Muddu Sose: ಮುದ್ದು ಸೊಸೆ ಧಾರಾವಾಹಿಯಲ್ಲಿ ಮಹಾ ತಿರುವು: ಎಂಟ್ರಿ ಕೊಟ್ಟ ಹನು-ಧನು ಜೋಡಿ
ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಇತ್ತೀಚೆಗಷ್ಟೆ 50 ಸಂಚಿಕೆ ಪೂರೈಸಿತು. ಇದೀಗ ಧಾರಾವಾಹಿಯಲ್ಲಿ ಮಹಾ ತಿರುವೊಂದನ್ನು ನೀಡಲಾಗಿದೆ. ಇದಕ್ಕಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುಚುಕು ಗೆಳೆಯರು ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ.

Muddu Sose Serial

ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ (Muddu Sose Serial) ಧಾರಾವಾಹಿ ಇತ್ತೀಚೆಗಷ್ಟೆ 50 ಸಂಚಿಕೆ ಪೂರೈಸಿ ಭರ್ಜರಿ ಯಶಸ್ಸು ಸಾಧಿಸುತ್ತಿದೆ. ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಯಲ್ಲಿ ಇದು ಕೂಡ ಒಂದಾಗಿದೆ. ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ.
ಇದೀಗ ಈ ಧಾರಾವಾಹಿಯಲ್ಲಿ ಮಹಾ ತಿರುವೊಂದನ್ನು ನೀಡಲಾಗಿದೆ. ಇದಕ್ಕಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಕುಚುಕು ಗೆಳೆಯರು ಹನುಮಂತ ಲಮಾಣಿ ಮತ್ತು ಧನರಾಜ್ ಆಚಾರ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಹೇಳಿರುವಂತೆ ಮುದ್ದು ಸೊಸೆ ಬಾಲ್ಯವಿವಾಹದ ಕಥೆ. ಡಾಕ್ಟರ್ ಆಗಬೇಕು ಎಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ವಿದ್ಯಾ, ಸ್ಕೂಲ್ ಬೆಂಚ್‌ನಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಮುದ್ದು ಸೊಸೆ ಹೇಳುತ್ತದೆ.
ಆರಂಭದಲ್ಲಿ ವಿದ್ಯಾಗೆ ಈ ಮದುವೆ ಇಷ್ಟ ಇರುವುದಿಲ್ಲ.. ಹೀಗಾಗಿ ವಿದ್ಯಾ ಮದುವೆಗೂ ಹಿಂದಿನ ದಿನ ಪೊಲೀಸರಿಗೆ ಫೋನ್ ಮಾಡಿದ್ದಳು. ಮೈನರ್ ಎಂಬ ಕಾರಣಕ್ಕೆ ಅಂದು ಮದುವೆ ನಿಂತುಹೋಯ್ತು. ಅಷ್ಟೇ ಅಲ್ಲ.. ಶಿವರಾಮೇಗೌಡರನ್ನ ಪೊಲೀಸರು ಅರೆಸ್ಟ್ ಮಾಡಿದ್ದರು. ಪೊಲೀಸರಿಗೆ ಫೋನ್ ಮಾಡಿದ ಹುಡುಗಿ ವಿದ್ಯಾ ಅನ್ನೋದು ಭದ್ರನ ಕುಟುಂಬಕ್ಕೆ ಗೊತ್ತಿಲ್ಲ. ತನ್ನ ಅಪ್ಪನನ್ನು ಜೈಲಿಗೆ ಕಳುಹಿಸಿದವರು ಯಾರು ಎಂದು ಭದ್ರ ಅನೇಕ ಬಾರಿ ಕಂಡುಹಿಡಿಯಲು ಪ್ರಯತ್ನ ಪಟ್ಟ ಆದರೆ ಅದಕ್ಕೆ ಉತ್ತರ ಸಿಕ್ಕಿರಲಿಲ್ಲ. ಈಗ ಈ ಸತ್ಯ ಅನಾವರಣಗೊಳ್ಳುವ ಸಮಯ ಬಂದಿದೆ.
ಇದಕ್ಕಾಗಿ ಧಾರಾವಾಹಿಗೆ ಹನುಮಂತ ಲಮಾಣಿ ಹಾಗೂ ಧನರಾಜ್ ಆಚಾರ್ ಸ್ಪೆಷಲ್ ಎಂಟ್ರಿಕೊಟ್ಟಿದ್ದಾರೆ. ಇವರು ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮದುವೆಯಾದಮೇಲೆ ಮೊದಲ ಬಾರಿಗೆ ಮಾವನ ಮನೆಗೆ ಭದ್ರೇಗೌಡ ಬಂದಿದ್ದಾನೆ. ‘ರಾಯರು ಬಂದರು ಮಾವನ ಮನೆಗೆ’ ವಿಶೇಷ ಸಂಚಿಕೆಗಳು ನಡೆಯುತ್ತಿದೆ. ಮಾವಯ್ಯ ಚೆಲುವರಾಜ ಜೊತೆ ಅಳಿಯ ಭದ್ರೇಗೌಡ ಎಣ್ಣೆ ಪಾರ್ಟಿ ಮಾಡುವ ವೇಳೆ ಹನುಮಂತ ಹಾಗೂ ಧನರಾಜ್ ಎಂಟ್ರಿಕೊಟ್ಟಿದ್ದಾರೆ.
ಈ ಎಣ್ಣೆ ಪಾರ್ಟಿಯಲ್ಲಿ ಚೆಲುವ ಕುಡಿದು, ಶಿವರಾಮೇಗೌಡ ಜೈಲಿಗೆ ಹೋಗ ವಿಷ್ಯ ಹೇಳಿದ್ದಾನೆ. ಫೋನ್ ಮಾಡಿದ್ದು ಅವಳೇ, ನನ್ನ ಮಗಳು ವಿದ್ಯಾ ಅಂತ ಚೆಲುವ ಹೇಳಿದ್ದಾನೆ. ಇದನ್ನು ಕೇಳಿದ ಭದ್ರನ ಮುಖ ಗಂಟಿಕ್ಕಿದೆ. ಸದ್ಯ ಭದ್ರ ಮುಂದೇನು ಮಾಡ್ತಾನೆ? ಎಂಬುದು ರೋಚಕತೆ ಸೃಷ್ಟಿಸಿದೆ.
Bhagya Lakshmi Serial: ಪೂಜಾಳ ಒಳ್ಳೆ ಗುಣಕ್ಕೆ ಮನಸೋತ ರಾಮ್ದಾಸ್: ಉರಿದುಕೊಂಡ ಮೀನಾಕ್ಷಿ