RJ Amith: ಬನಿಯನ್ ಮೇಲೆ ರೋಡ್ ಮಧ್ಯೆ ತಿಕ್ಕಲುತಿಕ್ಕಲು ಡ್ಯಾನ್ಸ್ ಬೇಕಿತ್ತಾ ಇವರಿಗೆ?: ಆರ್ಜೆ ಅಮಿತ್
ಕರಿಬಸಪ್ಪ 15ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಇವರು ಮೊದಲ ವಾರ ಅಷ್ಟೇನು ಕಾಣಿಸಿಕೊಂಡಿಲ್ಲ. ಕರಿಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿದ್ದರಷ್ಟೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ವಿಶ್ವವಾಣಿ ಟಿವಿ ಸ್ಪೆಷನ್ ಜೊತೆ ಮಾತನಾಡಿದ ಆರ್ಜೆ ಅಮಿತ್ ಕರಿಬಸಪ್ಪ ಬಗ್ಗೆ ಕೆಲ ವಿಚಾರ ಹಂಚಿಕೊಂಡಿದ್ದಾರೆ.

RJ Amith and Karibasappa -

ಬಿಗ್ ಬಾಸ್ ಕನ್ನಡ ಸೀಸನ್ 12ರ (Bigg Boss Kannada 12) ಮೊದಲ ವಾರವೇ ಡಬಲ್ ಎಲಿಮಿನೇಷನ್ ನಡೆಯಿತು. ಜಂಟಿ ಆಗಿ ಮನೆಯೊಳಗೆ ಕಾಲಿಟ್ಟ ಆರ್ಜೆ ಅಮಿತ್ ಹಾಗೂ ಬಾಡಿಬಿಲ್ಡರ್ ಕರಿಬಸಪ್ಪ ಅವರು ಅತಿ ಕಡಿಮೆ ವೋಟ್ ಪಡೆದು ಹೊರಬಂದರು. ಆರ್ಜೆ ಅಮಿತ್ಗೆ ದೊಡ್ಡ ಅಭಿಮಾನಿ ಬಳಗ ಇರಲಿಲ್ಲ. ಅಲ್ಲದೆ ಇವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಫ್ಯಾನ್ಸ್ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು. ಈ ಹಿಂದೆ ಅವರು "ಬಿಗ್‌ಬಾಸ್ ಒಂದು ಕ್ರಿಂಜ್ ಶೋ" ಎನ್ನುವ ಮೂಲಕ ಪ್ರೇಕ್ಷಕರ ಕೋಪಕ್ಕೆ ಗುರಿಯಾಗಿದ್ದರು.
ಕರಿಬಸಪ್ಪ 15ನೇ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ಇವರು ಮೊದಲ ವಾರ ಅಷ್ಟೇನು ಕಾಣಿಸಿಕೊಂಡಿಲ್ಲ. ಕರಿಬಸಪ್ಪ ಅವರು ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಫಿಲಾಸಫಿ ಹೇಳಿದ್ದರಷ್ಟೆ. ಆದರೆ, ಅದೆಲ್ಲ ತಮಾಷೆಯಂತಿತ್ತು.. ಕೇಳುಗರಿಗೆ ಹಾಗೂ ನೋಡುಗರಿಗೆ ಅದು ನಗು ತರಿಸುವಂತಿತ್ತು. ಇದೇ ಅವರಿಗೆ ಮುಳುವಾಗಿರಬಹುದು. ಹೀಗಾಗಿ ಮೊದಲ ವಾರ ಇಬ್ಬರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ವಿಶ್ವವಾಣಿ ಟಿವಿ ಸ್ಪೆಷನ್ ಜೊತೆ ಮಾತನಾಡಿದ ಆರ್ಜೆ ಅಮಿತ್ ಕರಿಬಸಪ್ಪ ಬಗ್ಗೆ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಅವರಿಗೆ ಪಕ್ಕಕ್ಕೆ ಏನು ಅರ್ಥ ಆಗುತ್ತಿರಲಿಲ್ಲ, ಬಿಗ್ ಬಾಸ್ ಟಾಸ್ಕ್ ಬಗ್ಗೆ ಹೇಳಿದ್ರು ಅರ್ಥ ಆಗುತ್ತಿರಲಿಲ್ಲ.. ನಾವು ಯಾರಾದ್ರು ಪುನಃ ಅವರಿಗೆ ಅರ್ಥ ಮಾಡಿಸಬೇಕಿತ್ತು. ಅವರು ಸ್ಮಾರ್ಟ್ ಆಗಿ ಸ್ವಲ್ಪ ಯೋಚನೆ ಮಾಡಬೇಕಿತ್ತು.. ನನ್ನ ಜೊತೆ ಕೈ ಜೋಡಿಸಬೇಕಿತ್ತು. ಅವರು ನಾಮಿನೇಟ್ ಆಗಿ ಬೇಸರದಲ್ಲಿದ್ದಾಗ ನಾನು ಅವರಿಗೆ ಸಮಾಧಾನ ಮಾಡಿದ್ದೆ.. ಏನಾಗುತ್ತೊ ನೋಡೋಣ.. ನಾನಿದ್ದೇನೆ ನಿಮ್ಮ ಜೊತೆ ಎಂದಿದ್ದೆ.. ಅದೇ ನಾನು ಬೇಸರದಲ್ಲಿ ಅಳುತ್ತಿದ್ದಾಗ ಅವರು ನನ್ನ ನೋಡಿ ಹಾ ಎಂದು ಬಟ್ಟೆ ಮಡಿಸಲು ಶುರುಮಾಡಿದರು ಎಂದು ಹೇಳಿದ್ದಾರೆ.
ಅವರು ಮನೆಯವರನ್ನ ಅರ್ಥ ಮಾಡಿಕೊಂಡು ಇಲ್ಲಿ ಹೇಗೆ ಇರಬೇಕೋ ಹಾಗಿದ್ದರೆ ಸಾಕಾಗ್ತಾ ಇತ್ತು ಆದ್ರೆ ಅವರು ತಮ್ಮ ಮೋಟಿವೇಷನ್ ಪಾರ್ಟ್ನಿಂದ ಹೊರಬಂದೇ ಇಲ್ಲ.. ಹೊರಗಡೆ ಕಾಮಿಡಿ ಥರ ಆಗಿದೆ ಅವರದ್ದು.. ನಾನು ಒಳಗಡೆ ಕೇಳಿದ್ದೆ ಅವರತ್ರ, ನೀವು ಕಾಲೆಜ್ ಡೇಸ್ನಲ್ಲಿ ಏನು ಮಜಾ ಮಾಡಿದ್ರಿ ಅದನ್ನ ಹೇಳಿ ಅಂತ.. ಬಟ್ ಅವರು ನಾನು ಕಾಲೇಜ್ ಡೇಸ್ನಲ್ಲಿ ಕೂಡ ಮೋಟಿವೇಷನ್ ಹೇಳ್ತಾ ಇದ್ದೆ ಅಂತ ಹೇಳಿದ್ರು.. ಯಾರೂ ಕಾಲೇಜ್ ಡೇಸ್ನಲ್ಲಿ ಮೋಟಿವೇಷನ್ ಎಲ್ಲ ಮಾಡ್ತಾರೆ ಬರೀ ಡವ್ಗಳು ಇವೆಲ್ಲ ಎಂಬುದು ಅಮಿತ್ ಹೇಳಿಕೆ.
BBK 12: ಇಂದು ವಾರದ ಕತೆ ಕಿಚ್ಚನ ಜೊತೆ: ಈ ಸ್ಪರ್ಧಿಗಳಿಗೆ ಕ್ಲಾಸ್ ಖಚಿತ
ಬನಿಯಾನು ಹಾಕಿಕೊಂಡು ಮಧ್ಯ ರೋಡ್ನಲ್ಲಿ ಹುಚ್ಚುಚ್ಚಾಗಿ ಡ್ಯಾನ್ಸ್ ಮಾಡೋದು.. ಅವರ ವಯಸ್ಸಿಗೂ ಅವರು ಮಾಡಿರೋ ಸಾಧನೆಗೂ ಏನು ಇದು ಅಂತಾನೆ ಅರ್ಥ ಆಗಲ್ಲ. ಅವರು ಒಂದು ಚೌಕಟ್ಟಿನಿಂದ ಹೊರಗೆ ಬಂದೇ ಇಲ್ಲ.. ನನಗೆ ಸರಿಯಾಗಿ ಮಾತಾಡೋಕೆ ಬಿಡ್ತಾ ಇರಲಿಲ್ಲ.. ಏನಾದ್ರು ಮಾತಾಡ್ತೆ ಇದ್ರೆ ಮಧ್ಯದಲ್ಲಿ ಬಂದು ಇರೀ ಇರೀ ಅಂತ ಮೋಟಿವೇಷನಲ್ ಹೇಳೊದು ಮಾಡ್ತಾ ಇದ್ರು.. ನಾನು ಬಿಗ್ ಬಾಸ್ ಮನೆಯಿಂದ ಮೊದಲ ವಾರಕ್ಕೆ ಹೊರಕ್ಕೆ ಬಹುಶಃ ಕರಿಬಸಪ್ಪ ಅವರೇ ಕಾರಣ ಎಂದು ಆರ್ಜೆ ಅಮಿತ್ ಹೇಳಿದ್ದಾರೆ.