BBK 12: ಒಟ್ಟು 10 ಮಂದಿ ನಾಮಿನೇಟ್: ಈ ವಾರ ಎಲಿಮಿನೇಷನ್ ಇರುತ್ತಾ-ಇಲ್ವಾ?
ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಜಾನ್ವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ, ಸ್ಪಂದನಾ ಹಾಗೂ ಮಾಳು, ಅಭಿಷೇಕ್ ಹಾಗೂ ಅಶ್ವಿನಿ ಎಸ್.ಎನ್ ಮತ್ತು ರಾಶಿಕಾ- ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಈ ವಾರ ದೊಡ್ಮನೆಯಿಂದ ಯಾರು ಔಟ್ ಆಗುತ್ತಾರೆ ಎಂಬುದು ನೋಡಬೇಕಿದೆ.

BBK 12 2nd Week Nomination -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾದ ಎರಡೇ ವಾರದಲ್ಲೇ ಕಾವೇರಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತ ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರತಿದಿನ ನಡುಕ ಹುಟ್ಟಿಸುತ್ತಿದ್ದಾರೆ. ಈಗಾಗಲೇ ಮುಂದಿನ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ. ಇದರಲ್ಲಿ ಅತಿ ದೊಡ್ಡ ಟ್ವಿಸ್ಟ್ ಇರಲಿದೆ ಎಂದು ಹೇಳಲಾಗಿದೆ. ಹೀಗಾಗಿ ಸ್ಪರ್ಧಿಗಳು ಪೈಪೋಟಿಗೆ ಬಿದ್ದಂತೆ ಸೇವ್ ಆಗಲು ಆಡುತ್ತಿದ್ದಾರೆ. ಸದ್ಯ ಕಾಕ್ರೋಚ್ ಸುಧಿ ಫಿನಾಲೆ ಕಂಟೆಂಡರ್ ಆಗಿದ್ದಾರೆ. ಇದರ ಮಧ್ಯೆ ಮನೆಯಿಂದ ಎರಡನೇ ವಾರ ಹೊರಹೋಗಲು ಒಟ್ಟು 10 ಮಂದು ನಾಮಿನೇಟ್ ಆಗಿದ್ದಾರೆ.
ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಜಾನ್ವಿ, ರಕ್ಷಿತಾ ಶೆಟ್ಟಿ, ಧನುಷ್, ಅಶ್ವಿನಿ ಗೌಡ, ಸ್ಪಂದನಾ ಹಾಗೂ ಮಾಳು, ಅಭಿಷೇಕ್ ಹಾಗೂ ಅಶ್ವಿನಿ ಎಸ್.ಎನ್ ಮತ್ತು ರಾಶಿಕಾ- ಮಂಜು ಭಾಷಿಣಿ ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಈ ವಾರ ದೊಡ್ಮನೆಯಿಂದ ಯಾರು ಔಟ್ ಆಗುತ್ತಾರೆ ಎಂಬುದು ನೋಡಬೇಕಿದೆ. ಒಬ್ಬರು ಹೋಗುತ್ತಾರ ಅಥವಾ ಒಂದು, ಎರಡು ಜೋಡಿ ಹೋಗುತ್ತಾ ಎಂಬುದು ಕುತೂಹಲ ಮೂಡಿಸಿದೆ. ಮೊದಲ ವಾರ ಆರ್ಜೆ ಅಮಿತ್ ಹಾಗೂ ಕರಿಬಸಪ್ಪ ಜೋಡಿ ಎಲಿಮಿನೇಟ್ ಆಗಿತ್ತು.
ಎಲಿಮಿನೇಷನ್ ಇರುತ್ತಾ-ಇಲ್ವಾ?
ಈ ವಾರ 10 ಮಂದಿ ನಾಮಿನೇಟ್ ಆಗಿದ್ದರೂ ಈ ವಾರದ ಎಲಿಮಿನೇಷನ್ ಬಗ್ಗೆ ಗೊಂದಲವಿದೆ. ಏಕೆಂದರೆ, ಮಂಗಳವಾರ ಶೋ ಸ್ಥಗಿತಗೊಂಡಿತ್ತು. ಬಳಿಕ ಗುರುವಾರ ಬೆಳಗ್ಗಿನ ಜಾವ ಸ್ಪರ್ಧಿಗಳು ಪುನಃ ಬಿಗ್ ಬಾಸ್ ಮನೆಯೊಳಗೆ ಬಂದರು. ಪರಿಸರ ನಿಯಮಗಳ ಉಲ್ಲಂಘನೆಗಾಗಿ ವೆಲ್ಸ್ ಸ್ಟುಡಿಯೋಗೆ ನೋಟಿಸ್ ಜಾರಿ ಮಾಡಿದ ಪರಿಣಾಮ, ಬಿಗ್ ಬಾಸ್ ಶೂಟಿಂಗ್ ಕೂಡ ಸ್ಥಗಿತಗೊಂಡಿತ್ತು. ಸದ್ಯ ಎಲಿಮಿನೇಷನ್ ಸಾಧ್ಯತೆಯ ಬಗ್ಗೆ ಖಚಿತ ಮಾಹಿತಿ ಇಲ್ಲ. ಯಾಕೆಂದರೆ ಪ್ರತಿವಾರದಂತೆ ಈ ವಾರ ಹೆಚ್ಚಿನ ಟಾಸ್ಕ್ ಕೂಡ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಏನು ಟ್ವಿಸ್ಟ್ ಇರಲಿದೆ ಎಂಬುದು ನೋಡಬೇಕಿದೆ.
BBK 12: ಬಿಬಿಕೆ 12ರ ಮೊದಲ ಕಳಪೆ ಇವರೇ ನೋಡಿ, ಒಬ್ಬರಲ್ಲ ಇಬ್ಬರು: ಅತ್ಯುತ್ತಮ ಯಾರು?
ಇನ್ನು ಬಿಗ್ ಬಾಸ್ನಲ್ಲಿ ಮುಂದಿನ ವಾರ ಮಾಸ್ ಎಲಿಮಿನೇಷನ್ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮನೆ ಅರ್ಧಕರ್ಧ ಖಾಲಿ ಆಗಲಿದೆಯಂತೆ. ಎಷ್ಟು ಮಂದಿ ಸ್ಪರ್ಧಿಗಳು ಹೊರಹೋಗುತ್ತಾರೋ ಅಷ್ಟೇ ಮಂದಿ ಸ್ಪರ್ಧಿಗಳು ಪುನಃ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ. ಮುಂದಿನ ವಾರದಲ್ಲಿ ಒಂದು ಫಿನಾಲೆ ನಡೆಯಲಿದ್ದು, ಇಲ್ಲಿಯೇ ಬಿಗ್ ಬಾಸ್ ಬಿಗ್ ಟ್ವಿಸ್ಟ್ ನೀಡುವ ಸಾಧ್ಯತೆ ಇದೆ. ಈಗ ಇರುವ ಸ್ಪರ್ಧಿಗಳಲ್ಲಿ ಯಾವಾಗ ಬೇಕಾದರೂ, ಯಾರು ಬೇಕಾದರೂ ಎಲಿಮಿನೇಟ್ ಆಗಬಹುದಾಗಿದೆ. ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಬೋದು ಅಥವಾ ಗುಂಪು ಗುಂಪಾಗಿ ಎಲಿಮಿನೇಟ್ ಆಗಬಹುದು ಎಂಬ ಭಯವನ್ನು ನೀಡಿದ್ದಾರೆ ಬಿಗ್ ಬಾಸ್.