ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mokshitha Pai: ಬಿಗ್ ಬಾಸ್ ಮೋಕ್ಷಿತಾ ಮೊದಲ ಸಿನಮಾಕ್ಕೆ ಭರ್ಜರಿ ರೆಸ್ಪಾನ್ಸ್: ಭಾವುಕಳಾದ ನಟಿ

ಈ ಸಿನಿಮಾದಲ್ಲಿ ಮೋಕ್ಷಿತಾ ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಇದೀಗ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಭಾವುಕರಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಮೋಕ್ಷಿತಾ ಮೊದಲ ಸಿನಮಾಕ್ಕೆ ಭರ್ಜರಿ ರೆಸ್ಪಾನ್ಸ್

Middle Class Ramayana -

Profile Vinay Bhat Sep 16, 2025 3:35 PM

ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಬಿಗ್‌ ಬಾಸ್ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿ, ಕನ್ನಡಿಗರ ಮನ ಗೆದ್ದಿದ್ದಾರೆ. ದೊಡ್ಮನೆಯೊಳಗೆ ತಮ್ಮ ಸೌಂದರ್ಯ, ಬೋಲ್ಡ್ ಆಗಿ ಆಟವಾಡುವ ರೀತಿ ಹಾಗೂ ನೇರವಾದ ಮಾತುಗಳಿಂದಲೇ ಜನರಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಮೋಕ್ಷಿತಾ ಇದೀಗ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ನಾಯಕಿಯಾದ ನಟಿಸಿದ ಮೊದಲ ಸಿನಿಮಾ ‘ಮಿಡಲ್ ಕ್ಲಾಸ್ ರಾಮಾಯಣ' ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.

ಮೋಕ್ಷಿತಾ ಪೈ, ಯುವ ನಟ ವಿನುಗೌಡ ಹಾಗೂ ಯುಕ್ತಾ ಅಭಿನಯದ ಮಿಡಲ್ ಕ್ಲಾಸ್ ರಾಮಾಯಣ ಚಿತ್ರ ಮಿಡಲ್ ಕ್ಲಾಸ್ ಮಂದಿಯ ಮದುವೆಯ ಸಂಕಷ್ಟಗಳನ್ನು ಹೇಳುತ್ತದೆ. ಈ ಸಿನಿಮಾ ಮೇಲೆ ಮೋಕ್ಷಿ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರು. ಯಾಕೆಂದರೆ ಈ ಸಿನಿಮಾದಲ್ಲಿ ಮೋಕ್ಷಿತಾ ತಮ್ಮ ರಿಯಲ್ ಕಲರ್ ಮರೆಮಾಚಿ, ಸೌಂದರ್ಯ ಅನ್ನೋ ಹೆಸರಿಗೆ ತದ್ವಿರುದ್ಧವಾದಂತ ರೂಪ ತಾಳಿದ್ದಾರೆ. ಇದೀಗ ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಭಾವುಕರಾಗಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಥಿಯೇಟರ್ ಒಳಗಡೆ ಅಭಿಮಾನಿಗಳ ಜೊತೆ ವಿಡಿಯೋ ಒಂದನ್ನು ಹಂಚಿಕೊಂಡಿರುವ ಮೋಕ್ಷಿತಾ, ‘‘ನನ್ನ ಮೊದಲ ಸಿನೆಮಾವನ್ನು ಚಿತ್ರಮಂದಿರದಲ್ಲಿ ನೋಡಿದ ಅನುಭವವೇ ವಿಭಿನ್ನ. ಪ್ರೇಕ್ಷಕರಿಂದ ಬಂದ ಪ್ರಾಮಾಣಿಕ ಅಭಿಪ್ರಾಯಗಳು ನನ್ನ ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಅವರ ಮಾತುಗಳಲ್ಲಿ ಕಂಡ ಸಂತೋಷ ಮತ್ತು ಪ್ರೋತ್ಸಾಹ ನನಗೆ ಇನ್ನಷ್ಟು ಶಕ್ತಿ ನೀಡಿದೆ. ಈ ಅದ್ಭುತ ಪ್ರಯಾಣದಲ್ಲಿ ನನ್ನ ಜೊತೆ ನಿಂತ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಅವರ ಪರಿಶ್ರಮ ಮತ್ತು ಸಹಕಾರವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಪ್ರೇಕ್ಷಕರು ತೋರಿಸಿದ ಪ್ರೀತಿ ಮತ್ತು ಸ್ವೀಕಾರವೇ ನನಗೆ ದೊಡ್ಡ ಪ್ರಶಸ್ತಿ. ನಿಮ್ಮ ಪ್ರೀತಿ ಸಹಕಾರಕ್ಕೆ ಧನ್ಯವಾದಗಳು’’ ಎಂದು ಬರೆದುಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಮೋಕ್ಷಿ ಕಪ್ಪು ಬಣ್ಣದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮೈಬಣ್ಣ ಕಪ್ಪು ಇರೋ ಹುಡುಗಿಯ ಜೊತೆಗೆ ಲವ್ ಹಾಗೂ ಮದ್ವೆ ಹೀಗೆ ಈ ಎರಡೂ ಹಂತದಲ್ಲಿ ಏನೆಲ್ಲ ಆಗುತ್ತದೆ ಎಂಬ ವಿಷಯದ ಮೇಲೆ ಈ ಚಿತ್ರ ಇದೆ. ಅಂಜನಾದ್ರಿ ಪ್ರೊಡಕ್ಷನ್ಸ್ ಮತ್ತು ವಾವ್ ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಜಯರಾಮ್ ಗಂಗಪ್ಪನಹಳ್ಳಿ ನಿರ್ಮಿಸಿರುವ ಈ ಚಿತ್ರವನ್ನು ಧನುಷ್ ಗೌಡ ವಿ ನಿರ್ದೇಶಿಸಿದ್ದಾರೆ.

Bhagya Lakshmi Serial: ಎಂಡಿ ಪೋಸ್ಟ್​ಗೆ ರಾತ್ರಿಯೆಲ್ಲ ಓದಿ ಇಂಟರ್​ವ್ಯೂಗೆ ರೆಡಿಯಾದ ಭಾಗ್ಯ