ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Telugu: ತೆಲುಗು ಬಿಗ್ ಬಾಸ್​ನಲ್ಲಿ ಸಂಜನಾ ಗಲ್ರಾನಿಗೆ ಒಂದು ವಾರಕ್ಕೆ ಸಿಗುವ ಸಂಭಾವನೆ ಎಷ್ಟು ಲಕ್ಷ ಗೊತ್ತೇ?

ತೆಲುಗಿನಲ್ಲಿ ಸಂಜನಾ ಅವರು ಈಗಲೂ ತಮ್ಮ ಹವಾ ಇಟ್ಟುಕೊಂಡಿದ್ದಾರೆ. ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಅಬ್ಬರಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ತನ್ನ ಹೆಸರು ಬರುವಂತೆ ಮಾಡಿದ್ದಾರೆ. ಹೀಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಬಿಗ್ ಬಾಸ್ ಸೀಸನ್ 9ಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ.

ಬಿಗ್ ಬಾಸ್​ನಲ್ಲಿ ಸಂಜನಾಗೆ ವಾರಕ್ಕೆ ಸಿಗುವ ಸಂಭಾವನೆ ಎಷ್ಟು ಲಕ್ಷ?

sanjana galrani bigg boss telugu -

Profile Vinay Bhat Sep 11, 2025 3:57 PM

ಮೊನ್ನೆಯಷ್ಟೆ ಸೆಪ್ಟೆಂಬರ್ 7 ರಂದು ತೆಲುಗಿನಲ್ಲೂ ಬಿಗ್ ಬಾಸ್ (Bigg Boss Telugu) ಆರಂಭವಾಗಿದೆ. ಕಿಂಗ್ ಅಕ್ಕಿನೇನಿ ನಾಗಾರ್ಜುನ ನಿರೂಪಕರಾಗಿ ಈ ಬಾರಿ ಕೂಡ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ತೆಲುಗು ದೊಡ್ಮನೆಯೊಳಗೆ 15 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿ ಕೂಡ ಸ್ಪರ್ಧಿಯಾಗಿ ತೆಲುಗು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಅಚ್ಚರಿ ಎಂದರೆ ಇವರು ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಅಬ್ಬರಿಸುತ್ತಿದ್ದಾರೆ. ಎಲ್ಲರ ಬಾಯಲ್ಲೂ ತನ್ನ ಹೆಸರು ಬರುವಂತೆ ಮಾಡಿದ್ದಾರೆ.

ಸಂಜನಾ ಅವರು ಮದುವೆ, ಮಗು ಆದ ಮೇಲೆ ಸಂಜನಾ ತೆರೆ ಮರೆಗೆ ಸರಿದಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ಮಾತ್ರ ಆಕ್ಟಿವ್ ಆಗಿದ್ದ ಈ ನಟಿ ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. 4 ತಿಂಗಳ ಹಸುಗೂಸು ಹಾಗೂ ಪುಟ್ಟ ಮಗನನ್ನ ಬಿಟ್ಟು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಸಂಜನಾ ಗಲ್ರಾನಿ ಕನ್ನಡಿಗರಿಗಷ್ಟೇ ಅಲ್ಲ, ತೆಲುಗು ಮಂದಿಗೂ ಪರಿಚಯವಿದೆ.

ಸಂಜನಾ ಅವರು ಡಾರ್ಲಿಂಗ್ ಪ್ರಭಾಸ್ ನಟಿಸಿದ್ದ ಬುಜ್ಜಿಗಾಡು ಸಿನಿಮಾದಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದರು. ಪವನ್ ಕಲ್ಯಾಣ್ ನಟನೆಯ ಗಬ್ಬರ್ ಸಿಂಗ್, ದುಶ್ಯಾಸನ, ಯಮಹೋ ಯಮ, ಪೊಲೀಸ್ ಪೊಲೀಸ್, 2 ಕಂಟ್ರೀಸ್ ಇನ್ನೂ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕವೇ ತೆಲುಗು ಪ್ರೇಕ್ಷಕರಿಗೂ ಇಷ್ಟವಾಗಿದ್ದರು. ಕನ್ನಡ ಸೇರಿದಂತೆ ತೆಲುಗು, ತಮಿಳು, ಭಾಷೆಗಳಲ್ಲೂ ನಟಿಸಿರುವುದರಿಂದ ದಕ್ಷಿಣ ಭಾರತದ ಸಿನಿಪ್ರಿಯರಿಗೆ ಪರಿಚಯವಿದೆ.

ತೆಲುಗಿನಲ್ಲಿ ಸಂಜನಾ ಅವರು ಈಗಲೂ ತಮ್ಮ ಹವಾ ಇಟ್ಟುಕೊಂಡಿದ್ದಾರೆ. ಹೀಗಾಗಿ ದೊಡ್ಡ ಮೊತ್ತದ ಸಂಭಾವನೆಯನ್ನೇ ಬಿಗ್​​ ಬಾಸ್ ಸೀಸನ್ 9ಕ್ಕಾಗಿ ಪಡೆದುಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ, ಸಂಜನಾ ಗಲ್ರಾನಿ ಅವರಿಗೆ ಒಂದು ವಾರಕ್ಕೆ 2.75 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ಬಿಗ್​​ ಬಾಸ್ ತೆಲುಗು ಆಯೋಜಕರು ನೀಡುತ್ತಿದ್ದಾರೆ. ಅಂದರೆ ಸಂಜನಾಗೆ ಒಂದು ದಿನಕ್ಕೆ 39,285 ರೂಪಾಯಿಗಳನ್ನು ನೀಡಲಾಗುತ್ತಿದೆ.

Bhagya Lakshmi Serial: ಚಾರಿಟಿಯಲ್ಲಿ ಭಾಗ್ಯಾಗೆ ಬಹುದೊಡ್ಡ ಆಫರ್ ಕೊಟ್ಟ ಆದೀಶ್ವರ್: ಆದ್ರೆ..

ಈ ಮೂಲಕ ತೆಲುಗು ಬಿಗ್​​ ಬಾಸ್ ಮನೆಯಲ್ಲಿರುವ ಒಟ್ಟು 13 ಮಂದಿ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆವ ಎರಡನೇ ಸ್ಪರ್ಧಿ ಎನಿಸಿಕೊಂಡಿದ್ದಾರೆ ಸಂಜನಾ. ಮೊದಲ ವಾರವೇ ಸಂಜನಾ ಸಾಕಷ್ಟು ಸೌಂಡ್ ಮಾಡಿದ್ದು, ಕೊಟ್ಟ ಹಣಕ್ಕೆ ಮೋಸ ಮಾಡಿಲ್ಲ ಅನಿಸುತ್ತದೆ. ಇವರು ಆಡುತ್ತಿರುವ ರೀತಿ ನೋಡಿದರೆ ಕನಿಷ್ಟ ಒಂದು ತಿಂಗಳಾದರೂ ಮನೆಯಲ್ಲಿ ಉಳಿದುಕೊಳ್ಳಬಹುದು. ಇನ್ನು ಫ್ಲೋರಾ ಸೈನಿಗೆ ಬಿಗ್ ​​ಬಾಸ್ ಮನೆಯಲ್ಲಿ ಒಂದು ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆ ಕೊಡಲಾಗುತ್ತಿದೆ ಎಂಬ ಸುದ್ದಿಯಿದೆ.