BBK 12: ಮೊದಲ ವಾರದಲ್ಲೇ ನಿರ್ಧಾರವಾಗಲಿದೆ ಬಿಗ್ ಬಾಸ್ ಫೈನಲಿಸ್ಟ್: 3ನೇ ವಾರದಲ್ಲಿ ಫೈನಲ್
‘‘ಈ ಮುಂಚೆ ತಿಳಿಸಿದಂತೆ ಸೀಸನ್ 12 ಒಂದರ ವಿರುದ್ಧ ಎರಡು.. ಡಬಲ್ ಟ್ವಿಸ್ಟ್ಗಳ ಸೀಸನ್ನಲ್ಲಿ ಫಿನಾಲೆ ಕೂಡ ಡಬಲ್.. ಯಾರಿಗೆ ಗೊತ್ತು ವಿನ್ನರ್ ಕೂಡ ಡಬಲ್ ಆಗಬಹುದು’’ ಎಂದು ಬಿಗ್ ಬಾಸ್ ಕೊನೆಯಲ್ಲಿ ಹೇಳುವ ಮೂಲಕ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಈ ವಿಚಾರ ಕೇಳಿ ಮನೆಯ ಸದಸ್ಯರಿಗೆ ಢವ-ಢವ ಶುರುವಾಗಿದೆ.

BBK 12 Twist -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದ ಮೊದಲ ದಿನದಿಂದಲೇ ಸ್ಪರ್ಧಿಗಳಿಗೆ ಶಾಕ್ ಮೇಲೆ ಶಾಕ್ ನೀಡಲಾಗುತ್ತಿದೆ. ಸ್ಪರ್ಧಿಗಳಿಗೆ ಒಂದರ ಹಿಂದೆ ಒಂದರಂತೆ ಟ್ವಿಸ್ಟ್ ನೀಡಲಾಗುತ್ತಿದೆ. ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಆಚೆ ಹೋಗಬೇಕಾಯಿತು. ಎರಡನೇ ದಿನ ಬಿಗ್ ಬಾಸ್ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಹೇಳಿದರು. ಹಾಗಾದರೆ, ಈ ಫೈನಲ್ಗೆ ಫೈನಲಿಸ್ಟ್ ಯಾರು?, ಇದನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ ಎಂಬ ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ.
ಸಾಮಾನ್ಯವಾಗಿ ಬಿಗ್ ಬಾಸ್ ಶೋನಲ್ಲಿ 100ನೇ ದಿನಕ್ಕೆ ಅಥವಾ 100 ದಿನ ಕಳೆದು ಒಂದೆರಡು ವಾರದಲ್ಲಿ ಫಿನಾಲೆ ನಡೆಯುತ್ತೆ. ಇದು ಕಳೆದ 11 ಸೀಸನ್ನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಬಾರಿ ಹಾಗಿಲ್ಲ.. ಕೇವಲ ಮೂರನೇ ವಾರದಲ್ಲೇ ಮೊದಲ ಫೈನಲ್ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
‘‘ಈ ಸೀಸನ್ನಲ್ಲಿ ಯಾರು ಗೆಲ್ಲುತ್ತಾರೆ ಎಂದು ನೋಡೋದಕ್ಕೆ ನೂರು ದಿನಗಳ ಕಾಲ ಕಾಯಬೇಕಿಲ್ಲ.. ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ.. ಅಲ್ಲಿಯ ವರೆಗು ಈ ಮನೆಯಲ್ಲಿ ನೀವು ಯಾರು ಶಾಶ್ವತವಲ್ಲ.. ಯಾರೋಬ್ಬರೂ ಸೇಫ್ ಅಲ್ಲ.. ನಿಮಲ್ಲಿ ಯಾರು, ಯಾವಾಗ ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು.. ಒಬ್ಬೊಬ್ಬರಾಗಿ ಹೋಗಬಹುದು.. ಗುಂಪು-ಗುಂಪಾಗಿ ಎಲಿಮಿನೇಟ್ ಆಗಬಹುದು’’ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಈ ಎಲಿಮಿನೇಷನ್ ಭಯದಿಂದ ಮುಕ್ತರಾಗಿ ಸ್ಪರ್ಧಿಗಳು ಫೈನಲ್ ತಲುಪಬೇಕು ಎಂದರೆ ಅದಕ್ಕೆ ಇರುವುದು ಒಂದೇ ದಾರಿ. ಅದೇನೆಂದರೆ ವಾರ ವಾರ ಬಿಗ್ ಬಾಸ್ ಸರಣಿ ಟಾಸ್ಕ್ ನೀಡುತ್ತಾರೆ. ಪ್ರತೀ ವಾರದ ಅಂತ್ಯದಲ್ಲಿ ಸರಣಿ ಟಾಸ್ಕ್ ಗೆಲ್ಲುವವರು ನೇರವಾಗಿ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯನ್ನು ಗೆಲ್ಲುತ್ತಾರಂತೆ. ಮತ್ತೊಂದು ಶಾಕಿಂಗ್ ಎಂದರೆ ಈ ಮೂರನೇ ವಾರದ ಮೊದಲ ಫಿನಾಲೆ ವರೆಗೆ ಈ ಮನೆಗೆ ಯಾವುದೇ ಕ್ಯಾಪ್ಟನ್ ಇರುವುದಿಲ್ಲವಂತೆ.
BBK 12: ದೊಡ್ಮನೆಯಲ್ಲಿ ಜಂಟಿಗಳ ತಪ್ಪಿಗೆ ಒಂಟಿಗಳಿಗೆ ಶಿಕ್ಷೆ: ಏನು ಮಾಡಿದ್ರು ಬಿಗ್ ಬಾಸ್
‘‘ಈ ಮುಂಚೆ ತಿಳಿಸಿದಂತೆ ಸೀಸನ್ 12 ಒಂದರ ವಿರುದ್ಧ ಎರಡು.. ಡಬಲ್ ಟ್ವಿಸ್ಟ್ಗಳ ಸೀಸನ್ನಲ್ಲಿ ಫಿನಾಲೆ ಕೂಡ ಡಬಲ್.. ಯಾರಿಗೆ ಗೊತ್ತು ವಿನ್ನರ್ ಕೂಡ ಡಬಲ್ ಆಗಬಹುದು’’ ಎಂದು ಬಿಗ್ ಬಾಸ್ ಕೊನೆಯಲ್ಲಿ ಹೇಳುವ ಮೂಲಕ ಸ್ಪರ್ಧಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಈ ವಿಚಾರ ಕೇಳಿ ಮನೆಯ ಸದಸ್ಯರಿಗೆ ಢವ-ಢವ ಶುರುವಾಗಿದೆ. ಈ ಮೂಲಕ ಟ್ವಿಸ್ಟ್ ಮೇಲೆ ಟ್ವಿಸ್ಟ್ ಬಿಗ್ ಬಾಸ್ ನೀಡುತ್ತಿದ್ದು, ಸ್ಪರ್ಧಿಗಳಿಗೆ ಉಸಿರಾಡಲೂ ಅವಕಾಶ ಸಿಗದಂತಾಗಿದೆ.