BBK 12: ಬಿಗ್ ಬಾಸ್ನಲ್ಲಿ ಧೂಳೆಬ್ಬಿಸುತ್ತಿರುವ ರಕ್ಷಿತಾ ಶೆಟ್ಟಿಗೆ ವಾರಕ್ಕೆ ಎಷ್ಟು ಸಂಭಾವನೆ ಸಿಗುತ್ತೆ?
Rakshita Shetty Remuneration: ರಕ್ಷಿತಾ ಶೆಟ್ಟಿ ಅವರು ಈ ವಾರ ಉತ್ತಮ ಪ್ರದರ್ಶನ ನೀಡಿ ಫಿನಾಲೆ ಕಂಟೆಂಡರ್ ಆಗುತ್ತಾರ ನೋಡಬೇಕು. ಇದರ ಮಧ್ಯೆ ರಕ್ಷಿತಾ ಅವರ ಬಿಗ್ ಬಾಸ್ ಸಂಭಾವನೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಅವರ ಸಂಭಾವನೆ ವಾರಕ್ಕೆ 25 ಸಾವಿರ ಎಂದು ಹೇಳಲಾಗುತ್ತಿದೆ.

Rakshita Shetty Remuneration -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಕಳೆದಿದೆ. ಮೂರನೇ ವಾರದಲ್ಲಿ ಅಂದರೆ ಈ ವಾರ ಮೊದಲ ಫಿನಾಲೆ ಇರುವ ಕಾರಣ ಸ್ಪರ್ಧಿಗಳು ತಾನು ಎಲ್ಲ ಕಡೆ ಗುರಿತಿಸಬೇಕೆಂದು ಮುನ್ನುಗ್ಗುತ್ತಿದ್ದಾರೆ. ಇವುಗಳ ಮಧ್ಯೆ ಮೊದಲ ದಿನ ದೊಡ್ಮನೆಯಿಂದ ಎಲಿಮಿನೇಟ್ ಆಗಿ ವೀಕೆಂಡ್ನಲ್ಲಿ ಪುನಃ ಮನೆ ಸೇರಿದ ರಕ್ಷಿತಾ ಶೆಟ್ಟಿ ಯಾವುದೇ ಡಬಲ್ ಗೇಮ್ ಆಡದೆ ವೀಕ್ಷಕರಿಗೆ ಹತ್ತಿರವಾಗುತ್ತಿದ್ದರು. ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೂಡ ಮನೆಯಲ್ಲಿ ಇವರ ನಡವಳಿಕೆಯನ್ನು ಇಷ್ಟಪಟ್ಟಿದ್ದಾರೆ. ತಮ್ಮ ಮಾತುಗಳಿಂದಲೇ ಎಲ್ಲರನ್ನೂ ನಗಿಸುತ್ತಿದ್ದಾರೆ.
ಹೌದು, ತಮ್ಮ ಮುಗ್ಧತೆ ಹಾಗೂ ಮಾತಿನಿಂದ ಪ್ರೇಕ್ಷರನ್ನು ರಕ್ಷಿತಾ ನಗಿಸುತ್ತಿದ್ದಾರೆ. ಎರಡು ವಾರದಲ್ಲೇ ಇವರಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿದೆ. ಆರಂಭದಲ್ಲಿ ಇವರನ್ನು ಎಲಿಮಿನೇಟ್ ಮಾಡಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ವಿರುದ್ಧ ಹಾಗೂ ಮನೆಯ ಒಂಟಿ ಸದಸ್ಯರ ವಿರುದ್ಧ ಫ್ಯಾನ್ಸ್ ಕೋಪಗೊಂಡಿದ್ದರು. ಬಳಿಕ ಬಿಗ್ ಬಾಸ್ ಮನೆಗೆ ಇವರು ಪುನಃ ಬಂದಾಗ ಕೃಷ್ಣ ಸುಂದರಿ ಎಂದೆಲ್ಲ ಕರೆದರು.
ಕರಾವಳಿಯ ಕನ್ನಡತಿ ರಕ್ಷಿತಾ ಶೆಟ್ಟಿ ಬಲೆ ಬಲೆ ಎನ್ನುತ್ತ ವ್ಲಾಗ್ ಮಾಡಿ ಫೇಮಸ್ ಆದವರು. ತಮಗೆ ಗೊತ್ತಿರುವ ಅಲ್ಪ-ಸ್ವಲ್ಪ ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನದಲ್ಲಿ ಸ್ಥಾನ ಪಡೆದವರು. ರಕ್ಷಿತಾ ಶೆಟ್ಟಿ ಮಂಗಳೂರಿನವರು. ಹುಟ್ಟಿದ್ದು ಪಡುಬಿದ್ರೆಯಲ್ಲಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಮುಂಬೈನಲ್ಲಿ. ಮನೆಯಲ್ಲಿ ರಕ್ಷಿತಾ ಶೆಟ್ಟಿ ಮಾತೃಭಾಷೆ ತುಳು ಆದ ಕಾರಣ ಅವರಿಗೆ ಕನ್ನಡ ಸರಿಯಾಗಿ ಬರಲ್ಲ. ಬರೀ ಕನ್ನಡ ಮಾತ್ರ ಅಲ್ಲ.. ತುಳು, ಹಿಂದಿ, ಇಂಗ್ಲೀಷ್‌ನಲ್ಲಿಯೂ ವ್ಲಾಗ್ಸ್, ರೀಲ್ಸ್ ಮಾಡುತ್ತಿರುತ್ತಾರೆ.
BBK 12: ಬಿಗ್ ಬಾಸ್ನಲ್ಲಿ ಬಿಗ್ ಟ್ವಿಸ್ಟ್: ಜಂಟಿ-ಒಂಟಿ ಆಟ ದಿಢೀರ್ ಸ್ಟಾಪ್
ರಕ್ಷಿತಾ ಅವರು ಕೊರೊನಾ ಟೈಮ್‌ನಲ್ಲಿ ಅಜ್ಜಿ ಮನೆ (ಮಂಗಳೂರು)ಗೆ ಬಂದಿದ್ದಾಗ ಅಲ್ಲಿ ಸಾಮಾನ್ಯವಾಗಿ ಮಾಡಿದ ಒಂದು ರೀಲ್ ವೈರಲ್ ಆಗಿತ್ತು. ಹೀಗಾಗಿ ಅಲ್ಲಿಂದ ವಿಡಿಯೋ ಮಾಡುತ್ತಾ ಬಂದಿರುವ ಅವರು, ಸದ್ಯ ಫೇಮಸ್ ಆಗಿದ್ದಾರೆ. ಫೇಮಸ್ ಆಗುವ ಜೊತೆಗೆ ಇವರು ಹಲವು ಬಾರಿ ಟ್ರೋಲ್ ಕೂಡ ಆಗಿದ್ದಾರೆ.
ಸದ್ಯ ರಕ್ಷಿತಾ ಅವರು ಈ ವಾರ ಉತ್ತಮ ಪ್ರದರ್ಶನ ನೀಡಿ ಫಿನಾಲೆ ಕಂಟೆಂಡರ್ ಆಗುತ್ತಾರ ನೋಡಬೇಕು. ಇದರ ಮಧ್ಯೆ ರಕ್ಷಿತಾ ಅವರ ಬಿಗ್ ಬಾಸ್ ಸಂಭಾವನೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಅವರ ಸಂಭಾವನೆ ವಾರಕ್ಕೆ 25 ಸಾವಿರ ಎಂದು ಹೇಳಲಾಗುತ್ತಿದೆ.
(ಇದು ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿನ ವೈರಲ್ ಸಂಗತಿಗಳನ್ನು ಆಧರಿಸಿ ಬರೆಯಲಾಗಿದೆ, ನಿಖರ ಮಾಹಿತಿಯಲ್ಲ.)