ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಕನ್ನಡ ಮನೆಯಲ್ಲಿರುವ ಈ ಸ್ಪರ್ಧಿ ಮೇಲಿದೆ 23 ಕೇಸ್: ಒಂದೊಂದೆ ವಿಚಾರ ಬಹಿರಂಗ

Ashwini Gowda Bigg Boss: ಧಾರಾವಾಹಿ ಮತ್ತು ಸಿನಿಮಾ ಜಗತ್ತಿನ ಖ್ಯಾತ ನಟಿ, ನಿರ್ಮಾಪಕಿ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಸದ್ಯ ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿದ್ದಾರೆ. 18ನೇ ಸ್ಪರ್ಧಿಯಾಗಿ ಇವರು ಮನೆಯೊಳಗೆ ಕಾಲಿಟ್ಟರು. ಇದೀಗ ಇವರ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದು ವೈರಲ್ ಆಗುತ್ತಿದೆ.

ಬಿಗ್ ಬಾಸ್ ಕನ್ನಡ ಮನೆಯಲ್ಲಿರುವ ಈ ಸ್ಪರ್ಧಿ ಮೇಲಿದೆ 23 ಕೇಸ್

Ashwini Gowda Bigg Boss Kannada 12 -

Profile Vinay Bhat Oct 1, 2025 11:21 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada season 12) ಶುರುವಾಗಿ ಮೂರು ದಿನಗಳಾಗಿವೆ. ಈ ಬಾರಿ ಒಟ್ಟು 19 ಸ್ಪರ್ಧಿಗಳು ದೊಡ್ಮನೆಯೊಳಗೆ ಪ್ರವೇಸಿದರು. ಈ ಪೈಕಿ ರಕ್ಷಿತಾ ಶೆಟ್ಟಿ ಮನೆಯೊಳಗೆ ಎಂಟ್ರಿ ಕೊಟ್ಟ ಕೆಲವೇ ಗಂಟೆಗಳಲ್ಲಿ ಎಲಿಮಿನೇಟ್ ಆಗಿ ಆಚೆ ಬಂದರು. ಸದ್ಯ ಮನೆಯೊಳಗೆ 18 ಮಂದಿ ಸ್ಪರ್ಧಿಗಳಿದ್ದಾರೆ. ಎಲ್ಲರೂ ಘಟಾನುಘಟಿ ಸ್ಪರ್ಧಿಗಳೇ ಆಗಿದ್ದಾರೆ. ಈ ಲಿಸ್ಟ್​ನಲ್ಲಿ ಧಾರಾವಾಹಿ ಮತ್ತು ಸಿನಿಮಾ ಜಗತ್ತಿನ ಖ್ಯಾತ ನಟಿ, ನಿರ್ಮಾಪಕಿ, ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ ಕೂಡ ಇದ್ದಾರೆ. 18ನೇ ಸ್ಪರ್ಧಿಯಾಗಿ ಇವರು ಮನೆಯೊಳಗೆ ಕಾಲಿಟ್ಟರು. ಇದೀಗ ಇವರ ಕುರಿತು ಇಂಟ್ರೆಸ್ಟಿಂಗ್ ವಿಚಾರವೊಂದು ವೈರಲ್ ಆಗುತ್ತಿದೆ.

ರಾಜಕೀಯರ ಹಿನ್ನೆಲೆ ಇರುವ ಕುಟುಂಬದಲ್ಲಿ ಹುಟ್ಟಿ ಬೆಳೆದ ಅಶ್ವಿನಿ ಗೌಡ ಬಳಿಕ ಬಣ್ಣದಲೋಕದತ್ತ ಮುಖ ಮಾಡಿದವರು. ಮಹಾಪರ್ವ ಸೇರಿದಂತೆ 25ಕ್ಕೂ ಹೆಚ್ಚು ಧಾರಾವಾಹಿಗಳು ಮತ್ತು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ರಾಜಾಹುಲಿ ಚಿತ್ರದಲ್ಲಿ ಅಶ್ವಿನಿ ಯಶ್ ಅವರ ಅತ್ತೆ ಮಗಳ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ವಾರಸ್ದಾರ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಕೂಡ ಅವರು ನಟಿಸಿದ್ದರು.

ಇದರ ಜೊತೆಗೆ ರಾಜಕೀಯವಾಗಿಯೂ ಸಮಾಜದಲ್ಲಿ ಗುರುತಿಸಿಕೊಂಡ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಇವರ ಮೇಲೆ ಅನೇಕ ಆರೋಪಗಳಿವೆ. ಅನೇಕ ಕೇಸ್‌ಗಳ ವಿಚಾರವಾಗಿ ಅಶ್ವಿನಿ ಗೌಡ ಕೋರ್ಟು, ಕಛೇರಿ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಬಿಗ್ ಬಾಸ್ ಬರುವುದಕ್ಕೂ ಮುನ್ನ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅಶ್ವಿನಿ ಗೌಡ ತಮ್ಮ ವೈಯಕ್ತಿಕ ಹಾಗೂ ಸಿನಿಮಾ, ಹೋರಾಟ ಎಲ್ಲದರ ಬಗ್ಗೆ ಮಾತನಾಡಿದ್ದರು. ಇದೀಗ ವೈರಲ್ ಆಗುತ್ತಿದೆ.

BBK 12: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್​ಗೇ ಚಳ್ಳೆ ಹಣ್ಣು ತಿನ್ನಿಸಿದ ಮಲ್ಲಮ್ಮ

‘‘ಕನ್ನಡ ಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವುದರಿಂದ ನಾನು ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ನಮ್ಮದು ಬಹಳ ದೊಡ್ಡ ಕುಟುಂಬ. ನಮ್ಮ ತಂದೆಗೆ ಮೂವರು ಮಡದಿಯರು. ನಾವೆಲ್ಲಾ ಒಟ್ಟಾದರೆ 500 ಜನ ಆಗ್ತೀವಿ. ನಮ್ಮ ತಂದೆ ಮುನಿಬಚ್ಚಪ್ಪ ಕೆ. ಆರ್‌ ಪುರದ ಮಾಜಿ ಚೇರ್ಮನ್. ನಮ್ಮ ತಂದೆ 30, 40 ವರ್ಷಗಳ ಹಿಂದೆಯೇ ರಿಯಲ್ ಎಸ್ಟೇಟ್ ಮಾಡುತ್ತಿದ್ದರು. ಲೇಔಟ್‌ಗಳನ್ನು ನಿರ್ಮಿಸಿದ್ದರು. ಸಾಕಷ್ಟು ಪ್ರಾಪರ್ಟಿ ಇತ್ತು. 100-150 ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದೀವಿ. ಪ್ರಾಪರ್ಟಿ ಇದೆ ಎಂದಮೇಲೆ ಕೇಸ್‌ಗಳು ಕೂಡ ಇರುತ್ತವೆ. ಹೋರಾಟದ ಕೇಸ್, ಪ್ರಾಪರ್ಟಿ ಕೇಸ್ ಸೇರಿ 22ರಿಂದ 23 ಕೇಸ್ ಇದೆ’’ ಎಂದು ಅಶ್ವಿನಿ ಗೌಡ ಹೇಳಿದ್ದಾರೆ.