Amruthadhaare Serial: ಜೈದೇವ್ ಕೈಯಲ್ಲಿ ಸಿಕ್ಕ ಲಕ್ಷ್ಮೀಕಾಂತನ ಕತೆ ಹರೋಹರ!
Amruthadhaare Serial: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ ಮಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಷ್ಟೇ ಅಲ್ಲ ನಿನ್ನೆಯಷ್ಟೇ ವಾಹಿನಿ ಹೊಸ ಪ್ರೋಮೊ ಹಂಚಿಕೊಂಡಿದೆ. ಗೌತಮ್ ಹಾಗೂ ಭೂಮಿ ಮುಂದೆ ಜೈದೇವ್ ಕುತಂತ್ರದ ಸತ್ಯ ಅನಾವರಣ ಆಗಿದೆ. ಆದರೀಗ ಹೈದೇವ್ ಮಾವ ಲಕ್ಷ್ಮೀಕಾಂತನ ಕಥೆ ಹರೋಹರವಾಗಿದೆ. ಜೆಡಿ ಕೈಯಲ್ಲಿ (Jaidev) ಸಿಕ್ಕಿ ಬಿದ್ದಿದ್ದಾನೆ.
ಅಮೃತಧಾರೆ ಧಾರಾವಾಹಿ -
ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆಯಲ್ಲಿ (Amruthadhaare Serial) ಮಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಷ್ಟೇ ಅಲ್ಲ ನಿನ್ನೆಯಷ್ಟೇ ವಾಹಿನಿ ಹೊಸ ಪ್ರೋಮೊ ಹಂಚಿಕೊಂಡಿದೆ. ಗೌತಮ್ ಹಾಗೂ ಭೂಮಿ (Gowtham Bhoomika) ಮುಂದೆ ಜೈದೇವ್ ಕುತಂತ್ರದ ಸತ್ಯ ಅನಾವರಣ ಆಗಿದೆ. ಆದರೀಗ ಹೈದೇವ್ ಮಾವ ಲಕ್ಷ್ಮೀಕಾಂತನ ಕಥೆ ಹರೋಹರವಾಗಿದೆ. ಜೆಡಿ ಕೈಯಲ್ಲಿ (Jaidev) ಸಿಕ್ಕಿ ಬಿದ್ದಿದ್ದಾನೆ.
ಮಾವನ ಕಾಲರ್‌ಗೆ ಕೈ ಹಾಕಿದ್ದಾನೆ ಜೈದೇವ್
ಜೈದೇವ್ ತನ್ನ ಮಾಸ್ಟರ್ ಪ್ಲ್ಯಾನ್‌ನಿಂದ ಗೌತಮ್ ಹಾಗೂ ಭೂಮಿಕಾಗೆ ತೊಂದರೆ ಕೊಡುತ್ತಲೇ ಇದ್ದ. ಆದರೆ ಈ ವಿಚಾರವನ್ನು ಆನಂದ್‌ಗೆ ವರದಿ ಒಪ್ಪಿಸೋದು ಮಾವ ಲಕ್ಷ್ಮೀಕಾಂತ್ ಆಗಿತ್ತು. ಆದರೀಗ ಈ ಎಲ್ಲ ಸತ್ಯಗಳು ಜೈದೇವ್‌ಗೆ ಗೊತ್ತಾಗಿದೆ. ಮಲ್ಲಿ ವಿಚಾರವಾಗಿ ಲಕ್ಷ್ಮೀಕಾಂತ್ ಕಾಲ್‌ನಲ್ಲಿ ಮಾತನಾಡಿರುವ ಬಗ್ಗೆ ಜೈದೇವ್‌ಗೆ ಗೊತ್ತಾಗಿದೆ. ಕುಚಿಕು ಕುಚಿಕು ಅಂತಾನೇ ಹಿಂದೆಯಿಂದ ಚೂರಿ ಹಾಕ್ತೀಯಾ ಅಂತ ಮಾವನ ಕಾಲರ್‌ಗೆ ಕೈ ಹಾಕಿದ್ದಾನೆ ಜೈದೇವ್.
ಇದನ್ನೂ ಓದಿ: Saregamapa Promo : ಬಡವರಿಗೆ ‘ಸರಿಗಮಪ’ ವೇದಿಕೆ ಅಂತ ಟ್ರೋಲ್ ಮಾಡೋರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಈ ವೇಳೆ ಶಕುಂತಲಾ ನೋಡಿ ಜೈದೇವ್‌ಗೆ ಬೈಯಲು ಬರುತ್ತಾಳೆ. ಆಗ ಜೈದೇವ್ ಲಕ್ಷ್ಮೀಕಾಂತ ಅಷ್ಟೂ ಕೆಲಸದ ಬಗ್ಗೆ ರಿವೀಲ್ ಮಾಡ್ತಾನೆ. ಸಾಲದು ಅಂತ ಮಲ್ಲಿ ಮದುವೆ ಪತ್ರ ಲಕ್ಷ್ಮೀಕಾಂತ್ ಬಳಿ ಇರೋದು ತೋರಿಸುತ್ತಾನೆ. ಹೀಗಾಗಿ ಈಗ ಲಕ್ಷ್ಮೀಕಾಂತ್ ರೆಡ್ ಹ್ಯಾಂಡ್ ಆಗಿ ಜೈದೇವ್ ಬಳಿ ಸಿಕ್ಕಿ ಬಿದ್ದಿದ್ದಾನೆ. ಮುಂದೆ ಲಕ್ಷ್ಮೀಕಾಂತನ ಕಥೆ ಊಹಿಸಲು ಸಾಧ್ಯವಿಲ್ಲ ಅಂತಿದ್ದಾರೆ ವೀಕ್ಷಕರು.
ಮತ್ತೊಂದು ಕಡೆ ಭೂಮಿ ಹಾಗೂ ಗೌತಮ್ ತಮಗೆ ಅರಿವೇ ಇಲ್ಲದಂತೆ ಸಂಭ್ರಮಾಚರಣೆ ಮಾಡ್ತಿದ್ದಾರೆ. ಸುನಿ ಜೈದೇವ್ ಕಡೆ ಅವನು ಅನ್ನೋದು ಇದುವೆರೆಗೆ ಅವರಿಗೆ ಗೊತ್ತಾಗಿಲ್ಲ.
ಮದುವೆ ಸಂಭ್ರಮದಲ್ಲಿ ರೋಚಕ ಸತ್ಯದ ಅನಾವರಣ!
ಮಾವನೇ ಗೌತಮ್ ಬಳಿ ಎಲ್ಲ ಸತ್ಯಗಳನ್ನು ಹೇಳ್ತಾನೆ ಅಂದುಕೊಂಡಿದ್ದರು ವೀಕ್ಷಕರು. ಆದರೆ ಆಗಿದ್ದೇ ಬೇರೆ. ಪಾರ್ಥ ಸುನಿ ಕಂಡೊಡನೆ ಜೈದೇವ್ ಬಳಿ ಸುನಿ ಕ್ಲೋಸ್ ಆಗಿರೋ ಬಗ್ಗೆ ಗೌತಮ್‌ಗೆ ಹೇಳಿದ್ದಾನೆ. ಜೈದೇವ್ ಜೊತೆಗೆ ಸುನಿ ಕೆಲಸ ಮಾಡ್ತಿದ್ದಾನೆ ಎಂದಿದ್ದಾನೆ. ಇನ್ನೊಂದು ಕಡೆ ಅಪ್ಪು ಭೂಮಿ ಬಳಿ ಸುನಿ ಬಗ್ಗೆ ರಿವೀಲ್ ಮಾಡಿದ್ದಾನೆ. ಸುನಿ ತನ್ನ ಮೊಬೈಲ್‌ನಲ್ಲಿ ಜೈದೇವ್‌ನನ್ನು ಬಾಸ್ ಅಂತ ಸೇವ್ ಮಾಡಿಕೊಂಡಿದ್ದಾರೆ ಎಂದಿದ್ದಾನೆ. ಅಲ್ಲಿಗೆ ಸುನಿಗೂ ಹಾಗೂ ಜೈದೇವ್‌ಗೂ ಲಿಂಕ್ ಇದೆ ಅನ್ನೋದು ಭೂಮಿಗೆ ಗೊತ್ತಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಭೂಮಿ ನೇರವಾಗಿ ಜೈದೇವ್ ಬಳಿ ಹೋಗಿದ್ದಾಳೆ. ʻನಿಮಗೆ ಮಾನ ಮರ್ಯಾದೇ ಇಲ್ವಾ? ಎದುರುಗಡೆ ನಿಂತು ಏನು ಬೇಕಾದರೂ ಫೇಸ್ ಮಾಡ್ತಾನೆ. ಇನ್ನೊಂದು ಗಂಡಸನ್ನ ಹಿಂದೆ ಬಿಟ್ಟೋರಿಗೆ ಗಂಡಸು ಅನ್ನಲ್ಲʼ ಎನ್ನುತ್ತಾಳೆ. ಭೂಮಿ ಮಾತಿಗೆ ಜೈದೇವ್ ಕೂಡ ಅಬ್ಬರಿಸಿದ್ದಾನೆ. ಆಗ ಭೂಮಿ, ʻನೀನು ಏನು ಮದುವೆ ನಿಲ್ಲಿಸೋದು ನಾನೆ ನಿಲ್ಲಿಸುತ್ತೀನಿʼ ಅಂತ ಜೈದೇವ್ ಮುಂದೆಯೇ ಭೂಮಿ ಶಪಥ ಮಾಡಿದ್ದಾಳೆ.
ಇದನ್ನೂ ಓದಿ: Amruthadhaare Serial: ಬೆಂಕಿಯಾದ ಭೂಮಿ ಎದುರು ಸುಟ್ಟು ಬೂದಿಯಾಗ್ತಾನಾ ಜೇಡಿ? ರೋಚಕ ಸತ್ಯದ ಅನಾವರಣ!
ʻಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ.