ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karimani Serial: ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಗೆ ಶುಭಂ ಬೋರ್ಡ್ ಬೀಳುತ್ತಿದೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. 2024 ಫೆಬ್ರವರಿಯಲ್ಲಿ ಕರಿಮಣಿ ಧಾರಾವಾಹಿ ಶುರುವಾಗಿತ್ತು. ಈಗಾಗಲೇ 407+ ಎಪಿಸೋಡ್‌ಗಳು ಪ್ರಸಾರ ಆಗಿವೆ.

ಕಿರುತೆರೆ ವೀಕ್ಷಕರಿಗೆ ಶಾಕ್: ಕರಿಮಣಿ ಧಾರಾವಾಹಿ ದಿಢೀರ್ ಮುಕ್ತಾಯ

Karimani Serial End

Profile Vinay Bhat Jul 23, 2025 5:39 PM

ಕಲರ್ಸ್ ಕನ್ನಡದಲ್ಲಿ (Colors Kannada) ಬಹುದೊಡ್ಡ ಬದಲಾವಣೆಯ ಸೂಚನೆ ಸಿಗುತ್ತಿದೆ. ವೀಕ್ಷಕರು ಇಷ್ಟ ಪಡದ ಮತ್ತು ಟಿಆರ್​ಪಿ ಇಲ್ಲದ ಶೋಗಳಿಗೆ ಮತ್ತು ಧಾರಾವಾಹಿಗಳಿಗೆ ಗೇಟ್​ಪಾಸ್ ನೀಡಲಾಗುತ್ತಿದೆ. ಈ ವರ್ಷ ಮೊದಲಿಗೆ ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯಕಂಡಿತು. ಬಳಿಕ ಇತ್ತೀಚೆಗಷ್ಟೆ ವಧು ಧಾರಾವಾಹಿಯನ್ನು ಕೂಡ ಅರ್ಧಕ್ಕೆ ಕೊನೆಗೊಳಿಸಲಾಯಿತು. ಇದು ಸರಿಯಾಗಿ 100 ಸಂಚಿಕೆಗಳನ್ನೂ ಮುಟ್ಟಿರಲಿಲ್ಲ. ಇದರ ಬೆನ್ನಲ್ಲೇ ನೂರು ಜನ್ಮಕೂ ಸೀರಿಯಲ್ ಕೂಡ ಮುಕ್ತಾಯಕಂಡಿತು. ಇದೀಗ ಕರಿಮಣಿ ಸೀರಿಯಲ್ ಸರದಿ.

ಹೌದು.. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಗೆ ಶುಭಂ ಬೋರ್ಡ್ ಬೀಳುತ್ತಿದೆ. ಈಗಾಗಲೇ ಕೊನೆಯ ಸಂಚಿಕೆಗಳು ಪ್ರಸಾರ ಆಗಲು ಶುರುವಾಗಿವೆ. 2024 ಫೆಬ್ರವರಿಯಲ್ಲಿ ಕರಿಮಣಿ ಧಾರಾವಾಹಿ ಶುರುವಾಗಿತ್ತು. ಈಗಾಗಲೇ 407+ ಎಪಿಸೋಡ್‌ಗಳು ಪ್ರಸಾರ ಆಗಿವೆ. ಒಂದು ವರ್ಷಗಳಿಗೂ ಅಧಿಕ ಕಾಲ ವೀಕ್ಷಕರನ್ನು ರಂಜಿಸಿರುವ ಈ ಧಾರಾವಾಹಿ ಈಗ ಅಂತ್ಯವಾಗುವ ಸಮಯ ಬಂದಿದೆ.

ಏಕಾಏಕಿ ಕರಿಮಣಿ ಧಾರಾವಾಹಿಯನ್ನ ಮುಗಿಸುತ್ತಿರುವುದ್ಯಾಕೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಕ್ಲೈಮ್ಯಾಕ್ಸ್ ಸಂಚಿಕೆ ಯಾವಾಗ ಪ್ರಸಾರವಾಗುತ್ತೋ.. ಗೊತ್ತಿಲ್ಲ. ಆದರೆ, ಈಗಾಗಲೇ ಧಾರಾವಾಹಿಯ ಶೂಟಿಂಗ್‌ ಮುಗಿದು ಹೋಗಿದೆ. ಕೊನೆಯ ದಿನದ ಚಿತ್ರೀಕರಣದ ಫೋಟೋಗಳನ್ನ ಕರಿಮಣಿ ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅನುಷಾ ರಾವ್‌ ಇನ್​ಸ್ಟಾಗ್ರಾಮ್‌ನಲ್ಲಿ ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ‘‘ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ನಮ್ಮ ಮನೆಯಂತಿದ್ದ ಸ್ಟುಡಿಯೋದಲ್ಲಿ ನನ್ನ ಕಟ್ಟ ಕಡೆಯ ಫೋಟೋ’’ ಎಂದು ಬರೆದುಕೊಂಡು, ಕರಿಮಣಿ ಮನೆ ಇರುವ ಅಕ್ಷಯ ಸ್ಟುಡಿಯೋಸ್‌ನಲ್ಲಿ ತಾವು ಕ್ಲಿಕ್ಕಿಸಿದ ಕೊನೆಯ ಫೋಟೋವನ್ನ ಅನುಷಾ ರಾವ್‌ ಹಂಚಿಕೊಂಡಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯ ಧಾರಾವಾಹಿಗಳಲ್ಲಿ ಹೋಲಿಕೆ ಮಾಡಿದರೆ, ಈ ಧಾರಾವಾಹಿಯ ಟಿಆರ್‌ಪಿ ಕಡಿಮೆ ಅಗಿತ್ತು. ಹೀಗಾಗಿಯೋ ಏನೋ ಈ ಸೀರಿಯಲ್‌ ಅಂತ್ಯ ಮಾಡಲಾಗಿದೆ. ಈ ಬಗ್ಗೆ ವಾಹಿನಿಯಾಗಲೀ, ಧಾರಾವಾಹಿ ತಂಡವಾಗಲೀ ಪ್ರತಿಕ್ರಿಯೆ ಮಾಡಿಲ್ಲ. ಈ ಧಾರಾವಾಹಿಯಲ್ಲಿ ಅರುಂಧತಿ ಮುಖವಾಡವು ಕಳಚಿಬಿದ್ದಿದೆ. ಇನ್ನು ಕರ್ಣ ಮಾತ್ರ ಅರುಂಧತಿ ಮನುಷ್ಯಳಲ್ಲ, ನೀಚ ಹೆಣ್ಣು ಎನ್ನೋದು ಒಪ್ಪಿಕೊಳ್ಳಬೇಕಿದೆ.

ಈ ಧಾರಾವಾಹಿಯಲ್ಲಿ ಕರ್ಣ ಆಗಿ ನವ ಪ್ರತಿಭೆ ಅಶ್ವಿನ್ ಯಾದವ್, ಸಾಹಿತ್ಯ ಆಗಿ ನಟಿ ಸ್ಪಂದನಾ ಸೋಮಣ್ಣ ನಟಿಸುತ್ತಿದ್ದಾರೆ. ಇವರ ಜೊತೆಗೆ ಅಶ್ವಿನ್‌ ಎಚ್, ಪ್ರಥಮಾ ಪ್ರಸಾದ್‌, ಅನುಷಾ ಹೆಗಡೆ, ಶ್ರೀಕಾಂತ್‌ ಮುಂತಾದವರು ನಟಿಸಿದ್ದಾರೆ.

Bhagya Lakshmi Serial: ಪೂಜಾ-ಕಿಶನ್ ಮೊದಲ ರಾತ್ರಿಯನ್ನು ಹಾಳು ಮಾಡಿದ ಕನ್ನಿಕಾ