Air India Express: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ತಾಂತ್ರಿಕ ದೋಷ; ದೋಹಾಕ್ಕೆ ಹೊರಟಿದ್ದ ವಿಮಾನ ಕೋಝಿಕ್ಕೋಡ್‌ಗೆ ವಾಪಸ್
ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮತ್ತೆ ಅದೇ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಬಳಿಕ ಪ್ರಯಾಣಿಕರುಗೆ ಬೇರೆ ವಿಮಾನದ ವ್ವಸ್ಥೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ.

ತಿರುವನಂತಪುರಂ: ಕ್ಯಾಲಿಕಟ್ (ಕಲ್ಲಿಕೋಟೆ/ಕೋಝಿಕ್ಕೋಡ್) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Calicut International Airport) ದೋಹಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮತ್ತೆ ಅದೇ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಟೇಕ್ ಆಫ್ ಆದ 2 ಗಂಟೆಗಳ ನಂತರ ತಾಂತ್ರಿಕ ದೋಷ ಕಂಡು ಬಂದ ಕಾರಣ ವಿಮಾನವನ್ನು ಹಿಂದಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ 188 ಜನರನ್ನು ಹೊತ್ತ IX 375 ವಿಮಾನ ಬುಧವಾರ (ಜು. 23) ಬೆಳಗ್ಗೆ ಕ್ಯಾಲಿಕಟ್‌ನಿಂದ ಬೆಳಗ್ಗೆ 9.07ರ ಸುಮಾರಿಗೆ ದೋಹಾಕ್ಕೆ ಹೊರಟಿತು. ಆದರೆ 2 ಗಂಟೆಗಳ ನಂತರ ಬೆಳಗ್ಗೆ 11.12ಕ್ಕೆ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಮರಳಿತು.
BREAKING: Doha-Bound Air India Express Flight Returns To Calicut Due To Technical Glitch
— Vani Mehrotra (@vani_mehrotra) July 23, 2025
''ವಿಮಾನದ ಕ್ಯಾಬಿನ್ ಎಸಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಇದು ಎಮರ್ಜೆನ್ಸಿ ಲ್ಯಾಂಡಿಂಗ್ ಅಲ್ಲʼʼ ಎಂದು ಮೂಲಗಳು ಹೇಳಿವೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿ, ಸುಮಾರು 1:30ರ ಬಳಿಕ ಬೇರೆ ವಿಮಾನದ ಮೂಲಕ ದೋಹಾಕ್ಕೆ ಕಳುಹಿಸಲಾಯಿತು.
ಈ ಸುದ್ದಿಯನ್ನೂ ಓದಿ: Air India Flight: ಕ್ಯಾಬಿನ್‌ನಲ್ಲಿ ಸುಟ್ಟಿರುವ ವಾಸನೆ; ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈಗೆ ವಾಪಾಸ್
ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ; ಪ್ರಯಾಣಿಕರು ಪಾರು
ದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಮಂಗಳವಾರ ಹಾಂಕಾಂಗ್ನಿಂದ ಆಗಮಿಸಿದ ಏರ್ ಇಂಡಿಯಾ ವಿಮಾನ ಇಳಿಯುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಏರ್ ಇಂಡಿಯಾ ವಿಮಾನದ ಸಹಾಯಕ ವಿದ್ಯುತ್ ಘಟಕ (ಎಪಿಯು) ಬೆಂಕಿಗೆ ಆಹುತಿಯಾಗಿತ್ತು. ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಹಾನಿಯಾಗಿಲ್ಲ.
ʼʼಬೆಂಕಿಯಿಂದಾಗಿ ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೆ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಇಳಿದಿದ್ದಾರೆʼʼ ಎಂದು ಏರ್ ಇಂಡಿಯಾ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದರು.