Anushree: ‘ಬೇಗ ಮಗು ಮಾಡಿಕೊಳ್ಳಿ’ ಎಂದ ಸಮೀರ್ ಆಚಾರ್ಯ ಪತ್ನಿಗೆ ಅನುಶ್ರೀ ಹೇಳಿದ್ದೇನು ನೋಡಿ
ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದಾರೆ. ಪ್ರಮೋಷನ್ಸ್, ಬೇರೆ ಬೇರೆ ಈವೆಂಟ್ಸ್ ಸೇರಿದಂತೆ ಮಹಾನಟಿ ಸೀಸನ್ 2 ರಿಯಾಲಿಟಿ ಶೋಗೂ ಮರಳಿದ್ದಾರೆ. ಇದರ ಮಧ್ಯೆ ಇತ್ತೀಚೆಗೆ ಝೀ ಕನ್ನಡ ಸಿಬ್ಬಂದಿಗೆ ಅನುಶ್ರೀ ಮದುವೆ ಊಟ ಹಾಕಿಸಿದ್ದಾರೆ.

Sameer Acharya and Anushree -

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿತು. ರೋಷನ್ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ನಮ್ಮದು ಸರಳ ವಿವಾಹ ಎಂದು ಅನುಶ್ರೀ ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಬಳಿಕ ಮದುವೆಯ ಒಂದೊಂದೇ ವಿಡಿಯೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಅನು ಪೋಸ್ಟ್ ಮಾಡುತ್ತಿದ್ದಾರೆ.
ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದಾರೆ. ಪ್ರಮೋಷನ್ಸ್, ಬೇರೆ ಬೇರೆ ಈವೆಂಟ್ಸ್ ಸೇರಿದಂತೆ ಮಹಾನಟಿ ಸೀಸನ್ 2 ರಿಯಾಲಿಟಿ ಶೋಗೂ ಮರಳಿದ್ದಾರೆ. ಇದರ ಮಧ್ಯೆ ಇತ್ತೀಚೆಗೆ ಝೀ ಕನ್ನಡ ಸಿಬ್ಬಂದಿಗೆ ಅನುಶ್ರೀ ಮದುವೆ ಊಟ ಹಾಕಿಸಿದ್ದಾರೆ. ಈ ವೇಳೆ ಸಮೀರ್ ಆಚಾರ್ಯ ದಂಪತಿ ಕೂಡ ಇದ್ದರು. ಇವರು ನಾವು ನಮ್ಮವರು ರಿಯಾಲಿಟಿ ಶೋನಲ್ಲಿ ಭಾಗವಿಸುತ್ತಿದ್ದಾರೆ.
ತಮ್ಮ ಮಗಳ ಜೊತೆ ಸಮೀರ್ ಆಚಾರ್ಯ ದಂಪತಿ ಊಟಕ್ಕೆ ಕೂತಿದ್ದರು. ಈ ವೇಳೆ ಅನುಶ್ರೀ ಬಂದು ಮಾತನಾಡಿಸಿದ್ದಾರೆ. ಅವರ ಮುದ್ದು ಮಗಳನ್ನು ನೋಡಿ ಖುಷಿಯಾಗಿದ್ದಾರೆ. ಈ ವೇಳೆ "ಆದಷ್ಟು ಬೇಗ ಇಂತಾದೊಂದು ಮಗು ಬರಲಿ" ಎಂದು ಸಮೀರ್ ಪತ್ನಿ ಶ್ರಾವಣಿ ಸಲಹೆ ನೀಡಿದ್ದಾರೆ. ಇದಕ್ಕೆ, ನನಗೆ ಹೆಣ್ಣು ಪಾಪು ಅಂದರೆ ಇಷ್ಟ ಎಂದು ಮಗು ಬಗ್ಗೆ ತಮ್ಮ ಆಸೆಯನ್ನ ಅನುಶ್ರೀ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಆಗಲಿ ಎಂಬ ಶ್ರಾವಣಿ ಅವರ ಸಲಹೆಗೆ, ನಾಚುತ್ತಲೇ ನಿಮ್ಮ ಆಶೀರ್ವಾದ ಎಂದಿದ್ದಾರೆ ಅನುಶ್ರೀ.
ಅಂದಹಾಗೆ ಇವರದ್ದು ಲವ್ ಮ್ಯಾರೇಜ್ ಅಂತೆ. ಐಟಿ ಉದ್ಯೋಗಿಯಾಗಿರುವ ರೋಶನ್ ಅವರು ಕೊಡಗು ಮೂಲದವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್ ಭೇಟಿಯಾಗಿತ್ತು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
BBK 12: ಬಿಗ್ ಬಾಸ್ಗೆ ಹೋಗಲಿದ್ದಾರೆ ಎಂದವರಿಗೆ ವಿಡಿಯೋ ಮೂಲಕ ಬಿಸಿ ಮುಟ್ಟಿಸಿದ ಸುಧಾರಾಣಿ