IND vs WI: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ 121 ರನ್ ಗುರಿ ನೀಡಿದ ವೆಸ್ಟ್ ಇಂಡೀಸ್!
IND vs WI 2nd Test: ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಅಂತರದ ಹಿನ್ನಡೆ ಅನುಭವಿಸಿದ್ದ ವೆಸ್ಟ್ ಇಂಡೀಸ್ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರಿದರೂ ಭಾರತ ತಂಡಕ್ಕೆ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಗಿದೆ. ವಿಂಡೀಸ್ ಪರ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಶತಕಗಳನ್ನು ಭಾರಿಸಿದ್ದಾರೆ.

ಭಾರತದ ವಿರುದ್ದ ಶತಕ ಬಾರಿಸಿ ಸಂಭ್ರಮಿಸಿದ ಶೇಯ್ ಹೋಪ್. -

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ದ ಎರಡನೇ ಟೆಸ್ಟ್ (IND vs WI) ಪಂದ್ಯದಲ್ಲಿಯೂ ಭಾರತ ತಂಡ ಗೆಲುವಿನ ಸನಿಹದಲ್ಲಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗಿ ದೊಡ್ಡ ಅಂತರದ ಹಿನ್ನಡೆಯನ್ನು ಅನುಭವಿಸಿದ್ದ ಪ್ರವಾಸಿ ವಿಂಡೀಸ್ ತಂಡ, ದ್ವಿತೀಯ ಇನಿಂಗ್ಸ್‌ನಲ್ಲಿ ಜಾನ್ ಕ್ಯಾಂಪ್‌ಬೆಲ್ (John Campbell) ಹಾಗೂ ಶೇಯ್ ಹೋಪ್ (Shai Hope) ಅವರ ಶತಕಗಳ ಹೊರತಾಗಿಯೂ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಗಿದೆ. ಆ ಮೂಲಕ ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ ಎರಡನೇ ಪಂದ್ಯವನ್ನೂ ಸುಲಭವಾಗಿ ಗೆದ್ದು ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಎದುರು ನೋಡುತ್ತಿದೆ.
ಸೋಮವಾರ ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಎರಡು ವಿಕೆಟ್ ನಷ್ಟಕ್ಕೆ 173 ರನ್‌ಗಳಿಂದ ನಾಲ್ಕನೇ ದಿನದಾಟವನ್ನು ಆರಂಭಿಸಿದ ವೆಸ್ಟ್ ಇಂಡೀಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತು. ಮೊದಲನೇ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಅವರು ನಾಲ್ಕನೇ ತಮ್ಮ-ತಮ್ಮ ಶತಕಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ವಿಂಡೀಸ್ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 118.5 ಓವರ್‌ಗಳಿಗೆ 390 ರನ್‌ಗಳಿಗೆ ಆಲ್ಔಟ್ ಆಯಿತು. ಆದರೂ ಎದುರಾಳಿ ಭಾರತ ತಂಡಕ್ಕೆ ಕೇವಲ 121 ರನ್‌ಗಳ ಸಾಧಾರಣ ಗುರಿಯನ್ನು ನೀಡುವಲ್ಲಿ ಶಕ್ತವಾಯಿತು. ಭಾರತ ತಂಡದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಜಸ್‌ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಮೊಹಮ್ಮದ್ ಸಿರಾಜ್ ಎರಡು ವಿಕೆಟ್ ಕಿತ್ತರು.
IND vs WI: ಜೈಸ್ವಾಲ್ ಮೇಲೆ 'ಅಪಾಯಕಾರಿ' ಎಸೆತ; ಜೇಡನ್ ಸೀಲ್ಸ್‌ಗೆ ದಂಡ
ನಾಲ್ಕನೇ ದಿನ ಕ್ರೀಸ್‌ಗೆ ಆಗಮಿಸಿದ ಜಾನ್ ಕ್ಯಾಂಪ್‌ಬೆಲ್ ಹಾಗೂ ಶೇಯ್ ಹೋಪ್ ಜೋಡಿ ಅದ್ಭುತ ಬ್ಯಾಟಿಂಗ್‌ದ ಪ್ರದರ್ಶನವನ್ನು ತೋರಿತು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು 177 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ವಿಂಡೀಸ್‌ಗೆ ಅದ್ಭುತ ಆರಂಭವನ್ನು ತಂದುಕೊಟ್ಟರು. ಅದ್ಭುತ ಬ್ಯಾಟ್ ಮಾಡಿದ ಜಾನ್ ಕ್ಯಾಂಪ್ ಬೆಲ್ 214 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 115 ರನ್‌ಗಳನ್ನು ಗಳಿಸಿ ರವೀಂದ್ರ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡುತಿದ್ದ ಶೇಯ್ ಹೋಪ್ ಕೂಡ ಉತ್ತಮ ಆಟವನ್ನು ಪ್ರದರ್ಶಿಸಿದರು. ಅವರು ಆಡಿದ 214 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 103 ರನ್‌ಗಳನ್ನು ಗಳಿಸಿದರು. ನಂತರ ಅವರು ಮೊಹಮ್ಮದ್ ಸಿರಾಜ್‌ಗೆ ಕ್ಲೀನ್ ಬೌಲ್ಡ್ ಆದರು.
𝐈𝐧𝐧𝐢𝐧𝐠𝐬 𝐁𝐫𝐞𝐚𝐤!
— BCCI (@BCCI) October 13, 2025
Jasprit Bumrah wraps up the innings with his 3⃣rd wicket ☝️#TeamIndia need 1⃣2⃣1⃣ runs to win the match and the series 👍
Scorecard ▶ https://t.co/GYLslRzj4G#INDvWI | @IDFCFIRSTBank pic.twitter.com/N0Z0vsZwkL
ಜಸ್ಟಿನ್ ಗ್ರೀವ್ಸ್ ಅರ್ಧಶತಕ
ಈ ಸರಣಿಯಲ್ಲಿ ಅತ್ಯುತ್ತಮ ಬ್ಯಾಟ್ ಮಾಡುತ್ತಿರುವ ಜಸ್ಟಿನ್ ಗ್ರೀವ್ಸ್ ಅವರು ಎರಡನೇ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ ಚೆನ್ನಾಗಿ ಬ್ಯಾಟ್ ಮಾಡಿದರು. ಇವರು ಕೊನೆಯವರೆಗೂ ಅಜೇಯ ಆಟವನ್ನು ಪ್ರದರ್ಶಿಸಿ 85 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 50 ರನ್‌ಗಳನ್ನು ಗಳಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಜೇಡನ್ ಸಿಲ್ಸ್ ಕೊನೆಯಲ್ಲಿ ಸ್ವಲ್ಪ ಹೊತ್ತು ಸಾಥ್ ನೀಡಿದ್ದು ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ. ಜೇಡನ್ ಸೀಲ್ಸ್ ಅವರು ಆಡಿದ 67 ಎಸೆತಗಳಲ್ಲಿ ಅಜೇಯ 32 ರನ್‌ಗಳನ್ನು ದಾಖಲಿಸಿದರು.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 248 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಆ ಮೂಲಕ ಭಾರಿ ಅಂತರದ ಹಿನ್ನಡೆ ಅನುಭವಿಸುವ ಮೂಲಕ ಫಾಲೋ ಆನ್‌ಗೆ ಸಿಲುಕಿತ್ತು. ಇದರ ಪರಿಣಾಮ ವಿಂಡೀಸ್ ದ್ವಿತೀಯ ಇನಿಂಗ್ಸ್ ಅನ್ನು ಆಡಬೇಕಾಗಿತ್ತು. ಅಂದ ಹಾಗೆ ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ 5 ವಿಕೆಟ್ ನಷ್ಟಕ್ಕೆ 518 ರನ್‌ಗಳನ್ನು ಗಳಿಸಿ ಡಿಕ್ಲೆರ್ ಮಾಡಿಕೊಂಡಿತ್ತು.