊರೆ; ಅಮ್ಮನಿಂದಲೇ ಕೇಡಿ ಮಗನಿಗೆ ಮಾತಿನ ಬರೆ!

ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.