ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸ್ಕೂಲ್​ನಲ್ಲಿ ಭಾಗ್ಯಾಗೆ ಅವಮಾನ ಮಾಡಿದವನ ಬೆವರಿಳಿಸಿದ ಆದೀಶ್ವರ್

ಪ್ರಿನ್ಸಿಪಾಲ್ಗೆ ಬೇರೆ ದಾರಿಯಿಲ್ಲದೆ ರ್ಯಾಗ್ ಮಾಡಿದವನದ್ದೇ ತಪ್ಪು ಎಂದು ಹೇಳಿದ್ದಾರೆ.. ಅಷ್ಟೇ ಅಲ್ಲದೆ ಆತನ ಕೈಯಿಂದ ತನ್ಮಯ್ ಬಳಿ ಕ್ಷಮೆ ಕೇಳಲು ಹೇಳಿದ್ದಾನೆ. ಆದೀಯ ಈ ಮಾತಿನಿಂದ ಭಾಗ್ಯಾಗೆ ಖುಷಿ ಆಗಿದೆ. ಇದರಿಂದ ಭಾಗ್ಯ ಮತ್ತು ಆದೀ ಮತ್ತಷ್ಟು ಹತ್ತಿರವಾಗಿದ್ದಾನೆ. ಸದ್ಯ ಇವರಿಬ್ಬರ ಮಧ್ಯೆ ಮುಂದೇನು ಆಗುತ್ತೆ ಎಂಬುದು ನೋಡಬೇಕಿದೆ.

ಭಾಗ್ಯಾಗೆ ಅವಮಾನ ಮಾಡಿದವನ ಬೆವರಿಳಿಸಿದ ಆದೀಶ್ವರ್

Bhagya Lakshmi serial

Profile Vinay Bhat Aug 2, 2025 12:02 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆಯ ಬಳಿಕ ಸದ್ಯ ಭಾಗ್ಯ ಹಾಗೂ ಆದೀಶ್ವರ್ ಕಾಮತ್ ನಡುವಣ ಲವ್​ ಟ್ರ್ಯಾಕ್ ಶುರುವಾಗುವುದರಲ್ಲಿದೆ. ಭಾಗ್ಯ ಯಾವುದೇ ಕಷ್ಟದಲ್ಲಿದ್ದರೂ ಅಲ್ಲಿಗೆ ಆದೀ ಪ್ರತ್ಯಕ್ಷನಾಗುತ್ತಿದ್ದಾನೆ. ಭಾಗ್ಯಾಳ ಗುಣ-ನಡತೆ, ಆಕೆಯ ಮಾತಿಗೆ ಮನಸೋತಿದ್ದಾನೆ ಆದೀ. ಸದ್ಯ ಭಾಗ್ಯ ತನ್ಮಯ್ ವಿಚಾರವಾಗಿ ಸ್ಕೂಲ್​ಗೆ ಬಂದಾಗ ಅಲ್ಲಿ ಆಕೆಗೆ ಅವಮಾನ ಆಗಿದೆ. ಈ ಸಂದರ್ಭ ಆದೀಶ್ವರ್ ಬಂದಿದ್ದು, ಅವಮಾನ ಮಾಡಿದವನ ಬಳಿ ಕ್ಷಮೆ ಕೇಳುವಂತೆ ಮಾಡಿದ್ದಾನೆ.

ಮೊನ್ನೆ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಭಾಗ್ಯ ಬಗ್ಗೆ ಕೇವಲವಾಗಿ ಮಾತನಾಡಿದ ಅರ್ಚಕನ ವಿರುದ್ಧ ಆದೀ ಕೆಂಡಕಾರಿದ್ದ. ಅರ್ಚಕರು ಭಾಗ್ಯಾಗೆ ಕುಂಕುಮವನ್ನು ಮೊದಲಿಗೆ ತಾಳಿಗೆ ಹಚ್ಚುಕೊಳ್ಳಿ ಎಂದು ಹೇಳಿದ್ದಾರೆ.. ಆದರೆ, ಭಾಗ್ಯ ಕೊರಳಲ್ಲಿ ತಾಳಿ ಇರುವುದಿಲ್ಲ.. ಗಂಡ ಇರಬೇಕಾದರೆನೇ ತಾಳಿ ಬಿಚ್ಚಿಟ್ಟಿದ್ದೀಯಾ?, ಅದೇನು ಸಂಸ್ಕಾರನೊ ಏನೋ ಎಂದು ಭಾಗ್ಯಾಗೆ ಹೇಳಿದ್ದಾರೆ. ಇದರಿಂದ ಕೆರಳಿದ ಆದೀಶ್ವರ್, ಒಂದು ತಾಳಿ ಇಲ್ಲ ಅಂದ ಮಾತ್ರಕ್ಕೆ ಸಂಸ್ಕಾರ ಇಲ್ಲ ಅಂತಾನಾ?, ದೇವರ ಮೇಲೆ ಇಷ್ಟು ಭಯ-ಭಕ್ತಿ ಇರೋರು ತಾಳಿ ತೆಗೆದು ಇಟ್ಟಿದ್ದಾರೆ ಅಂದ್ರೆ ಏನೋ ದೊಡ್ಡದಾಗಿ ಆಗಿರಬೇಕು ಅಲ್ವಾ.. ನೀವು ಹೀಗೆಲ್ಲ ಮಾತಾಡೋದು ಸರಿ ಅಲ್ಲ ಎಂದು ಅರ್ಚಕರಲ್ಲಿ ಹೇಳಿದ್ದ.

ಇದೀಗ ಆದೀ ಮತ್ತೊಮ್ಮೆ ಭಾಗ್ಯಾಗೆ ರಕ್ಷೆಯಾಗಿ ನಿಂತಿದ್ದಾನೆ. ಭಾಗ್ಯ ಮಗ ತನ್ಮಯ್​ ಮನೆಗೆ ಬಂದು ನಾಳೆಯಿಂದ ನಾನು ಸ್ಕೂಲ್​ಗೆ ಹೋಗಲ್ಲ.. ಒಬ್ಬ ಹುಡುಗ ನನ್ನನ್ನು ರ್ಯಾಗ್ ಮಾಡ್ತಾನೆ.. ನನಗೆ ಹೊಡೆಯುತ್ತಾನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ನಾಳೆ ಶಾಲೆಗೆ ಹೋಗಿ ಮಾತಾಡೋಣ ಎಂದಿದ್ದಾಳೆ. ಹಾಗೆ ಮರುದಿನ ಶಾಲೆಗೆ ಹೋಗಿ ಮಾತನಾಡಿದಾಗ ಆತ ಶ್ರೀಮಂತ ಹುಡುಗನ ಮಗ ಹಾಗೂ ಈ ಸ್ಕೂಲ್​ನಲ್ಲಿ ಆತನ ತಂದೆ ಶೇರ್ ಕೂಡ ಇದೆ ಅವನಿಗೆ ಏನೂ ಹೇಳೋಕೆ ಆಗಲ್ಲ ಎಂದಿದ್ದಾರೆ.

ಆಗ ಭಾಗ್ಯಾಳೇ ಮುಂದೆ ಬಂದು ಆ ಹುಡುಗನಿಗೆ ಬುದ್ದಿ ಹೇಳಲು ಮುಂದಾಗಿದ್ದಾಳೆ. ಆದರೆ, ಆತ ತನ್ನ ತಂದೆ ಕಾಲ್ ಮಾಡಿ ಬರೋಕೆ ಹೇಳಿದ್ದಾನೆ. ಬಳಿಕ ಆ ಹುಡುಗನ ತಂದೆ ಬಂದು ಭಾಗ್ಯಾಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾನೆ. ಭಾಗ್ಯ ಅವರ ಬಳಿ ನಿಮ್ಮ ಮಗ ತಪ್ಪು ಮಾಡಿದ್ದಾನೆ.. ಕ್ಷಮೆ ಕೇಳಲು ಹೇಳಿ ಎಂದಿದ್ದಾಳೆ. ಅದಕ್ಕೆ ಆತ ನಿನ್ಗೆ ನಾನು ಯಾರೂ ಅಂತ ಗೊತ್ತಿಲ್ಲ.. ಇಂತ ಕೆಳಮಟ್ಟದವರ ಜೊತೆ ಮಾತನಾಡಿಕೊಂಡು ಇರೋಕೆ ಟೈಮ್ ಇಲ್ಲ.. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ.. ನಿನ್ನಂತವಳ ಜೊತೆ ಮಾತಾಡೋಕೆ ಆಗಲ್ಲ.. ನಿಮ್ಮ ಮನೆಯಲ್ಲಿ ಯಾರೂ ಗಂಡಸರು ಇಲ್ವಾ ಎಂದು ಕೇಳಿದ್ದಾನೆ.

ಆಗ ಆದೀಶ್ವರ್ ಕಾಮತ್ ಬಂದು ನಾನು ಇದ್ದೇನೆ ಎಂದು ಹೇಳಿದ್ದಾನೆ. ಆದೀಯನ್ನು ನೋಡಿ ಆ ಹುಡುಗನ ಅಪ್ಪನಿಗೆ ಹಾಗೂ ಪ್ರಿನ್ಸಿಪಾಲ್​ಗೆ ಶಾಕ್ ಆಗಿದೆ. ಆದೀಯನ್ನು ನೋಡಿದ ತಕ್ಷಣ ಆ ಹುಡುಗನ ಅಪ್ಪ, ಸರ್ ನೀವು.. ನಾನು ನಿಮ್ಮ ಕಂಪನಿ ಶೇರಿಂಗ್​ನಲ್ಲಿ ಪಾರ್ಟನರ್ ಆಗಬೇಕು ಅಂತ ಇದ್ದೀನಿ.. ನಿಮ್ಮನ್ನ ಭೇಟಿ ಆಗೋಕೆ ತುಂಬಾ ಟ್ರೈ ಮಾಡ್ತಾ ಇದ್ದೇನೆ.. ಆದ್ರೆ ನೀವು ಸಿಗ್ತಾನೆ ಇಲ್ಲ ಎಂದಿದ್ದಾನೆ. ಅದಕ್ಕೆ ಆದೀ ನಿಮ್ಮ ಪಾರ್ಟನರ್ ಪ್ರಪೋಸಲ್​ನ ನಾನು ರಿಜೆಕ್ಟ್ ಮಾಡ್ತೀನಿ ಎಂದು ನೇರವಾಗಿ ಹೇಳಿದ್ದಾನೆ. ನಿಮ್ಮದು ಆ್ಯರೊಗೆಂಟ್ ಮಾತು.. ಈಗ ಇಟ್ಕೋಂಡು ಮಾತಾಡ್ತಾ ಇದ್ದೀರಾ.. ನಿಮ್ಮಂತವರವನ್ನು ಪಾರ್ಟನರ್ ಮಾಡೋಕೆ ಆಗಲ್ಲ ಎಂದು ಹೇಳಿದ್ದಾನೆ.



ಅಷ್ಟೇ ಅಲ್ಲದೆ ಒಂದು ಹೆಣ್ಣು ಮಕ್ಕಳ ಜೊತೆ ಹೇಗೆ ಮಾತನಾಡ ಬೇಕು ಅಂತ ನಿಮ್ಗೆ ಗೊತ್ತಿಲ್ಲ ಎಂದು ಜೋರಿನಲ್ಲಿ ಹೇಳಿದ್ದಾನೆ. ಪ್ರಿನ್ಸಿಪಾಲ್​ಗು ಮೈಚಳಿ ಬಿಡಿಸಿದ ಆದೀ, ನಿಮ್ಮನ್ನ ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸಿದ್ರೆ ಹೀಗಾ ಮಾಡೋದು.. ಮಕ್ಕಳಿಗೆ ಯುನಿಫಾರ್ಮ್ ಯಾಕೆ ಹಾಕೋದು ಹೇಳಿ.. ಯಾರು ದೊಡ್ಡವರ ಮನೆಯಿಂದ ಬಂದಿದ್ದಾರೆ.. ಯಾರು ಬಡವರ ಮನೆಯಿಂದ ಬಂದಿದ್ದಾರೆ ಈರೀತಿಯ ಅಲೋಚನೆ ಮಕ್ಕಳ ಮನಸ್ಸಿಗೆ ಬಾರದೆ ಇರಲಿ ಅಂತ.. ಆದ್ರೆ ಆದ್ರೆ ನೀವೇನು ಮಾಡ್ತಾ ಇದ್ದೀರಾ.. ಇಲ್ಲಿ ತಪ್ಪು ಯಾರದ್ದು ಅಂತ ನೀವೇ ಹೇಳಬೇಕು ಈಗ ಎಂದು ಆದೀ ಹೇಳಿದ್ದಾನೆ.

ಪ್ರಿನ್ಸಿಪಾಲ್​ಗೆ ಬೇರೆ ದಾರಿಯಿಲ್ಲದೆ ರ್ಯಾಗ್ ಮಾಡಿದವನದ್ದೇ ತಪ್ಪು ಎಂದು ಹೇಳಿದ್ದಾರೆ.. ಅಷ್ಟೇ ಅಲ್ಲದೆ ಆತನ ಕೈಯಿಂದ ತನ್ಮಯ್ ಬಳಿ ಕ್ಷಮೆ ಕೇಳಲು ಹೇಳಿದ್ದಾನೆ. ಆದೀಯ ಈ ಮಾತಿನಿಂದ ಭಾಗ್ಯಾಗೆ ಖುಷಿ ಆಗಿದೆ. ಇದರಿಂದ ಭಾಗ್ಯ ಮತ್ತು ಆದೀ ಮತ್ತಷ್ಟು ಹತ್ತಿರವಾಗಿದ್ದಾನೆ. ಸದ್ಯ ಇವರಿಬ್ಬರ ಮಧ್ಯೆ ಮುಂದೇನು ಆಗುತ್ತೆ ಎಂಬುದು ನೋಡಬೇಕಿದೆ.

Mokshitha Pai: ಹೆಣ್ಣಿಗೆ ಸೀರೆ ಲಕ್ಷಣ ಎಂದು ಸಾರಿಯಲ್ಲಿ ವಿಶೇಷ ವಿಡಿಯೋ ಹಂಚಿಕೊಂಡ ಮೋಕ್ಷಿತಾ