ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್: ಉರಿದುಕೊಂಡ ಮೀನಾಕ್ಷಿ

ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಮೀನಾಕ್ಷಿ-ಕನ್ನಿಕಾ ಹೊಂಚು ಹಾಕುತ್ತಿದ್ದಾರೆ. ಆದರೆ, ಅತ್ತ ಪೂಜಾ ಮೊದಲ ದಿನವೇ ರಾಮ್ದಾಸ್ ಮನಗೆದ್ದಿದ್ದಾಳೆ. ಇದನ್ನು ಕಂಡು ಮೀನಾಕ್ಷಿಯ ಕೋಪ ನೆತ್ತಿಗೇರಿದೆ.

ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್​ದಾಸ್

Bhagya Lakshmi Serial

Profile Vinay Bhat Jul 24, 2025 12:10 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆ ಈಡೇರಿದ್ದು, ಪೂಜಾ ಬಲಗಾಲಿಟ್ಟು ರಾಮ್​ದಾಸ್ ಮನೆಯ ಹೊಸ್ತಿಲು ತುಳಿದಿದ್ದಾಳೆ. ಅತ್ತ ಮೀನಾಕ್ಷಿ-ಕನ್ನಿಕಾ ಪ್ಲ್ಯಾನ್ ಎಲ್ಲ ಫೇಲ್ ಆಗಿದ್ದು, ಈ ಪೂಜಾಳಿಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು.. ಅವಳಾಗಿಯೇ ಈ ಮನೆಯಿಂದ ಹೊರಹೋಗಬೇಕು ಎಂದು ಹೊಂಚು ಹಾಕುತ್ತಿದ್ದಾರೆ. ಆದರೆ, ಅತ್ತ ಪೂಜಾ ಮೊದಲ ದಿನವೇ ರಾಮ್​ದಾಸ್ ಮನಗೆದ್ದಿದ್ದಾಳೆ. ಇದನ್ನು ಕಂಡು ಮೀನಾಕ್ಷಿಯ ಕೋಪ ನೆತ್ತಿಗೇರಿದೆ.

ಮದುವೆ ಮುಗಿದ ಮನೆಗೆ ಬಂದಾಗ ಆದೀಶ್ವರ್-ರಾಮ್​ದಾಸ್ ಪ್ರೀತಿಯಿಂದ ಪೂಜಾಳನ್ನು ಬರಮಾಡಿಕೊಂಡಿದ್ದಾರೆ. ಪೂಜಾಗೆ ಈ ಹೊಸ ಮನೆ ಆರಂಭದಲ್ಲಿ ಇರಿಸು-ಮುರಿಸು ತಂದಿದೆ. ಊಟ ಮಾಡಲೂ ಮನಸ್ಸು ಬರಲಿಲ್ಲ. ಬಳಿಕ ಭಾಗ್ಯಾಗೆ ವಿಡಿಯೋ ಕಾಲ್ ಮಾಡಿ ಮಾತನಾಡಿ ಸಮಾಧಾನ ಮಾಡಿಕೊಂಡಿದ್ದಾಳೆ. ಮತ್ತೊಂದೆಡೆ ಪೂಜಾ-ಕಿಶನ್ ಮೊದಲ ರಾತ್ರಿಗೆ ಹೂವಿನ ಅಲಂಕಾರದಿಂದ ರೆಡಿ ಮಾಡಿದ್ದ ಹಾಸಿಗೆಯನ್ನು ಕನ್ನಿಕಾ ಹಾಳು ಮಾಡಿದ್ದಾಳೆ. ಇದನ್ನು ಕಂಡು ಆದೀಶ್ವರ್ ಕನ್ನಿಕಾಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಹೀಗೆ ಕನ್ನಿಕಾ-ಮೀನಾಕ್ಷಿ ಪ್ಲ್ಯಾನ್ ಯಾವುದು ಕೆಲಸ ಮಾಡುತ್ತಿಲ್ಲ.

ಮರುದಿನ ಪೂಜಾ ಬೇಗನೆ ಎದ್ದು ದೇವರ ಪೂಜೆ ಮಾಡಿ, ತುಳಸಿ ಕಟ್ಟೆಗೆ ಸುತ್ತು ಬಂದು ಬತ್ತಿ ಹೊತ್ತಿಸಿದ್ದಾಳೆ. ರಂಗೋಲಿ ಹಾಕಲು ಪೂಜಾಗೆ ತಿಳಿದಿರುವುದಿಲ್ಲ.. ಹೀಗಾಗಿ ಭಾಗ್ಯಾಗೆ ವಿಡಿಯೋ ಕಾಲ್ ಮಾಡಿ ರಂಗೋಲಿ ಹಾಕುವುದು ಹೇಗೆ ಎಂದು ಪೂಜಾ ಕೇಳುತ್ತಾಳೆ. ಭಾಗ್ಯ ಹೇಳಿದಂತೆ ಪೂಜಾ ರಂಗೋಲಿ ಬಿಡಿಸಿ ಎಲ್ಲವನ್ನು ಅಚ್ಚುಕಟ್ಟಾಗಿ ಮಾಡಿದ್ದಾಳೆ. ಇದನ್ನು ಕಂಡು ರಾಮ್​ದಾಸ್​ ಭಾವುಕರಾಗಿದ್ದಾರೆ. ಈ ಹಿಂದೆ ನನ್ನ ಹೆಂಡತಿ ಇದ್ದಾಗ ಇದನ್ನೆಲ್ಲ ಮಾಡ್ತಾ ಇದ್ದಳು.. ಅವಳು ಹೋದ ಬಳಿಕ ಈರೀತಿ ಯಾರೂ ಮಾಡುತ್ತಿರುಲಿಲ್ಲ.. ಈಗ ಪೂಜಾ ಆ ಕಾರ್ಯವನ್ನು ಮುಂದುವರೆಸುತ್ತಿದ್ದಾಳೆ.. ಇವಳೆ ನಮ್ಮ ಮನೆಗೆ ತಕ್ಕ ಸೊಸೆ ಎಂದು ಅಂದುಕೊಂಡಿದ್ದಾನೆ.

ಆಗ ಅಲ್ಲಿಗೆ ಮಿನಾಕ್ಷಿ ಬರುತ್ತಾಳೆ. ಮೀನಾಕ್ಷಿ ಬಳಿಯೂ ರಾಮ್​ದಾಸ್ ಅದೇ ವಿಚಾರವನ್ನು ಹೇಳುತ್ತಾರೆ. ಎಷ್ಟು ಸಂಸ್ಕಾರವಂತ ಕುಟುಂಬದವಳು ನಮ್ಮ ಪೂಜಾ ಎಂದು ಹೇಳುತ್ತಾರೆ.. ಒಲ್ಲದ ಮನಸ್ಸಿನಿಂದ ಮಿನಾಕ್ಷಿ ಹೌದು ಎನ್ನುತ್ತಾಳೆ. ಬಳಿಕ ಕನ್ನಿಕಾ ಬಳಿ ಬಂದು, ಆ ಭಾಗ್ಯ ಪೂಜಾಳಿಗೆ ಕೂಡ ಚೆನ್ನಾಗಿಯೇ ಟ್ರೈನ್ ಮಾಡಿದ್ದಾಳೆ.. ಪೂಜಾ ಇಲ್ಲಿ ಜೀವನ ಮಾಡೋದು ತುಂಬಾ ಈಸಿ ಅಂದುಕೊಂಡಿದ್ದಾಳೆ. ಅವಳಿಗೆ ನರಕ ತೋರಿಸ್ತೇನೆ.. ಅವಳಾಗಿಯೇ ಈ ಮನೆ ಬಿಟ್ಟು ಓಡಿ ಹೋಗಬೇಕು ಹಾಗೆ ಮಾಡ್ತೇನೆ ಎಂದು ಹೇಳಿದ್ದಾಳೆ.

Serial Views: 25 ದಿನಗಳಲ್ಲಿ 85 ಕೋಟಿ ವೀಕ್ಷಣೆ: ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಿದ ಈ ಧಾರಾವಾಹಿ ಯಾವುದು ಗೊತ್ತೇ?

ಇದಾದ ಬಳಿಕ ಎಲ್ಲರೂ ತಿಂಡಿಗೆ ಬರುತ್ತಾರೆ.. ರಾಮ್​ದಾಸ್ ಬಂದು ಅಡುಗೆ ಬಟ್ಟರ ಬಳಿ ತಿಂಡಿಗೆ ತಯಾರಾಗಿದೆ ಅಲ್ವಾ ಎಂದು ಕೇಳುತ್ತಾರೆ.. ಆದರೆ, ಆತ ತಿಂಡಿ ಮಾಡಿಲ್ಲ.. ಮೀನಾಕ್ಷಿ ಮೇಡಂ ತಿಂಡಿ ರೆಡಿ ಮಾಡೋದು ಬೇಡ ಅಂತ ಹೇಳಿದ್ರು ಎಂದು ಹೇಳುತ್ತಾನೆ. ಇದನ್ನ ಕೇಳಿ ರಾಮ್​ದಾಸ್​ಗೆ ಶಾಕ್ ಆಗುತ್ತದೆ. ಮೀನಾಕ್ಷಿಯನ್ನು ಕರೆದು ವಿಚಾರಿಸಿದಾಗ ಆಕೆ ಹೇಳಿದ ಮಾತು ಕಿಶನ್-ಪೂಜಾಗೆ ಆಘಾತ ತರಿಸಿದೆ. ‘ಈ ಮನೆಯ ಹೊಸ ಸೊಸೆ ಪೂಜಾನೇ ತಿಂಡಿ ಮಾಡಿದ್ರೆ ಒಳ್ಳೆಯದಿರುತ್ತೆ’ ಎಂದು ಮೀನಾಕ್ಷಿ ಹೇಳಿದ್ದಾಳೆ.

ಇದನ್ನ ಕೇಳಿ ಕಿಶನ್​-ಪೂಜಾಗೆ ಏನು ಹೇಳಬೇಕು ಎಂದು ತಿಳಿಯುವುದಿಲ್ಲ.. ಯಾಕೆಂದರೆ ಪೂಜಾಗೆ ಅಡುಗೆ ಮಾಡಲು ಬರುವುದಿಲ್ಲ.. ಇದನ್ನ ಅರಿತೇ ಮೀನಾಕ್ಷಿ ಪೂಜಾಗೆ ತಿಂಡಿ ರೆಡಿ ಮಾಡಲು ಹೇಳಿದ್ದಾಳೆ. ಸದ್ಯ ಪೂಜಾ ಏನು ಮಾಡುತ್ತಾಳೆ.. ಮೀನಾಕ್ಷಿ ತನ್ನ ರಿವೆಂಜ್ ತೀರಿಸಿಕೊಳ್ಳುತ್ತಾಳ ಅಥವಾ ಪೂಜಾ, ಭಾಗ್ಯಾಗೆ ಪುನಃ ಕಾಲ್ ಮಾಡಿ ಅಡುಗೆ ಮಾಡುವುದನ್ನು ಕಲಿಯುತ್ತಾಳೆ ಎಂಬುದು ನೋಡಬೇಕಿದೆ.