ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12 TRP: ಟಿಆರ್​ಪಿಯಲ್ಲಿ ಇತಿಹಾಸ ಸೃಷ್ಟಿಸಿದ ಬಿಗ್ ಬಾಸ್ ಕನ್ನಡ 12: ನಂಬರ್ಸ್ ಕೇಳಿದ್ರೆ ಶಾಕ್ ಆಗ್ತೀರಿ

Kannada Serial TRP List: ಈ ಹಿಂದೆ ನಡೆದ ಸೀಸನ್ಗಳಂತೆ ಈ ಬಾರಿಯ ಸೀಸನ್ ಅಲ್ಲ ಎಂಬ ವಾಖ್ಯವನ್ನು ಬಿಗ್ ಬಾಸ್ ಸಾಭೀತು ಪಡಿಸುತ್ತಿದೆ. ಅದು ಟಿಆರ್ಪಿ ವಿಚಾರದಲ್ಲೂ ಮುಂದೆವರೆದಿದೆ. ಹೌದು, ಇದೀಗ ಈ ವರ್ಷದ 39ನೇ ವಾರದ ಟಿಆರ್ಪಿ ಹೊರಬಿದ್ದಿದೆ. ಶಾಕಿಂಗ್ ಎಂಬಂತೆ ಬಿಗ್ ಬಾಸ್ಗೆ ಮೊದಲ ವಾರ ಭರ್ಜರಿ ಟಿಆರ್ಪಿ ಸಿಕ್ಕಿದೆ.

ಟಿಆರ್​ಪಿಯಲ್ಲಿ ಇತಿಹಾಸ ಸೃಷ್ಟಿಸಿದ ಬಿಗ್ ಬಾಸ್ ಕನ್ನಡ

BBK 12 TRP -

Profile Vinay Bhat Oct 9, 2025 2:19 PM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಅದಾಗಲೇ ಶೋನಲ್ಲಿ ಯಾರೂ ಊಹಿಸಿರದಂತ ಅನೇಕ ಟ್ವಿಸ್ಟ್​ಗಳನ್ನು ನೀಡಲಾಗಿದೆ. ಶೋ ಶುರುವಾದ ಮೊದಲ ದಿನ ಎಲಿಮಿನೇಷನ್, ವೀಕೆಂಡ್​ನಲ್ಲಿ ಡಬಲ್ ಎಲಿಮಿನೇಷನ್, ಮೂರನೇ ವಾರದಲ್ಲಿ ಮೊದಲ ಫಿನಾಲೇ ಹೀಗೆ ನೋಡುಗರಿಗೆ ಮಾತ್ರವಲ್ಲದೆ ಮನೆಯೊಳಗಿರುವ ಸ್ಪರ್ಧಿಗಳಿಗೂ ಬಿಗ್ ಬಾಸ್ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಈ ಹಿಂದೆ ನಡೆದ ಸೀಸನ್​ಗಳಂತೆ ಈ ಬಾರಿಯ ಸೀಸನ್ ಅಲ್ಲ ಎಂಬ ವಾಖ್ಯವನ್ನು ಬಿಗ್ ಬಾಸ್ ಸಾಭೀತು ಪಡಿಸುತ್ತಿದೆ. ಅದು ಟಿಆರ್​ಪಿ ವಿಚಾರದಲ್ಲೂ ಮುಂದೆವರೆದಿದೆ.

ಹೌದು, ಇದೀಗ ಈ ವರ್ಷದ 39ನೇ ವಾರದ ಟಿಆರ್​ಪಿ ಹೊರಬಿದ್ದಿದೆ. ಶಾಕಿಂಗ್ ಎಂಬಂತೆ ಬಿಗ್ ಬಾಸ್​ಗೆ ಮೊದಲ ವಾರ ಭರ್ಜರಿ ಟಿಆರ್​ಪಿ ಸಿಕ್ಕಿದೆ. ಪ್ರೀಮಿಯರ್‌ ಸಂಚಿಕೆಗೆ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ ಬರೋಬ್ಬರಿ 11.0 ಟಿವಿಆರ್‌ ಲಭಿಸಿದೆ. ಬರೀ ಅರ್ಬನ್ ಮಾರ್ಕೆಟ್‌ನಲ್ಲಿ 10.8 ಟಿವಿಆರ್‌ ದಾಖಲಿಸಿದೆ. ಬೆಂಗಳೂರಿನಲ್ಲಿ ಮಾತ್ರ 11.3 ಟಿವಿಆರ್‌ ಪಡೆದಿದೆ. ಅತೀ ಹೆಚ್ಚು ಟಿವಿಆರ್ ದಾಖಲಿಸುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12 ದಾಖಲೆಯ ಓಪನಿಂಗ್ ಪಡೆದುಕೊಂಡಿದೆ.

ಈ ಮೂಲಕ ಶುರುವಾದ ಮೊದಲ ವಾರದಲ್ಲೇ ಬಿಗ್ ಬಾಸ್ ಕನ್ನಡ ಕರ್ನಾಟಕದ ನಂಬರ್‌ 1 ರಿಯಾಲಿಟಿ ಶೋ ಎಂಬ ಬಿರುದು ಪಡೆದುಕೊಂಡಿದೆ. ಇನ್ನು ವಾರದ ದಿನಗಳಲ್ಲಿ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ ಬಿಗ್ ಬಾಸ್​ಗೆ 6.6 ಟಿವಿಆರ್‌ ಪಡೆದಿದೆ.

BBK 12: ಮುಂಜಾನೆ 4 ಗಂಟೆ ಸುಮಾರಿಗೆ ಪುನಃ ಬಿಗ್ ಬಾಸ್ ಮನೆಗೆ ಹೊಕ್ಕ ಸ್ಪರ್ಧಿಗಳು

ಇನ್ನು ಧಾರಾವಾಹಿ ವಿಚಾರಕ್ಕೆ ಬಂದರೆ, ಝೀ ಕನ್ನಡದ ಅಮೃತಧಾರೆ ಧಾರಾವಾಹಿಯ ಟಿಆರ್​ಪಿಯಲ್ಲಿ ದೊಡ್ಡ ಬದಲಾವಣೆ ಆಗಿದೆ. ಅರ್ಬನ್ ಮತ್ತು ರೂರಲ್ ಮಾರ್ಕೆಟ್​ನಲ್ಲಿ ಅಮೃತಧಾರೆ 9.0 ಟಿವಿಆರ್ ಪಡೆದು ಕರ್ನಾಟಕದ ನಂಬರ್ ಒನ್ ಧಾರಾವಾಹಿಯಾಗಿ ಹೊರಹೊಮ್ಮಿದೆ. ಅಣ್ಣಯ್ಯ ಸೀರಿಯಲ್ 8.9 ಟಿವಿಆರ್ ಪಡೆದು ಎರಡನೇ ಸ್ಥಾನ ಕಾಪಾಡಿಕೊಂಡಿದೆ. ಕಳೆದ ಕೆಲವು ವಾರಗಳಿಂದ ಅಣ್ಣಯ್ಯ ಧಾರಾವಾಹಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದು ಧಾರಾವಾಹಿ ಟಿಆರ್​ಪಿ ಹೆಚ್ಚಲು ಕಾರಣ ಆಗಿದೆ. ಈ ಧಾರಾವಾಹಿ ಮುಂದಿನ ವಾರ ಡಬಲ್ ಡಿಜಿಟ್ ಟಿಆರ್​ಪಿ ಪಡೆದರು ಅಚ್ಚರಿ ಏನಿಲ್ಲ.

ಬಿಗ್ ಬಾಸ್​ಗೆ ಸಂಬಂಧ ಪಟ್ಟ ವಿಡಿಯೋ ಸುದ್ದಿ:



ಸದಾ ನಂಬರ್ ಒನ್ ಸ್ಥಾನದಲ್ಲಿ ಆರ್ಭಟಿಸುತ್ತಿದ್ದ ಕರ್ಣ ಈ ಬಾರಿ ಮತ್ತೆ ಕುಸಿದಿದ್ದಾನೆ. ಕರ್ಣ ಶುರುವಾದಾಗಿನಿಂದ ಟಾಪ್‌ ಸ್ಥಾನವನ್ನೇ ಕಾಯ್ದುಕೊಂಡಿತ್ತು. ಇದೀಗ ಈ ಧಾರಾವಾಹಿ ಮೂರನೇ ಸ್ಥಾನಕ್ಕೆ ಕುಸಿದಿದೆ. 8.7 ಟಿವಿಆರ್‌ ದಾಖಲಿಸುವ ಮೂಲಕ ಕರ್ಣ ಸೀರಿಯಲ್‌ ಮೂರನೇ ಸ್ಥಾನಕ್ಕಿಳಿದಿದೆ.

ಇನ್ನು ಲಕ್ಷ್ಮೀ ನಿವಾಸ ಸೀರಿಯಲ್‌ 7.5 ಟಿವಿಆರ್​ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಮತ್ತೊಂದು ವಿಶೇಷ ಎಂದರೆ ಕಳೆದ ಹಲವು ತಿಂಗಳುಗಳಿಂದ 5ಕ್ಕಿಂತ ಕಡಿಮೆ ಟಿವಿಆರ್ ಪಡೆದುಕೊಳ್ಳುತ್ತಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ 39ನೇ ವಾರ 6.0 ಟಿವಿಆರ್ ಪಡೆದುಕೊಂಡು ಐದನೇ ಸ್ಥಾನಕ್ಕೇರಿದೆ.

BBK 12: ಬಿಗ್ ಬಾಸ್ ಸ್ಥಗಿತಗೊಳ್ಳುವ ಮುನ್ನ ಮನೆಯಲ್ಲಿ ಕಳ್ಳತನ: ಅಶ್ವಿನಿ ಗೌಡ ಆರೋಪ

ಇತ್ತ ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ನಂದಗೋಕುಲ ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 5.4 ಟಿವಿಆರ್ ಲಭಿಸಿದೆ. ಭಾರ್ಗವಿ ಎಲ್​.ಎಲ್​.ಬಿ ಧಾರಾವಾಹಿ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 4.9 ಟಿವಿಆರ್‌ ಪಡೆದು ಎರಡನೇ ಸ್ಥಾನದಲ್ಲಿದೆ. ಮುದ್ದು ಸೊಸೆ ಮತ್ತು ಇತ್ತೀಚೆಗಷ್ಟೆ ಪ್ರಾರಂಭವಾದ ಪ್ರೇಮಕಾವ್ಯ ಧಾರಾವಾಹಿ 4.4 ಟಿವಿಆರ್ ಪಡೆದು ಕಲರ್ಸ್​ನ ಮೂರನೇ ಮತ್ತು ನಾಲ್ಕನೇ ಧಾರಾವಾಹಿ ಆಗಿದೆ.