ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Abhishek Sharma: ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ರೋಹಿತ್ ಜತೆ ಎಲೈಟ್‌ ಪಟ್ಟಿ ಸೇರಿದ ಅಭಿಷೇಕ್

Asia Cup 2025: ಭಾರತದ ಪರ ಟಿ20 ಪಂದ್ಯದ ಇನಿಂಗ್ಸ್‌ವೊಂದರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ನಾಲ್ಕನೇ ಬ್ಯಾಟರ್‌ ಎಂಬ ಶ್ರೇಯಕ್ಕೆ ಅಭಿಷೇಕ್‌ ಶರ್ಮಾ ಭಾಜನರಾದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ರೋಹಿತ್‌ ಶರ್ಮಾ. ಅವರು ಇಂಗ್ಲೆಂಡ್‌ ವಿರುದ್ಧ 2021ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಾರಿಸಿದ್ದರು.

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ದಾಖಲೆ ಬರೆದ ಅಭಿಷೇಕ್

-

Abhilash BC Abhilash BC Sep 11, 2025 9:02 AM

ದುಬೈ: ಬುಧವಾರ ನಡೆದಿದ್ದ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಯಲ್ಲಿ ಭಾರತ ತಂಡ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ವಿರುದ್ಧ ಸುಲಭ ಜಯ ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸಣ್ಣ ಮೊತ್ತದ ಚೇಸಿಂಗ್‌ ವೇಳೆ ಬಿರುಸಿನ ಬ್ಯಾಟಿಂಗ್‌ ನಡೆಸಿದ ಅಭಿಷೇಕ್‌ ಶರ್ಮ(Abhishek Sharma) ಇನಿಂಗ್ಸ್‌ನ ಮೊದಲೆರಡು ಎಸೆತಗಳನ್ನು ಕ್ರಮವಾಗಿ ಸಿಕ್ಸರ್‌ ಹಾಗೂ ಬೌಂಡರಿಗಟ್ಟಿದರು. 16 ಎಸೆತಗಳಲ್ಲಿ 30 ರನ್‌ ಬಾರಿಸಿ ಔಟಾದರು. ಇದೇ ವೇಳೆ ದಾಖಲೆಯೊಂದನ್ನು ನಿರ್ಮಿಸಿದರು.

ಭಾರತದ ಪರ ಟಿ20 ಪಂದ್ಯದ ಇನಿಂಗ್ಸ್‌ವೊಂದರ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿದ ನಾಲ್ಕನೇ ಬ್ಯಾಟರ್‌ ಎಂಬ ಶ್ರೇಯಕ್ಕೆ ಅಭಿಷೇಕ್‌ ಶರ್ಮಾ ಭಾಜನರಾದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ರೋಹಿತ್‌ ಶರ್ಮಾ. ಅವರು ಇಂಗ್ಲೆಂಡ್‌ ವಿರುದ್ಧ 2021ರಲ್ಲಿ ನಡೆದ ಪಂದ್ಯದಲ್ಲಿ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಬಾರಿಸಿದ್ದರು.

ಇನಿಂಗ್ಸ್‌ನ ಮೊದಲ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ ಭಾರತದ ಬ್ಯಾಟರ್‌ಗಳು

ರೋಹಿತ್‌ ಶರ್ಮಾ vs ಆದಿಲ್‌ ರಶೀದ್‌ (ಇಂಗ್ಲೆಂಡ್)

ಯಶಸ್ವಿ ಜೈಸ್ವಾಲ್‌ vs ಸಿಕಂದರ್‌ ರಾಜಾ (ಜಿಂಬಾಬ್ವೆ)

ಸಂಜು ಸ್ಯಾಮ್ಸನ್‌ vs ಜೋಫ್ರಾ ಆರ್ಚರ್‌ (ಇಂಗ್ಲೆಂಡ್‌)

ಅಭಿಷೇಕ್‌ ಶರ್ಮಾ vs ದುಬೈ (ಯುಎಇ)

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆಹ್ವಾನ ಪಡೆ ಯುಎಇ ಮೊದಲ ಎರಡು ಓವರ್‌ಗಳಲ್ಲಿ ಉತ್ತಮ ರನ್‌ ಕಲೆ ಹಾಕಿರೂ ಆ ಬಳಿಕ ನಾಟಕೀಯ ಕುಸಿತ ಕಂಡಿತು. ಕೇವಲ 57 ರನ್‌ಗೆ ಆಲೌಟ್‌ ಆಯಿತು. ಚೈನಾಮನ್' ಕುಲದೀಪ್‌ ಯಾದವ್‌ 2.1 ಓವರ್‌ಗಳಲ್ಲಿ 7 ರನ್‌ ನೀಡಿ ನಾಲ್ಕು ವಿಕೆಟ್‌ ಕಬಳಿಸಿದರು. ಆಲ್‌ರೌಂಡರ್‌ ಶಿವಂ ದುಬೆ 4 ರನ್‌ಗೆ ಮೂರು ವಿಕೆಟ್‌ ಕಿತ್ತರು. ಜಸ್‌ಪ್ರೀತ್‌ ಬೂಮ್ರಾ, ವರುಣ್‌ ಚಕ್ರವರ್ತಿ ಮತ್ತು ಅಕ್ಷರ್‌ ಪಟೇಲ್‌ ಒಂದೊಂದು ವಿಕೆಟ್‌ ಹಂಚಿಕೊಂಡರು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.3 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 60 ರನ್‌ ಬಾರಿಸಿ ಗೆಲುವು ಸಾಧಿಸಿತು. ಭಾರತ ‘ಎ’ ಗುಂಪಿನ ತನ್ನ ಮುಂದಿನ ಪಂದ್ಯವನ್ನು ಭಾನುವಾರ (ಸೆ.14) ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ.