BBK 12: ಬಿಗ್ ಬಾಸ್ ಮನೆಯಲ್ಲಿ ಡಾಗ್ ಸತೀಶ್ಗೆ ಎಷ್ಟು ಸಂಭಾವನೆ ಸಿಗುತ್ತಿದೆ ಗೊತ್ತೇ?
Dog Sathish Remuneration: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಡಾಗ್ ಸತೀಶ್ ಅವರು ಚಂದ್ರಪ್ರಭ ಜೊತೆ ಜಂಟಿ ಗುಂಪಿನಲ್ಲಿದ್ದಾರೆ. ಇವರು ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡುತ್ತಾರೆ. ಹಾಗಾದರೆ ಬಿಗ್ ಬಾಸ್ನಲ್ಲಿ ಇವರಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?, ಇಲ್ಲಿದೆ ನೋಡಿ ಮಾಹಿತಿ.

Dog Sathish Remuneration -

ಬಿಗ್ ಬಾಸ್ ಕನ್ನಡ ಸೀಸನ್ 12 (Boss Kannada 12) ರಂಗೇರುತ್ತಿದೆ. ಮನೆಯಲ್ಲಿ ಜಂಟಿ ಹಾಗೂ ಒಂಟಿಗಳ ಗುಂಪುಗಳ ನಡುವಣ ಟಾಸ್ಕ್ ಕಾವೇರುತ್ತಿದೆ. ಈಗಾಗಲೇ ಬಿಗ್ ಬಾಸ್ ಮುಂದಿನ ಮೂರನೇ ವಾರದಲ್ಲಿ ಮೊದಲ ಫಿನಾಲೆ ಎಂದು ಹೇಳಿದ್ದು, ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಆಡುತ್ತಿದ್ದಾರೆ. ಅಲ್ಲದೆ ಬಿಗ್ ಬಾಸ್ ಮೊದಲ ವಾರದಲ್ಲೇ ಸ್ಪರ್ಧಿಗಳಿಗೆ ಸೀಕ್ರೆಟ್ ಟಾಸ್ಕ್ ಕೂಡ ಕೊಟ್ಟಿದ್ದು, ನೋಡುಗರಿಗೂ ಕುತೂಹಲ ಮೂಡಿಸುತ್ತಿದೆ. ಸದ್ಯ ದೊಡ್ಮನೆಯಲ್ಲಿ ಡಾಗ್ ಸತೀಶ್ ಅವರು ಚಂದ್ರಪ್ರಭ ಜೊತೆ ಜಂಟಿಯಾಗಿದ್ದಾರೆ.
ಸತೀಶ್ ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡುತ್ತಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು.. ಹೀಗೆ ಡುದ್ದು ಮಾಡ್ತೀನಿ ಎಂದು ವೇದಿಕೆ ಮೇಲೆ ಸುದೀಪ್ ಜೊತೆ ಸತೀಶ್ ಹೇಳಿದ್ದರು. ಸತೀಶ್ ಅವರು ಕ್ಯಾಡಬೊಮ್ ಕೆನ್ನೆಲ್ಸ್ ಎಂಬ ಕೆನ್ನೆಲ್ ಕೂಡ ನಡೆಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸತೀಶ್, ತಮ್ಮನ್ನ ವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್, ಗ್ಲೋಬಲ್ ಸೂಪರ್‌ಸ್ಟಾರ್ ಎಂದು ಕರೆದುಕೊಳ್ಳುತ್ತಾರೆ.
ಸತೀಶ್ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆಯಂತೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ಇವರು ಬಿಗ್ ಬಾಸ್‌ಗಾಗಿ 25 ಲಕ್ಷ ರೂಪಾಯಿಗಳಿಗೆ ಬಟ್ಟೆಗಳನ್ನ ಖರೀದಿ ಮಾಡಿದ್ದರಂತೆ. ಇದನ್ನ ಕೂಡ ಅವರು ಕಿಚ್ಚ ಸುದೀಪ್ ಮುಂದೆ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಅಂದಹಾಗೆ ಡಾಗ್ ಸತೀಶ್ ಅವರು ಬಿಗ್ ಬಾಸ್ ಶೋಗಾಗಿ ತಿಂಗಳಿಗೆ 5 ಲಕ್ಷ 80 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸೀಸನ್‌ನ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ ಸತೀಶ್ ಅವರಿಗೆ ಅತಿ ಹೆಚ್ಚು ಸಂಭಾವನೆ ಸಿಗುತ್ತಿದೆ ಎಂಬ ಮಾತಿದೆ.
BBK 12: ಬಿಗ್ ಬಾಸ್ ಮನೆಯಲ್ಲಿ ತಾಳ್ಮೆ ಕಳೆದುಕೊಂಡ ಕಾಕ್ರೋಚ್ ಸುಧಿ: ಧನುಷ್ ಜೊತೆ ಜಗಳ
(ಇದು ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿನ ವೈರಲ್ ಸಂಗತಿಗಳನ್ನು ಆಧರಿಸಿ ಬರೆಯಲಾಗಿದೆ, ನಿಖರ ಮಾಹಿತಿಯಲ್ಲ.)