ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Smriti Irani: ಸ್ಮೃತಿ ಇರಾನಿ ಧಾರಾವಾಹಿಗೆ ಬಿಲ್ ಗೇಟ್ಸ್ ಎಂಟ್ರಿ! ಅವರ ಪಾತ್ರವೇನು?

Bill Gates Cameo In Serial: ಕ್ಯುಂಕಿ ಸಾಸ್‌ ಭೀ ಕಭಿ ಬಹು ಥಿ 2 ಧಾರಾವಾಹಿ ಪ್ರಸಾರ ಕಂಡಿದೆ. ಏಕ್ತಾ ಕಪೂರ್ ನಿರ್ಮಾ ಣದ ಈ ಧಾರಾವಾಹಿಯಲ್ಲಿ ದಿನಕ್ಕೊಂದು ರೋಚಕಭರಿತ ಕುತೂಹಲದ ತಿರುಹುಗಳು ಬಹುಸಂಖ್ಯಾತ ವೀಕ್ಷಕರ ಮನಸೆಳೆದಿತ್ತು. ಸೀಸನ್ ಒಂದರಲ್ಲಿ ನಟಿಸಿದ್ದ ಕೆಲವು ಕಲಾವಿದರು, ಸಾಕ್ಷಿ ತನ್ವಾರ್, ಕಿರಣ್ ಕರ್ಮಾಕರ್ ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಟಿಆರ್ ಪಿ ಉತ್ತಮ ರೇಟಿಂಗ್ ಪಡೆದಿದೆ‌‌‌. ಇದೀಗ ವಿಶ್ವದ ವಿಶ್ವದ 13ನೇ ಶ್ರೀಮಂತ ಬಿಲ್ ಗೇಟ್ಸ್ ಅವರು ಕೂಡ ಈ ಧಾರಾವಾಹಿಯಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು ವೀಕ್ಷಕರ ಗಮನ ಸೆಳೆಯುವಂತೆ ಮಾಡಿದೆ.

ಸ್ಮೃತಿ ಇರಾನಿ ಧಾರಾವಾಹಿಗೆ ವಿಶ್ವದ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಎಂಟ್ರಿ!

-

Profile Pushpa Kumari Oct 23, 2025 11:41 AM

ನವದೆಹಲಿ: ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ್ದ ಅನೇಕ ಕಲಾವಿದರು ಬಳಿಕ ರಾಜಕೀಯ ರಂಗಕ್ಕೆ ತೆರಳಿ ಫೇಮಸ್ ಆಗಿದ್ದು ಇದೆ. ಅಂತವರಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಕೂಡ ಒಬ್ಬರಾಗಿದ್ದಾರೆ. ಇವರು ನಟಿಸುತ್ತಿರುವ 'ಕ್ಯುಂಕಿ ಸಾಸ್‌ ಭೀ ಕಭಿ ಬಹು ಥಿ 2' (Kyunki Saas Bhi Kabhi Bahu Thi) ಧಾರವಾಹಿ ಭಾರತದಲ್ಲೇ ಅತ್ಯಂತ ದುಬಾರಿ ವೆಚ್ಚದ ಧಾರಾವಾಹಿ ಎಂದು ಖ್ಯಾತಿ ಪಡೆದಿದೆ. ಮೊದಲ ಸೀಸನ್ ನಲ್ಲಿ ಸ್ಮೃತಿ ಇರಾನಿ ಅವರು ನಟಿಸಿ ಭಾರತೀಯ ಟೆಲಿವಿಷನ್ ಕ್ಷೇತ್ರದಲ್ಲಿ ಟಿಆರ್ ಪಿ ಮಟ್ಟವು ಹೊಸ ದಾಖಲೆ ಮಾಡಿತ್ತು. ಬಳಿಕ ಅವರು ರಾಜಕೀಯ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಅನಂತರ ಪುನಃ ಅವರನ್ನು ಇದೇ ಧಾರಾವಾಹಿಯ ಸೀಸನ್ 2 ಗೆ ನಟಿ ಸಲು ಕೇಳಲಾಗಿದ್ದು ಸ್ಮೃತಿ ಇರಾನಿ ಅವರು ಮತ್ತೆ ಕಿರುತೆರೆಗೆ ಕಂಬ್ಯಾಕ್ ಆಗಿದ್ದರು‌‌. ಅಂತೆಯೇ ಇದೇ ಧಾರವಾಹಿಯಲ್ಲಿ ಇದೀಗ ವಿಶ್ವದ ಶ್ರೀಮಂತ ಉದ್ಯಮಿ ಬಿಲ್‌ ಗೇಟ್ಸ್ (Bill Gates) ಅವರು ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು ಈ ಬಗ್ಗೆ ಸ್ವತಃ ಸ್ಮೃತಿ ಇರಾನಿ ಅವರೇ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

2025ರ ಜುಲೈ 29 ರಿಂದ ಕ್ಯುಂಕಿ ಸಾಸ್‌ ಭೀ ಕಭಿ ಬಹು ಥಿ 2 ಧಾರಾವಾಹಿ ಪ್ರಸಾರ ಕಂಡಿದೆ. ಏಕ್ತಾ ಕಪೂರ್ ನಿರ್ಮಾಣದ ಈ ಧಾರಾವಾಹಿಯಲ್ಲಿ ದಿನಕ್ಕೊಂದು ರೋಚಕಭರಿತ ಕುತೂಹಲದ ತಿರುಹುಗಳು ಬಹಳಷ್ಟು ವೀಕ್ಷಕರ ಮನಸೆಳೆದಿತ್ತು. ಸೀಸನ್ ಒಂದರಲ್ಲಿ ನಟಿಸಿದ್ದ ಕೆಲವು ಕಲಾವಿದರು, ಸಾಕ್ಷಿ ತನ್ವಾರ್, ಕಿರಣ್ ಕರ್ಮಾಕರ್ ಇತರರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಟಿಆರ್ ಪಿ ಉತ್ತಮ ರೇಟಿಂಗ್ ಪಡೆದಿದೆ‌‌‌. ಇದೀಗ ವಿಶ್ವದ ವಿಶ್ವದ 13ನೇ ಶ್ರೀಮಂತ ಬಿಲ್ ಗೇಟ್ಸ್ ಅವರು ಕೂಡ ಈ ಧಾರವಾಹಿಯಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು ವೀಕ್ಷಕರ ಗಮನ ಸೆಳೆಯುವಂತೆ ಮಾಡಿದೆ.

ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಉದ್ಯಮ ಕೆಲಸ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಹಾಗಿದ್ದರೂ ಧಾರವಾಹಿಯಲ್ಲಿ ಅತಿಥಿ ಪಾತ್ರ ನಟಿಸಲು ಸಮ್ಮತಿ ಕೊಟ್ಟಿದ್ದಾರೆ. ಹಾಗಾದರೆ ಅವರು ಯಾವ ಪಾತ್ರ ನಿರ್ವಹಿಸಬಹುದು ಎಂಬ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡುವಂತಿದೆ. ಈ ಧಾರವಾಹಿಯಲ್ಲಿ ಅವರು ಗರ್ಭಿಣಿ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸನ್ನಿವೇಶ ಒಂದರಲ್ಲಿ ಸ್ಮೃತಿ ಇರಾನಿಯೊಂದಿಗೆ ಬಿಲ್ ಗೇಟ್ಸ್ ಕೂಡ ನಟಿಸುತ್ತಾರೆ ಎನ್ನಲಾಗಿದೆ‌. ಅವರೊಂದಿಗೆ ನಟಿಸಿದ್ದ ಅನುಭವದ ಕುರಿತು ನಟಿ ಸ್ಮೃತಿ ಇರಾನಿ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ:Udaala Movie: ಯೋಗರಾಜ್‌ ಭಟ್‌ ನಿರ್ಮಾಣದ ʼಉಡಾಳʼ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ಈ ಬಗ್ಗೆ ಮಾತನಾಡಿದ್ದ ಅವರು, ಬಿಲ್ ಗೇಟ್ಸ್‌ರಂತಹ ಜಾಗತಿಕ ಧ್ವನಿ ನಮಗೆ ಬೆಂಬಲ ನೀಡುತ್ತಿ ರುವುದು ಬಹಳ ಸಂತೋಷ ತಂದಿದೆ. ನಾನು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಇದ್ದಾಗಿ ನಿಂದಲೂ ಅವರೊಂದಿಗೆ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೆ. ಅವರ ಪ್ರತಿಷ್ಠಾನ ದೊಂದಿಗೆ ವರ್ಷಗಳಿಂದ ಕೆಲಸ ಮಾಡುವ ಅದೃಷ್ಟ ನನಗೆ ಸಿಕ್ಕಿದೆ ಎಂದರು.

ಈ ಧಾರಾವಾಹಿಯಲ್ಲಿ ಈ ಹಿಂದೆ ಬಾಡಿ ಶೇಮಿಂಗ್, ಕೆಲಸದ ಸ್ಥಳದಲ್ಲಿ ಕಿರುಕುಳ ಮತ್ತು ವರದಕ್ಷಿಣೆ ಇತರೆ ಸಮಸ್ಯೆಗಳ ಬಗ್ಗೆ ಕಥೆಯನ್ನು ಪ್ರಸಾರ ಮಾಡಿ ವೀಕ್ಷಕರಿಗೆ ಅರಿವು ಮೂಡಿಸಿದ್ದೆವು ಈಗ ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಎಪಿಸೋಡ್ ಮಾಡಿದ್ದೇವೆ. ಅವರ ಫೌಂಡೇಶನ್ ಇತರೆ ಬಗ್ಗೆ ವಿಡಿಯೋ ಕಾಲ್ ಸಂವಾದ ಮಾಡಿದ್ದು ಅದನ್ನೇ ಪ್ರಸಾರ ಮಾಡುತ್ತೇವೆ. ಈ ಸಂಚಿಕೆ ವೀಕ್ಷಕರ ಮನ ತಲುಪಲಿದೆ ಎಂದು ಅವರು ಹೇಳಿದ್ದಾರೆ.

ಇರಾನಿಯವರ ಈ ಧಾರಾವಾಹಿಯಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ನಟಿಸಿದ್ದು ಗೇಟ್ಸ್ ಅವರೊಂದಿಗೆ ವೀಡಿಯೊ ಕರೆಯ ಮೂಲಕ ಮಾತನಾಡಿದ್ದಾರೆ. ಈ ಎಪಿಸೋಡ್ ನಲ್ಲಿ ಗೇಟ್ಸ್ ಅವರು ಪ್ರಮುಖ ಸಲಹೆಯನ್ನು ನೀಡಲಿದ್ದಾರೆ. ಬಿಲ್ ಗೇಟ್ಸ್​​ಗೆ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ಇದೆ ಮೊದಲಲ್ಲ. ಈ ಹಿಂದೆ ಅವರು 7 ಡಾಕ್ಯುಮೆಂಟರಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ಟಿವಿ ಶೋ ‘ಬಿಗ್ ಬ್ಯಾಂಗ್ ಥಿಯರಿ’ಯ ಒಂದು ಎಪಿಸೋಡ್​​ನಲ್ಲಿ ಕೂಟ ಬಿಲ್ ಗೇಟ್ಸ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಧಾರವಾಹಿ ಕೂಡ ಈಗ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆಯುವಂತಾಗಿದೆ.