BBK 12: ಈ ಬಾರಿ ಬಿಗ್ ಬಾಸ್ ಕನ್ನಡ 12 ನಡೆಯೋದು ಎಲ್ಲಿ ಗೊತ್ತೇ?: ದಿಢೀರ್ ಲೊಕೇಷನ್ ಶಿಪ್ಟ್
ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್ ನಡೆದಿದ್ದು ಇಲ್ಲಿಯೇ. ಆ ನಂತರ ಬಿಗ್ ಬಾಸ್ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಇದೀಗ ಬಿಗ್ ಬಾಸ್ ಕನ್ನಡ 12 ಕುರಿತು ಮತ್ತೊಂದು ಅಪ್ಡೇಟ್ ಹೊರಬಿದ್ದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಮತ್ತೆ ಬದಲಾಗಲಿದೆಯಂತೆ.

BBK 12 Home

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಕುರಿತು ಒಂದೊಂದೆ ದೊಡ್ಡ ಅಪ್ಡೇಟ್ ಹೊರಬೀಳುತ್ತಿದೆ. ಈಗಾಗಲೇ ಈ ಬಾರಿ ನಿರೂಪಕರಾಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮೊನ್ನೆಯಷ್ಟೆ ಕಲರ್ಸ್ ಕನ್ನಡ ಹಾಗೂ ಬಿಗ್ ಬಾಸ್ ಆಯೋಜಕರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ರಿವೀಲ್ ಆಗಿದೆ. ಇದರ ಬೆನ್ನಲ್ಲೇ ಈ ಬಾರಿ ದೊಡ್ಮನೆಯೊಳಹೆ ಹೋಗುವ ಕಂಟೆಸ್ಟೆಂಟ್ಸ್ ಯಾರೆಂಬ ಗಾಸಿಪ್ ಕೂಡ ಹರಿದಾಡುತ್ತಿದೆ. ಇದೀಗ ಬಿಗ್ ಬಾಸ್ ಕನ್ನಡ 12 ಕುರಿತು ಮತ್ತೊಂದು ಅಪ್ಡೇಟ್ ಹೊರಬಿದ್ದಿದ್ದು, ಈ ಬಾರಿ ಬಿಗ್ ಬಾಸ್ ಮನೆಯ ಲೊಕೇಷನ್ ಬದಲಾಗಲಿದೆಯಂತೆ.
ಈ ಮೊದಲು ಬಿಗ್ ಬಾಸ್ ಕನ್ನಡಕ್ಕೆ ಬಂದಾಗ ಪುಣೆಯ ಲೋನಾವಾಲಾದಲ್ಲಿ ಮೊದಲು ಚಿತ್ರೀಕರಣವನ್ನು ಶುರು ಮಾಡಲಾಗಿತ್ತು. ಮೊದಲ ಎರಡು ಸೀಸನ್ ನಡೆದಿದ್ದು ಇಲ್ಲಿಯೇ. ಆ ನಂತರ ಬಿಗ್ ಬಾಸ್ ಮನೆಯನ್ನು ಬೆಂಗಳೂರಿಗೆ ಸ್ಥಳಾಂತರ ಮಾಡಲಾಯಿತು. ಬೆಂಗಳೂರಿನ ಹೊರ ವಲಯದಲ್ಲಿರುವ ಇನ್ನೋವೇಟಿವ್ ಫಿಲ್ಮ್ ಸಿಟಿ ಬಿಗ್ ಬಾಸ್‌ಗೆ ಆತಿಥ್ಯ ನೀಡಿತ್ತು. ಅಲ್ಲಿಂದ ಒಂಬತ್ತನೇ ಸೀಸನ್‌ವರೆಗೆ ಇನ್ನೋವೇಟಿವ್ ಫಿಲ್ಮ್ ಸಿಟಿನೇ ಬಿಗ್ ಬಾಸ್ ಮನೆಯಾಗಿತ್ತು.
ಆ ನಂತರ ಬಿಗ್ ಬಾಸ್ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ನಂತರ ಲೊಕೇಶನ್ ಶಿಫ್ಟ್ ಮಾಡಲಾಗಿತ್ತು. ತಾವರೆಕೆರೆ ಹಾಗೂ ದೊಡ್ಡ ಆಲದ ಮರದ ಮಧ್ಯೆ ಇರುವ ಪ್ರದೇಶದಲ್ಲಿ ಬೃಹತ್ ಮನೆ ನಿರ್ಮಿಸಲಾಗಿತ್ತು, ಮನೆಯ ಇಂಟೀರಿಯರ್ಸ್ ಹಾಗೂ ಡೆಕೋರೇಷನ್‌ನಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಅಲ್ಲಿಯೂ ಒಂದಷ್ಟು ಸೀಸನ್‌ಗಳನ್ನು ನಡೆಸಲಾಗಿದೆ.
ಇದೀಗ ಮತ್ತೊಮ್ಮೆ ಮನೆ ಬದಲಾವಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಪುನಃ ಇನ್ನೋವೇಟಿವ್ ಫಿಲ್ಮ್ ಸಿಟಿಗೆ ಮರಳಲಾಗುತ್ತಿದೆ. ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ಹೊಸ ಶೋಗಾಗಿ ಹೊಸ ಮನೆಯನ್ನು ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಬಾರಿ ಹೊಸ ಮನೆ ಹೇಗಿರಲಿದೆ? ವಿನ್ಯಾಸದಲ್ಲಿ ಮತ್ತಷ್ಟು ವಿಶೇಷತೆ ಇರಬಹುದು ಎಂದು ನಿರೀಕ್ಷಿಸಲಾಗಿದೆ.
Bhagya Lakshmi Serial: ಪೂಜಾ ಮದುವೆ ಸಂಭ್ರಮದಲ್ಲಿ ಲಕ್ಷ್ಮೀ ಕೈಯಲ್ಲಿದ್ದ ಮಗು ಯಾರದ್ದು ಗೊತ್ತೇ?: ಇಲ್ಲಿದೆ ನೋಡಿ
ಬಿಗ್ ಬಾಸ್ ಶೋನಲ್ಲಿ ಒಂದು ಸೀಸನ್‌ಗಾಗಿ ಕಟ್ಟಲಾದ ಮನೆಯನ್ನು ಮುಂದಿನ ಸೀಸನ್ ಶುರು ಆಗೋವರೆಗೂ ಉಳಿಸಿಕೊಳ್ಳಲಾಗುತ್ತದೆ. ಶೋ ಮುಗಿದ ಬಳಿಕ ಜನರು ಅಲ್ಲಿಗೆ ಬಂದು ಹೋಗೋದುಂಟು. ಇದು ಓಂಥರ ಆಕರ್ಷಣೀಯ ಸ್ಥಳ ಎನ್ನಬಹುದು. ಹೀಗಾಗಿ ಇದನ್ನು ವಿಶೇಷವಾಗಿ ಕಟ್ಟಲಾಗುತ್ತದೆ.
ಮೂಲಗಳ ಪ್ರಕಾರ, ಬಿಗ್ ಬಾಸ್ ಸೀಸನ್ 12 ಕನ್ನಡ ಸೆಪ್ಟೆಂಬರ್ ಕೊನೆಯಲ್ಲಿ ಪ್ರಾರಂಭವಾಗಲಿದೆ. ಮತ್ತೊಂದು ವಿಶೇಷ ಎಂದರೆ, ಸಾಮಾನ್ಯವಾಗಿ ಪ್ರತಿ ಭಾರಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ಶನಿವಾರ ಮಧ್ಯರಾತ್ರಿ ಶೂಟಿಂಗ್ ಆರಂಭವಾಗಿ ರವಿವಾರದಂದು ಟೆಲಿಕಾಸ್ಟ್ ಆಗುತ್ತದೆ. ಆದರೆ, ಈಗ ಬಂದಿರುವ ಮಾಹಿತಿಯ ಪ್ರಕಾರ, ಬಿಬಿಕೆ 12 ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28ರಿಂದ ಅಂದರೆ ಸೋಮವಾರದಿಂದ ಆರಂಭವಾಗುವ ಸಾಧ್ಯ ಇದೆ.