ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್​ಗೇ ಚಳ್ಳೆ ಹಣ್ಣು ತಿನ್ನಿಸಿದ ಮಲ್ಲಮ್ಮ

ಮಲ್ಲಮ್ಮ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮ್ಗೆ ಕರೆದಿದ್ದು, ಇಲ್ಲೂ ಮಲ್ಮಮ್ಮನ ಮಾತು ಕೇಳಿ ಬಿಗ್ ಬಾಸ್ಗೆ ತಲೆಕೆಟ್ಟೋಗಿದೆ. ‘ಮಲ್ಲಮ್ಮ ಕನ್ಫೆಷನ್ ರೂಮ್ಗೆ ಬನ್ನಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ರೂಮ್ ಒಳಗೆ ಕಾಲಿಟ್ಟ ತಕ್ಷಣ ಅವರಿಗೆ ಎಲ್ಲಿ ಹೋಗಬೇಕೆಂದು ತಿಳಿದಿಲ್ಲ. ನಮಸ್ತೆ ಸರ್ ಎಂದು ಹೇಳುತ್ತ ಡೋರ್ ಹಾಕಿ ತೆಗೆದು ಮಾಡಿದರು.

ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್​ಗೇ ಚಳ್ಳೆ ಹಣ್ಣು ತಿನ್ನಿಸಿದ ಮಲ್ಲಮ್ಮ

Mallamma Bigg Boss -

Profile Vinay Bhat Oct 1, 2025 8:35 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss kannada season 12) ಶುರುವಾಗಿದ್ದು, ಇದೀಗ ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಬಾರಿಯ ಸೀಸನ್​ನಲ್ಲಿ ಪ್ರತಿ ದಿನ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರಲಿದೆ ಎನ್ನುತ್ತಿರುವ ಬಿಗ್ ಬಾಸ್ ಒಂದರ ಹಿಂದೆ ಒಂದರಂತೆ ಸ್ಪರ್ಧಿಗಳಿಗೆ ಶಾಕ್ ಕೊಡುತ್ತಿದ್ದಾರೆ. ಈಗಾಗಲೇ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ ಎಂದು ಬಿಗ್ ಬಾಸ್ ಹೇಳಿದ್ದು, ಪ್ರತೀ ವಾರದ ಅಂತ್ಯದಲ್ಲಿ ಟಾಸ್ಕ್ ಗೆದ್ದ ಸ್ಪರ್ಧಿ ಫೈನಲಿಸ್ಟ್ ಆಗುತ್ತಾರೆ ಎಂದಿದ್ದಾರೆ. ಇದರ ಮಧ್ಯೆ ಮಲ್ಲಮ್ಮ ನಾನು ಯಾವುದೇ ಟಾಸ್ಕ್​ಗಾದರು ರೆಡಿ ಎಂದು ಟೊಂಕ ಕಟ್ಟಿ ನಿಂತಿದ್ದಾರೆ.

ಬಿಗ್ ಬಾಸ್ ಆಡುವ ಅಚ್ಚ ಕನ್ನಡ ಭಾಷೆ ಮಲ್ಲಮ್ಮನಿಗೆ ಸರಿಯಾಗಿ ಅರ್ಥ ಆಗುತ್ತಿಲ್ಲವಾದರೂ ಹೇಗೋ ಮ್ಯಾನೇಜ್ ಮಾಡ್ಕೊಂಡು ಎಲ್ಲರನ್ನೂ ನಗಿಸುತ್ತ ಸಮಯ ಕಳೆಯುತ್ತಿದ್ದಾರೆ. ಮೊನ್ನೆ ಗ್ರೋಸರಿ ಟಾಸ್ಕ್​ನಲ್ಲಿ ಮಲ್ಲಮ್ಮನಿಗೆ ಅರ್ಥ ಆಗಿಲ್ಲ ಅಂತ ಬಿಗ್ ಬಾಸ್ ಮೊದಲ ಬಾರಿ ಪದೇ ಪದೇ ರೂಲ್ಸ್ ಹೇಳಬೇಕಾಗಿ ಬಂತು. ಇದೀಗ ಇಂದು ಮಲ್ಲಮ್ಮ ಅವರನ್ನು ಬಿಗ್ ಬಾಸ್ ಕನ್ಫೆಷನ್ ರೂಮ್​ಗೆ ಕರೆದಿದ್ದು, ಇಲ್ಲೂ ಮಲ್ಮಮ್ಮನ ಮಾತು ಕೇಳಿ ಬಿಗ್ ಬಾಸ್​ಗೆ ತಲೆಕೆಟ್ಟೋಗಿದೆ.



‘ಮಲ್ಲಮ್ಮ ಕನ್ಫೆಷನ್ ರೂಮ್​ಗೆ ಬನ್ನಿ’ ಎಂದು ಬಿಗ್ ಬಾಸ್ ಹೇಳಿದ್ದಾರೆ. ರೂಮ್ ಒಳಗೆ ಕಾಲಿಟ್ಟ ತಕ್ಷಣ ಅವರಿಗೆ ಎಲ್ಲಿ ಹೋಗಬೇಕೆಂದು ತಿಳಿದಿಲ್ಲ. ನಮಸ್ತೆ ಸರ್ ಎಂದು ಹೇಳುತ್ತ ಡೋರ್ ಹಾಕಿ ತೆಗೆದು ಮಾಡಿದರು. ಬಳಿಕ ಕನ್ಫೆಷನ್ ರೂಮ್​ನಲ್ಲಿರುವ ಸೋಫಾ ಮೇಲೆ ಕೂತಿದ್ದಾರೆ. ‘ಮಲ್ಲಮ್ಮ ನನ್ನ ಮಾತು ನಿಮಗೆ ಚೆನ್ನಾಗಿ ಅರ್ಥ ಆಗುತ್ತೆ ಅಲ್ವೇ?’ ಎಂದು ಬಿಗ್ ಬಾಸ್ ಕೇಳಿದ್ದಾರೆ. ಇದಕ್ಕೆ ಮಲ್ಲಮ್ಮ ಏನೂ ಮಾತನಾಡದೆ ಸುಮ್ಮನೆ ಕೂತಿದ್ದಾರೆ. ಬಳಿಕ ಮಲ್ಲಮ್ಮ ಎಂದು ಕೇಳಿದಾಗ ‘ಒಕೆ ಸರ್’ ಎಂದು ಹೇಳಿದ್ದಾರೆ.

ಇಷ್ಟೇ ಅಲ್ಲದೆ ಏನಾದ್ರು ಮಾತಾಡಿ ಮಲ್ಲಮ್ಮ ಎಂದು ಬಿಗ್ ಬಾಸ್ ಹೇಳಿದಾಗ, ಮಲ್ಲಮ್ಮ ಅವರು ಬಿಗ್ ಬಾಸ್​ಗೆನೇ ಒಂದು ಒಗಟು ಕೇಳಿದ್ದಾರೆ. ಇದನ್ನ ಕೇಳಿ ಬಿಗ್ ಬಾಸ್ ಕಕ್ಕಾಬಿಕ್ಕಿ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಅನ್ನೇ ಮಾತಾಡೋದಕ್ಕೆ.. ಉತ್ತರ ಕೊಡೋದಕ್ಕೆ ಯೋಚನೆ ಮಾಡುವಂತೆ ಮಾಡುಬಿಟ್ರಿ ಎಂದು ಹೇಳಿದ್ದಾರೆ. ಸದ್ಯ ದೊಡ್ಮನೆಯೊಳಹೆ ಮಲ್ಲಮ್ಮ ಹವಾ ಜೋರಾಗಿದೆ.

BBK 12: ಮೊದಲ ವಾರದಲ್ಲೇ ನಿರ್ಧಾರವಾಗಲಿದೆ ಬಿಗ್ ಬಾಸ್ ಫೈನಲಿಸ್ಟ್: 3ನೇ ವಾರದಲ್ಲಿ ಫೈನಲ್