ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಟಾಸ್ಕ್​ನಲ್ಲಿ ಕಾವ್ಯಾಗೆ ಬಿಗ್ ಸಪೋರ್ಟ್: ಆದ್ರೆ ಗೆದ್ದಿದ್ದು ಮಾತ್ರ..

ಕಲರ್ಸ್ ಕನ್ನಡ ಇಂದಿನ ಟಾಸ್ಕ್ನ ಪ್ರೋಮೋವನ್ನು ಬಿಟ್ಟಿದ್ದು, ಇದರಲ್ಲಿ ಕಾವ್ಯಾ ಹಾಗೂ ರಾಶಿಕಾ ನಡುವೆ ಟಾಸ್ಕ್ ಒಂದು ನಡೆದಿದೆ. ಓರ್ವ ಸ್ಪರ್ಧಿ ಹಲಗೆ ಮೇಲೆ ನಡೆಯುತ್ತ ಎದುರಾಳಿ ಆಟಗಾರ ಇಟ್ಟಿರುವ ಡಿಸ್ಕ್ ಅನ್ನು ತಿರುಗಿಸಿ ತಮ್ಮ ಬಣ್ಣದ ಅಧಿಕ ಡಿಸ್ಕ್ಗಳು ಮೇಲ್ಬದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಟಾಸ್ಕ್​ನಲ್ಲಿ ಕಾವ್ಯಾಗೆ ಬಿಗ್ ಸಪೋರ್ಟ್: ಆದ್ರೆ ಗೆದ್ದಿದ್ದು ಮಾತ್ರ..

Rashika and Kavya -

Profile Vinay Bhat Oct 15, 2025 8:35 AM

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಇದು ಮೊದಲ ಫಿನಾಲೆ ವಾರ ಆಗಿರುವುದರಿಂದ ಟಾಸ್ಕ್​ಗಳ ಕಾವು ಏರುತ್ತಿದೆ. ಒಂದೊಂದು ಟಾಸ್ಕ್ ಕೂಡ ಮಹತ್ವ ಪಡೆದುಕೊಳ್ಳುತ್ತಿದೆ. ಸದ್ಯ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಸ್ಪಂದನಾ ಸೋಮಣ್ಣ ಹಾಗೂ ಮಾಲು ಫೈನಲಿಸ್ಟ್ ಆಗಿದ್ದಾರೆ. ಈ ವಾರದ ಅಂತ್ಯದಲ್ಲಿ ಮಾಸ್ ಎಲಿಮಿನೇಷನ್ ನಡೆಯಲಿರುವ ಕಾರಣ ಈ ವಾರ ನೀಡಲಿರುವ ಟಾಸ್ಕ್ ಸ್ಪರ್ಧಿಗಳು ಮುಖ್ಯವಾಗಿದೆ. ಫೈನಲಿಸ್ಟ್​ಗಳನ್ನು ಬಿಟ್ಟು ಉಳಿದು ಎಲ್ಲ ಕಂಟೆಸ್ಟೆಂಟ್​ಗಳ ನಾಮಿನೇಟ್ ಆಗಿರುವ ಕಾರಣ ಗೆಲ್ಲಲೇ ಬೇಕಾದ ಒತ್ತಡದಲ್ಲಿದ್ದಾರೆ.

ಮೊದಲ ಫಿನಾಲೆಯ ಈ ವಾರ ತಾವು ಫೈನಲಿಸ್ಟ್ ಆಗಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರಯಾಣ ಮುಂದುವರೆಸಲು ಇದು ಕಟ್ಟ ಕಡೆಯ ಅವಕಾಶ ಎಂದು ಹೇಳಿ ಬಿಗ್ ಬಾಸ್ ಒಂದೊಂದೆ ಟಾಸ್ಕ್ ನೀಡುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ಇಂದಿನ ಟಾಸ್ಕ್​ನ ಪ್ರೋಮೋವನ್ನು ಬಿಟ್ಟಿದ್ದು, ಇದರಲ್ಲಿ ಕಾವ್ಯಾ ಹಾಗೂ ರಾಶಿಕಾ ನಡುವೆ ಟಾಸ್ಕ್ ಒಂದು ನಡೆದಿದೆ. ಓರ್ವ ಸ್ಪರ್ಧಿ ಹಲಗೆ ಮೇಲೆ ನಡೆಯುತ್ತ ಎದುರಾಳಿ ಆಟಗಾರ ಇಟ್ಟಿರುವ ಡಿಸ್ಕ್ ಅನ್ನು ತಿರುಗಿಸಿ ತಮ್ಮ ಬಣ್ಣದ ಅಧಿಕ ಡಿಸ್ಕ್​ಗಳು ಮೇಲ್ಬದಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.

ಬಿಗ್ ಬಾಸ್ ಪ್ರೋಮೋ:



ಈ ಟಾಸ್ಕ್​ನಲ್ಲಿ ಹೆಚ್ಚಿನವರು ಕಾವ್ಯಾಗೆ ಸಪೋರ್ಟ್ ಮಾಡಿದ್ದಾರೆ, ಜಾನ್ವಿ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಮಲ್ಲಮ್ಮ, ಧನುಷ್ ಸೇರಿದಂತೆ ಅನೇಕರು ಕಾವ್ಯ ಅವರು ಈ ಗೆಲ್ಲಲಿ ಅಂತ ಅವರಿಗೆ ಸಪೋರ್ಟ್ ಮಾಡ್ತೇನೆ ಎಂದಿದ್ದಾರೆ. ಆದರೆ, ಟಾಸ್ಕ್​ ಅನ್ನು ಸರಿಯಾಗಿ ಅರ್ಥ ಮಾಡುವಲ್ಲಿ ಕಾವ್ಯ ಎಡವಿದ್ದಾರೆ. ಟಾಸ್ಕ್​ನ ಉಸ್ತುವಾರಿ ವಹಿಸಿಕೊಂಡಿದ್ದ ಧ್ರುವಂತ್ ಅವರು, ಡಿಸ್ಕ್​ಗಳನ್ನು ಕಾವ್ಯ ಅವರು ಕೈಯಲ್ಲಿ ಕಲೆಕ್ಟ್ ಮಾಡ್ತಾ ಹೋಗ್ತಿದ್ದಾರೆ. ಅವರು ತಮಗೆ ಇಷ್ಟ ಬಂದ ಹಾಗೆ ಆಟವಾಡಿದ್ದಾರೆ.. ನಿಮ್ಮನ್ನ ಈ ಟಾಸ್ಕ್​ನಲ್ಲಿ ಮೂವ್ ಮಾಡೋಕೆ ಬಿಡಲ್ಲ ಎಂದು ಹೇಳಿದ್ದಾರೆ.

ಈ ಪ್ರಸಂಗದಿಂದ ರಾಶಿಕಾಗೆ ಪ್ಲಸ್ ಆಗುವ ಸಾಧ್ಯತೆ ಇದೆ. ಅಲ್ಲದೆ ಪ್ರೋಮೋದಲ್ಲಿ ಕಾವ್ಯ ಬೇಸರದಲ್ಲಿ ಹೋಗುತ್ತಿರುವುದು ಕಂಡರೆ ರಾಶಿಕಾ ಮೊಗದಲ್ಲಿ ಗೆಲುವಿನ ನಗೆ ಕಾಣಿಸುತ್ತಿದೆ. ಅಂತಿಮವಾಗಿ ಈ ಟಾಸ್ಕ್ ಏನಾಗಿದೆ?, ಯಾರು ಗೆದ್ರು ಎಂಬುದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Karna Serial: ಮಂಟಪದಿಂದ ತೇಜಸ್ ಕಾಣೆ: ನಿತ್ಯಾಗೆ ತಾಳಿ ಕಟ್ಟಲು ತಯಾರಾದ ಕರ್ಣ