ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shivarajkumar: 40 ವರ್ಷದ ಸಂಭ್ರಮ: ಕಲರ್ಸ್​​ನ ದಶಕದ ಮಹೋತ್ಸವದಲ್ಲಿ ಶಿವಣ್ಣ-ಗೀತಕ್ಕ

ಕಲರ್ಸ್ ಕನ್ನಡ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರನ್ನ ಸನ್ಮಾನಿಸಿದೆ. ಶಿವರಾಜ್ಕುಮಾರ್ ಅವರು ಗ್ರ್ಯಾಂಡ್ ಆಗಿ ವೇದಿಕೆ ಏರಿದ್ದು, ಕಲರ್ಸ್ ಇದಕ್ಕೆ ‘ಶಿವಣ್ಣ 40’ ಎಂಬ ಲೈನ್ ಮೂಲಕ ವಿಡಿಯೋ ಮಾಡಿದೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

40 ವರ್ಷದ ಸಂಭ್ರಮ: ಕಲರ್ಸ್​​ನ ದಶಕದ ಮಹೋತ್ಸವದಲ್ಲಿ ಶಿವಣ್ಣ-ಗೀತಕ್ಕ

Shivraj Kumar

Profile Vinay Bhat Jun 5, 2025 7:52 AM

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ (Shivraj Kumar) ಹಾಗೂ ಗೀತಾ ಅವರು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಮತ್ತೊಂದೆಡೆ ಶಿವರಾಜ್​ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 40 ವರ್ಷಗಳು ಕಳೆದಿವೆ. ಈ ಖುಷಿಯನ್ನು ಸೆಲೆಬ್ರೇಟ್ ಮಾಡಲು ವೇದಿಕೆ ಸಿದ್ಧವಾಗಿದೆ. ಶಿವರಾಜ್​ಕುಮಾರ್ ಅವರ ಈ ವಿಶೇಷ ಮೈಲಿಗಲ್ಲನ್ನು ಕಲರ್ಸ್ ಕನ್ನಡ ವಾಹಿನಿ ಸಂಭ್ರಮಿಸುತ್ತಿದೆ. ಯಾಕೆಂದರೆ ಅತ್ತ ಕಲರ್ಸ್ ಕನ್ನಡ ಆರಂಭ ಆಗಿ 1 ದಶಕ ಕಳೆದಿದೆ. ಈ ದಶಕದ ಸಂಭ್ರವನ್ನು ವಾಹಿನಿ ಅದ್ದೂರಿಯಾಗಿ ಆಚರಿಸುತ್ತಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮನಿಸಿದ್ದು ಶಿವರಾಜ್​ಕುಮಾರ್ ಕೂಡ ವೇದಿಕೆ ಏರಿದ್ದಾರೆ.

ಶಿವರಾಜ್​ಕುಮಾರ್ ನಟಿಸಿದ ಮೊದಲ ಚಿತ್ರ ಆನಂದ್. ಈ ಸಿನಿಮಾ 1986ರ ಜೂನ್ 19ರಂದು ರಿಲೀಸ್ ಆಯಿತು. ಸಿಂಗೀತಮ್ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶನ ಮಾಡಿದರು. ಈ ಸಿನಿಮಾಗೆ ಸುಧಾ ರಾಣಿ ನಾಯಕಿ. ಈ ಚಿತ್ರ ಸೂಪರ್ ಹಿಟ್ ಆಯಿತು. ಈ ಸಿನಿಮ ಥಿಯೇಟರ್​ನಲ್ಲಿ ಬರೋಬ್ಬರಿ 38 ವಾರ ಪ್ರದರ್ಶನ ಕಂಡಿತ್ತು. ಈ ಮೂಲಕ ಸಿನಿಮಾರಂಗಕ್ಕೆ ಬಂದು ಶಿವಣ್ಣ 40 ವರ್ಷ ಆಗಿದೆ.

ಈ ಒಂದು ಖುಷಿಯಲ್ಲಿ ಕಲರ್ಸ್ ಕನ್ನಡ ಗೀತಾ ಶಿವರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅವರನ್ನ ಸನ್ಮಾನಿಸಿದೆ. ಶಿವರಾಜ್​ಕುಮಾರ್ ಅವರು ಗ್ರ್ಯಾಂಡ್ ಆಗಿ ವೇದಿಕೆ ಏರಿದ್ದು, ಕಲರ್ಸ್ ಇದಕ್ಕೆ ‘ಶಿವಣ್ಣ 40’ ಎಂಬ ಲೈನ್ ಮೂಲಕ ವಿಡಿಯೋ ಮಾಡಿದೆ. ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಶನಿವಾರ ಹಾಗೂ ಭಾನುವಾರ ಸಂಜೆ 7 ಗಂಟೆಗೆ ಕಾರ್ಯಕ್ರಮ ಪ್ರಸಾರ ಆಗಲಿದೆ.

ವೇದಿಕೆ ಮೇಲೆ ಶಿವರಾಜ್‌ಕುಮಾರ್‌ ಅವರು ಪತ್ನಿ ಗೀತಾ ಅವರನ್ನು ಗೋಳೊಯ್ದುಕೊಂಡಿದ್ದಾರೆ. ರಣರಂಗ ಸಿನಿಮಾ ಗೀತಾಗೆ ತುಂಬಾ ಇಷ್ಟ ಎಂದು ಶಿವಣ್ಣ ತರಲೆ ಮಾಡಿದ್ದಾರೆ. ಇದಕ್ಕೆ, ನನಗೆ ಆ ಸಿನಿಮಾ ಇಷ್ಟ ಇಲ್ಲ ಎಂದು ಗೀತಾ ಶಿವರಾಜ್‌ಕುಮಾರ್‌ ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ, 40 ವರ್ಷ, ಇನ್ನೊಂದು 60 ವರ್ಷ ಹೀಗೆ ಇರ್ತೀವಿ ಒಟ್ಟಾರೆ 100 ವರ್ಷ ಆಗುತ್ತದೆ ಎಂದು ಹ್ಯಾಟ್ರಿಕ್‌ ಹೀರೋ ಹೇಳಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ನಟಿ ತಾರಾ, ಶೃತಿ, ಅನು ಪ್ರಭಾಕರ್‌, ಸಲಗ ವಿಜಯ್‌ ಸೇರಿದಂತೆ ಹಲವು ತಾರೆಯರು ಭಾಗಿಯಾಗಿದ್ದರು.

Rakesh Poojary: ರಾಕೇಶ್ ಪೂಜಾರಿ ಮನೆಗೆ ದಿಢೀರ್ ಭೇಟಿಕೊಟ್ಟ ರಿಷಭ್ ಶೆಟ್ಟಿ: ತಾಯಿ, ಸಹೋದರಿಗೆ ಸಾಂತ್ವನ