Vasudeva Kutumba Serial: ವಸುದೇವ ಕುಟುಂಬ ಧಾರಾವಾಹಿಗೆ ಅವಿನಾಶ್ ಪಡೆದ ಸಂಭಾವನೆ ಎಷ್ಟು ಗೊತ್ತೇ?
ಅವಿನಾಶ್ ಅವರು ವಸುದೇವ ಕುಟುಂಬ ಧಾರಾವಾಹಿಯಲ್ಲಿ ಕುಟುಂಬದ ಯಜಮಾನ ವಸುದೇವ ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. 30 ವರ್ಷಗಳ ನಂತರ ಕಿರುತೆರೆಯಲ್ಲಿ ಅವಿನಾಶ್ ಅವರು ವಸುದೇವ ಕುಟುಂಬ ಧಾರಾವಾಹಿಯನ್ನ ಆಯ್ಕೆ ಮಾಡಲು ಕಾರಣವನ್ನ ವಿವರಿಸಿದ್ದಾರೆ. ಜೊತೆಗೆ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ.

Vasudeva Kutumba Avinash -

ಸ್ಯಾಂಡಲ್ವುಡ್ನ ಖ್ಯಾತ ನಟ ಅವಿನಾಶ್ ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಬಹುಭಾಷಾ ನಟರಾಗಿರುವ ಅವಿನಾಶ್ (Avinash) 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ವಸುದೇವ ಎಂಬ ಮುಖ್ಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕೋರಮಂಗಲ ಟಾಕೀಸ್ ಸಂಸ್ಥೆಯಡಿ ಅನಿಲ್ ಕೋರಮಂಗಲ ನಿರ್ಮಾಣ ಮತ್ತು ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವ ಧಾರಾವಾಹಿಗೆ ಒಂದೇ ಬೇರು, ಕವಲು ನೂರು ಎಂಬ ಅರ್ಥಪೂರ್ಣ ಅಡಿಬರಹವಿದೆ.
ಅವಿನಾಶ್ ಅವರು ಈ ಧಾರಾವಾಹಿಯಲ್ಲಿ ಕುಟುಂಬದ ಯಜಮಾನ ವಸುದೇವ ಹಾಗೂ ಮುದ್ದಿನ ನಾಲ್ಕು ಹೆಣ್ಣು ಮಕ್ಕಳ ತಂದೆಯಾಗಿ ಅಭಿನಯಿಸುತ್ತಿದ್ದಾರೆ. ಪತ್ನಿಯಾಗಿ ಹಿರಿಯ ನಟಿ ಅಂಜಲಿ, ಪುತ್ರಿಯರಾಗಿ ಭಾವನಾ ಪಾಟೀಲ್, ಚೈತ್ರಾತೋಟದ್, ಬೃಂದಾ ಕಶ್ಯಪ್, ಆರಾಧ್ಯ ಇದ್ದಾರೆ. ಇವರೊಂದಿಗೆ ಹಂಸ, ಭಗತ್, ಆರ್.ಜಿ. ಅನೂಪ ಸೇರಿದಂತೆ ಅನೇಕ ಅನುಭವಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.
30 ವರ್ಷಗಳ ನಂತರ ಕಿರುತೆರೆಯಲ್ಲಿ ಅವಿನಾಶ್ ಅವರು ವಸುದೇವ ಕುಟುಂಬ ಧಾರಾವಾಹಿಯನ್ನ ಆಯ್ಕೆ ಮಾಡಲು ಕಾರಣವನ್ನ ವಿವರಿಸಿದ್ದಾರೆ. ಜೊತೆಗೆ ಸಂಭಾವನೆ ಬಗ್ಗೆಯೂ ಮಾತನಾಡಿದ್ದಾರೆ. ಈ ಹಿಂದೆ ಸುಮಾರು ಚಾಲೆನ್‌ನವರು ನನ್ನ ಬಂದು ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದಾರೆ. ಅವರೆಲ್ಲರಿಗೂ ನಾನು ನಟಿಸಲ್ಲ ಅಂತಲೇ ಹೇಳಿದ್ದೆ. ಸೀರಿಯಲ್ ಮಾಡೋಕೆ ಕಷ್ಟ ಆಗುತ್ತದೆ, ಆ ಫಾರ್ಮ್ಯಾಟ್ ನನಗೆ ಆಗಲ್ಲ ಅಂತ ಹೇಳಿದ್ದೆ ಎಂದರು.
ವಸುದೇವ ಕುಟುಂಬ ಧಾರಾವಾಹಿ ತಂಡ ಬಂದಾಗ, ನಾನು ಕೇಳಿದಕ್ಕೆಲ್ಲ ಓಕೆ ಅಂದ್ರು. ನನ್ನ ಪೇಮೆಂಟ್, ನನ್ನ ಡಿಮ್ಯಾಂಡ್ಸ್ ಎಲ್ಲವನ್ನೂ ಹೇಳಿದೆ. ಹಿಂಗೆ ಕೊಟ್ರೆ ಮಾಡ್ತೀನಿ ಅಂದಿದ್ದೆ. ಎಲ್ಲಾದಕ್ಕೂ ಓಕೆ ಅಂತ ಒಪ್ಪಿಕೊಂಡರು. ಸಂಭಾವನೆ ಎಷ್ಟು ಅಂತ ಹೇಳಲ್ಲ. ಆದರೆ, ಒಬ್ಬ ನಟನಾಗಿ ಸೀರಿಯಲ್‌ನಲ್ಲಿ ನನ್ನಷ್ಟು ಸಂಭಾವನೆ ಯಾರೂ ತಗೊಂಡಿರಲು ಸಾಧ್ಯವಿಲ್ಲ ಎಂದರು. ಇದರಲ್ಲಿ ನನ್ನದು ಕ್ಯಾಮಿಯೋ ರೋಲ್ ಅಷ್ಟೇ. ಹದಿನೈದು ಎಪಿಸೋಡ್ ಬರ್ತೀನಿ ಎಂದು ಅವಿನಾಶ್ ಹೇಳಿದ್ದಾರೆ.
Anushree: ‘ಬೇಗ ಮಗು ಮಾಡಿಕೊಳ್ಳಿ’ ಎಂದ ಸಮೀರ್ ಆಚಾರ್ಯ ಪತ್ನಿಗೆ ಅನುಶ್ರೀ ಹೇಳಿದ್ದೇನು ನೋಡಿ
ವಸುದೇವನ ಕುಟುಂಬವು ಸಮಾಜದಲ್ಲಿ ಅಪಾರ ಪ್ರೀತಿ, ಗೌರವವನ್ನು ಪಡೆದಿರುತ್ತೆ. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತದೆ. ಆದರೆ ಸಂತೋಷದಿಂದ ತುಂಬಿದ್ದ ಈ ಕುಟುಂಬದಲ್ಲಿ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಎಲ್ಲರ ಜೀವನವನ್ನು ತಲೆಕೆಳಗಾಗಿಸುವಂತೆ ಮಾಡುತ್ತದೆ. ಇದರಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತದೆ ಈ ವಸುದೇವ ಕುಟುಂಬ.. ಈ ರೀತಿಯ ಕಥೆ ಇದರಲ್ಲಿದೆ.