ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಮನೆಯಲ್ಲಿ ಕಳ್ಳತನ: ಅಶ್ವಿನಿ ಗೌಡ ಆರೋಪ

ನಿನ್ನೆಯ ಎಪಿಸೋಡ್ನಲ್ಲಿ ಡೊಡ್ಮನೆ ಜಗಳಗಳಿಂದಲೇ ಕೂಡಿತ್ತು. ಕಾಕ್ರೋಚ್ ಸುಧಿ ಅಸುರಾಧಿಪತಿಯಾಗಿ ಸ್ಪರ್ಧಿಗಳಿಗೆ ಕಾಡುತ್ತಿದ್ದಾರೆ. ಇದರ ಮಧ್ಯೆ ಅಶ್ವಿನಿ ಗೌಡ ಅವರ ಡೈಮಂಡ್ ರಿಂಗ್ ಕಳ್ಳತನವಾಗಿದೆ. ಅಸುರ ಟಾಸ್ಕ್‌ನಲ್ಲಿ ಎಲ್ಲರೂ ಅಸುರರ ಥರ ಮೇಕಪ್‌ ಮಾಡಿಸಿಕೊಳ್ಳಬೇಕು ಎಂದು ಅಸುರಾಧಿಪತಿ ಆದೇಶ ನೀಡಿದರು.

ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಮನೆಯಲ್ಲಿ ಕಳ್ಳತನ

Ashwini Gowda -

Profile Vinay Bhat Oct 9, 2025 8:53 AM

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಅನೇಕ ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಇದು ಮನೆಯ ಒಳಗೆ ಹಾಗೂ ಹೊರಗೆ ಕೂಡ. Expect the Unexpected ಎಂಬ ಟೈಟಲ್​ನೊಂದಿಗೆ ಶುರುವಾದ ಸೀಸನ್ ಅದಕ್ಕೆ ತಕ್ಕಂತೆ ನಡೆಯುತ್ತಿದೆ. ಈಗಾಗಲೇ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್ ಬಾಸ್ ಮೊದಲ ವಾರದಲ್ಲೇ ಹೇಳಿದರು. ಬಳಿಕ ಮೊದಲ ವಾರವೇ ದೊಡ್ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯಿತು. ಇದಾದ ಬಳಿಕ ಎರಡನೇ ವಾರದ ಆರಂಭದಲ್ಲಿ ಬಿಗ್ ಬಾಸ್ ತಾತ್ಕಾಲಿಕ ಸ್ಥಗಿತಗೊಂಡಿತು. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಬಿಗ್ ಬಾಸ್ ಮನೆಯನ್ನು ಬಂದ್ ಮಾಡಲಾಯಿತು.

ಇದೀಗ ಎಲ್ಲ 17 ಸ್ಪರ್ಧಿಗಳು ಪುನಃ ಬಿಗ್ ಬಾಸ್ ಗೂಡು ಸೇರಿದ್ದಾರೆ. ಮಂಗಳವಾರ ಸ್ಪರ್ಧಿಗಳು ಮನೆಯಿಂದ ಹೊರಹೋದರು. ಆದರೆ, ಬುಧವಾರದ ಎಪಿಸೋಡ್​ನಲ್ಲಿ ಇದನ್ನು ತೋರಿಸಲಾಗಿಲ್ಲ. ಇಂದಿನ ಎಪಿಸೋಡ್​ನಲ್ಲಿ ಇದು ಟೆಲಿಕಾಸ್ಟ್ ಆಗುವ ಸಾಧ್ಯತೆ ಇದೆ. ಈಗಾಗಲೇ ಕಲರ್ಸ್ ಒಂದು ಪ್ರೋಮೋ ಕೂಡ ಬಿಟ್ಟಿದ್ದು, ಖಾಲಿ-ಖಾಲಿ ಆಗಿರುವ ಬಿಗ್ ಬಾಸ್ ಮನೆಯನ್ನು ಇದರಲ್ಲಿ ತೋರಿಸಲಾಗಿದೆ. ಅಲ್ಲದೆ ಎಂದಿನಂತೆ ಅದೇ ಸಮಯದಲ್ಲಿ ಎಂದು ಟೈಟಲ್ ಕೊಡಲಾಗಿದೆ.

ಬಿಗ್ ಬಾಸ್ ಹೊಸ ಪ್ರೋಮೋ:

ನಿನ್ನೆಯ ಎಪಿಸೋಡ್​ನಲ್ಲಿ ಡೊಡ್ಮನೆ ಜಗಳಗಳಿಂದಲೇ ಕೂಡಿತ್ತು. ಕಾಕ್ರೋಚ್ ಸುಧಿ ಅಸುರಾಧಿಪತಿಯಾಗಿ ಸ್ಪರ್ಧಿಗಳಿಗೆ ಕಾಡುತ್ತಿದ್ದಾರೆ. ಇದರ ಮಧ್ಯೆ ಅಶ್ವಿನಿ ಗೌಡ ಅವರ ಡೈಮಂಡ್ ರಿಂಗ್ ಕಳ್ಳತನವಾಗಿದೆ. ಅಸುರ ಟಾಸ್ಕ್‌ನಲ್ಲಿ ಎಲ್ಲರೂ ಅಸುರರ ಥರ ಮೇಕಪ್‌ ಮಾಡಿಸಿಕೊಳ್ಳಬೇಕು ಎಂದು ಅಸುರಾಧಿಪತಿ ಆದೇಶ ನೀಡಿದರು. ಆದರೆ, ಇದಕ್ಕೆ ಅಶ್ವಿನಿ ಗೌಡ ಸೇರಿದಂತೆ ಇನ್ನೂ ಕೆಲವರು ಒಪ್ಪಿಲ್ಲ. ಅಶ್ವಿನಿ ಅವರಿಗೆ ಬುದ್ಧಿ ಕಲಿಸಲು ಕಾಕ್ರೋಜ್ ಸುಧಿ ನಿರ್ಧರಿಸಿದರು. ಹಾಗಾಗಿ ಮೇಕಪ್ ಮಾಡಿಕೊಳ್ಳದಂತೆ ನಿಯಮ ವಿಧಿಸಿದರು.

BBK 12: ಮುಂಜಾನೆ 4 ಗಂಟೆ ಸುಮಾರಿಗೆ ಪುನಃ ಬಿಗ್ ಬಾಸ್ ಮನೆಗೆ ಹೊಕ್ಕ ಸ್ಪರ್ಧಿಗಳು

ಆದರೆ, ಅಸುರಾಧಿಪತಿಯ ಆರ್ಡರ್ ಅನ್ನು ವಿರೋಧಿಸಿ ಅಶ್ವಿನಿ ಗೌಡ, ಜಾನ್ವಿ ಸೇರಿದಂತೆ ಕೆಲವರು ಮುಂತಾದವರು ಮೇಕಪ್ ಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರ ಮೇಕಪ್ ಕಿಟ್ ಕದಿಯಲು ಕಾಕ್ರೋಜ್ ಸುಧಿ ಹುನ್ನಾರ ಮಾಡಿದರು. ಧ್ರುವಂತ್​​ಗೆ ಹೇಳಿ ಮೇಕಪ್ ಕಿಟ್ ಮುಚ್ಚಿಡುವಂತೆ ಆದೇಶಿಸಿದರು. ಬಳಿಕ ಅಶ್ವಿನಿ ಗೌಡ ಅವರ ಮೇಕಪ್ ಕಿಟ್ ಕಾಣೆ ಆಯಿತು.

ಮೇಕಪ್ ಕಿಟ್ ಅಡಗಿಸಿ ಇಟ್ಟಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಕೋಪ ಬಂದು, ತಮ್ಮ ಡೈಮಂಡ್ ರಿಂಗ್ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು. ಅದಕ್ಕೆ ಕಾರಣ ಆದವರಿಗೆ ಗ್ರಹಚಾರ ಬಿಡಿಸುವುದಾಗಿ ಅಶ್ವಿನಿ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ನನ್ನ ವಜ್ರದ ಉಂಗುರ ಕಳೆದು ಹೋಗಿದೆ. ನಾನು ನಿಜವಾಗಿಯೂ ಸತ್ಯ ಹೇಳ್ತಿದೀನಿ, ಇದನ್ನು ಯಾರೂ ಕೂಡ ಅರ್ಥ ಮಾಡಿಕೊಳ್ತಿಲ್ಲ ಎಂದು ಅಶ್ವಿನಿ ಗೌಡ ಅವರು ಹೇಳಿದ್ದಾರೆ. ಇದು ಸತ್ಯವೋ? ಸುಳ್ಳೋ ಎನ್ನೋದು ಬಯಲಾಗಬೇಕಿದೆ.

Bigg Boss 12 Kannada: ದೊಡ್ಮನೆ ನಿರ್ಮಾಣಕ್ಕೆ ತಗುಲಿದ ವೆಚ್ಚ ಎಷ್ಟು ಗೊತ್ತಾ? ಬಿಗ್‌ಬಾಸ್‌ ಬ್ಯಾನ್‌ನಿಂದಾಗುವ ನಷ್ಟವೆಷ್ಟು?