ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸೀರಿಯಲ್ ಮಗಳ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ ಸುಷ್ಮಾ ರಾವ್

ಭಾಗ್ಯ/ಸುಷ್ಮಾ, ತನ್ನ ಸೀರಿಯಲ್ ಮಗಳು ತನ್ವಿ/ಅಮೃತಾ ಗೌಡ ಜೊತೆ ಸಕತ್ ರೀಲ್ಸ್ ಮಾಡಿದ್ದಾರೆ. ಆಕಾಶ ಭೂಮಿ ಇಂದು ಒಂದಾಗೋ ಹಾಗಿದೆ ಹಾಡಿಗೆ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಅಸಲಿಗೆ, ಸುಷ್ಮಾ ಭರತನಾಟ್ಯ ಕಲಾವಿದೆ. ನವದೆಹಲಿ, ಮುಂಬೈ, ಜೈಪುರ ಮತ್ತು ತಿರುವನಂತಪುರಂ ಮುಂತಾದ ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ.

ಸೀರಿಯಲ್ ಮಗಳ ಜೊತೆ ಭರ್ಜರಿ ಸ್ಟೆಪ್ಸ್ ಹಾಕಿದ ಸುಷ್ಮಾ ರಾವ್

Sushma K Rao and Amrutha Gowda

Profile Vinay Bhat Aug 12, 2025 3:14 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ (Sushma K Rao) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್​ ಲಿಸ್ಟ್​ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.

ಸದ್ಯ ಧಾರಾವಾಹಿಯಲ್ಲಿ ಭಾಗ್ಯ ತನ್ನ ತಂಗಿ ಪೂಜಾಳ ಮದುವೆ ಮಾಡಿಸಿ ಕೈ ತೊಳೆದುಕೊಂಡಿದ್ದಾಳೆ. ಆದರೆ, ಈ ಮದುವೆಗಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದಾಳೆ. ಭಾಗ್ಯಾಳಿಗೆ ಆದೀಶ್ವರ್ ಕಾಮತ್ ಸಹಾಯ ಮಾಡಲು ಮುಂದಾಗಿದ್ದಾನೆ. ಆದೀಗೆ ಭಾಗ್ಯ ಎಂದರೆ ಇಷ್ಟ ಎಂಬಂತೆ ನಿರ್ದೇಶಕರು ಬಣ್ಣಿಸಿದ್ದಾರೆ. ಹೀಗಾಗಿ ಸದ್ಯದಲ್ಲೇ ಇವರಿಬ್ಬರ ಮಧ್ಯೆ ಲವ್ ಟ್ರ್ಯಾಕ್ ಶುರುವಾಗುವ ಲಕ್ಷಣ ಕಾಣುತ್ತಿದೆ. ಇದರ ಮಧ್ಯೆ ಸೆಟ್​ನಲ್ಲಿ ಭಾಗ್ಯ ತನ್ನ ಕೋ ಆರ್ಟಿಸ್ಟ್ ಜೊತೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾಗ್ಯ/ಸುಷ್ಮಾ, ತನ್ನ ಸೀರಿಯಲ್​ ಮಗಳು ತನ್ವಿ/ಅಮೃತಾ ಗೌಡ ಜೊತೆ ಸಕತ್​ ರೀಲ್ಸ್ ​ಮಾಡಿದ್ದಾರೆ. ಆಕಾಶ ಭೂಮಿ ಇಂದು ಒಂದಾಗೋ ಹಾಗಿದೆ ಹಾಡಿಗೆ ಇಬ್ಬರೂ ಡ್ಯಾನ್ಸ್ ಮಾಡಿದ್ದಾರೆ. ಅಸಲಿಗೆ, ಸುಷ್ಮಾ ಭರತನಾಟ್ಯ ಕಲಾವಿದೆ. ನವದೆಹಲಿ, ಮುಂಬೈ, ಜೈಪುರ ಮತ್ತು ತಿರುವನಂತಪುರಂ ಮುಂತಾದ ಕಡೆ ನೃತ್ಯ ಪ್ರದರ್ಶನ ನೀಡಿದ್ದಾರೆ. ಹಂಪಿ ಉತ್ಸವದಲ್ಲಿಯೂ ಸುಷ್ಮಾ ಕೆ ರಾವ್ ಪ್ರದರ್ಶನ ನೀಡಿದ್ದರು.

ತಮ್ಮ ನಾಲ್ಕನೇ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸ ಮಾಡಲು ಸುಷ್ಮಾ ಆರಂಭಿಸಿದರು. ಗುರು ಎಸ್‌.ವಿ.ಶ್ರೀನಿವಾಸ್‌, ಶುಭಾ ಧನಂಜಯ್, ವೈಜಯಂತಿ ಕಾಶಿ, ಭಾನುಮತಿ, ಶೀಲಾ ಚಂದ್ರಶೇಖರ್‌ ಅವರ ಬಳಿ ನೃತ್ಯಾಭ್ಯಾಸ ಮಾಡಿದ್ದಾರೆ. ನೃತ್ಯದಲ್ಲಿ ಜೂನಿಯರ್ ಹಾಗೂ ಸೀನಿಯರ್‌ ಹಂತದ ಪರೀಕ್ಷೆಯನ್ನು ಸುಷ್ಮಾ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ನೃತ್ಯಕ್ಕಾಗಿ 1997ರಲ್ಲಿ ಸುಷ್ಮಾ ಕೆ ರಾವ್ ಆರ್ಯಭಟ ಪ್ರಶಸ್ತಿ, 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದರು.

Bhagya Lakshmi Serial: ತಾಂಡವ್ ಮೇಲೆ ಶ್ರೇಷ್ಠಾಗೆ ಶುರುವಾಯಿತು ಅನುಮಾನ: ಇಬ್ಬರ ಮಧ್ಯೆ ದೊಡ್ಡ ಜಗಳ

ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್‌. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.