BBK 12: ನನ್ನ ಮಗನಿಗೆ 2 ಲಕ್ಷ ಹುಡುಗಿಯರು ಫ್ಯಾನ್ಸ್ ಇದ್ದಾರೆ: ಡಾಗ್ ಸತೀಶ್
ಸತೀಶ್ ಅವರು ಹೊರ ಪ್ರಪಂಚದಲ್ಲಿ ಮಗನ ಜೊತೆ ಮಾತ್ರ ಇದ್ದಾರೆ. ಅವರನ್ನು ದೊಡ್ಡ ಹೀರೋ ಮಾಡಬೇಕು ಎಂಬುದು ಅವರ ಕನಸು. ಇದೀಗ ಸತೀಶ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮಗನ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಮಗನೇ ನನಗೆ ಜೀವ, ತಾಯಿ ಇಲ್ಲದಿದ್ರೂ ಅವನನ್ನ ಅಷ್ಟು ಚೆನ್ನಾಗಿ ಸಾಕಿದ್ದೇನೆ. ಅವನನ್ನು ಇಂಡಿಯಾಕ್ಕೆ ನಂಬರ್ 2 ಹೀರೋ ಮಾಡ್ತೇನೆ ಎಂದಿದ್ದಾರೆ.

Dog Satish and his Son -

ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ (Bigg Boss Kannada 12) ಡಾಗ್ ಸತೀಶ್ ವಿಶೇಷ ಸ್ಪರ್ಧಿಯಾಗಿದ್ದರು. ಇವರ ಪರಿಚಯ ಕರ್ನಾಟಕ ಜನತೆಗೆ ಅಷ್ಟೊಂದು ಇರಲಿಲ್ಲ. ಹೀಗಾಗಿ ದೊಡ್ಮನೆಯಲ್ಲಿ ಹೆಚ್ಚು ದಿನ ಕೂಡ ಇರಲು ಸಾಧ್ಯವಾಗಲಿಲ್ಲ. ಮೂರನೇ ವಾರದ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಇವರು ಮನೆಯಿಂದ ಆಚೆ ಬಂದರು. ಸತೀಶ್ ಓರ್ವ ಡಾಗ್ ಬ್ರೀಡರ್ ಆಗಿದ್ದಾರೆ. ಬೀದಿ ನಾಯಿಗಳು, ಕ್ರಾಸ್ ಬ್ರೀಡ್ ಎಂದು ವಿವಿಧ ರೀತಿಯ ನಾಯಿಯನ್ನು ಖರೀದಿ ಮಾಡುತ್ತಾರೆ. ಒಂದು ನಾಯಿ ಖರೀದಿ ಮಾಡೋದು, ಆಮೇಲೆ ಅದನ್ನು ಮಾರೋದು, ಅದರಿಂದ ಇನ್ನೊಂದು ನಾಯಿ ತಗೊಳೋದು.. ಹೀಗೆ ಡುದ್ದು ಮಾಡುತ್ತಾರೆ.
ಸತೀಶ್ ಅವರು ಕ್ಯಾಡಬೊಮ್ ಕೆನ್ನೆಲ್ಸ್ ಎಂಬ ಕೆನ್ನೆಲ್ ಕೂಡ ನಡೆಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಸತೀಶ್, ತಮ್ಮನ್ನ ವಿಶ್ವದ ನಂ.1 ಸೆಲೆಬ್ರಿಟಿ ಡ್ರಾಗ್ ಬ್ರೀಡರ್, ಗ್ಲೋಬಲ್ ಸೂಪರ್‌ಸ್ಟಾರ್ ಎಂದು ಕರೆದುಕೊಳ್ಳುತ್ತಾರೆ. ಸತೀಶ್ ಅವರ ಬಳಿ ನೂರು ಕೋಟಿ ರೂಪಾಯಿ ನಾಯಿ ಇದೆಯಂತೆ. ಕತ್ತೆಯಷ್ಟು ಸೈಜ್ ಇದೆ ಎಂದು ಆ ನಾಯಿಗೆ 100 ಕೋಟಿ ರೂಪಾಯಿ ಬೆಲೆ ಕಟ್ಟಲಾಗಿದೆಯಂತೆ. ಇವರು ಬಿಗ್ ಬಾಸ್‌ಗಾಗಿ 25 ಲಕ್ಷ ರೂಪಾಯಿಗಳಿಗೆ ಬಟ್ಟೆಗಳನ್ನ ಖರೀದಿ ಮಾಡಿದ್ದರು, ಆದರೆ ಮೂರೇ ವಾರಕ್ಕೆ ಮನೆ ತೊರೆಯಬೇಕಾಯಿತು.
ಡಾಗ್ ಸತೀಶ್ ಎಲಿಮಿನೇಟ್ ಆಗಲು ಮುಖ್ಯ ಕಾರಣ ಅವರಿಗೆ ದೊಡ್ಡ ಅಭಿಮಾನಿ ಬಳಗವಿಲ್ಲ. ಅವರು ಮನೋರಂಜನೆ ಕ್ಷೇತ್ರದಿಂದ ಬಂದವರಲ್ಲ. ಅಷ್ಟೇ ಅಲ್ಲದೆ ಸತೀಶ್ ಅವರು ಬಿಗ್ ಬಾಸ್ ಕೊಟ್ಟಿದ್ದ ಸೀಕ್ರೆಟ್ ಟಾಸ್ಕ್ ಅನ್ನು ಅಚ್ಚುಕಟ್ಟಾಗಿ ಮಾಡಿದ್ದು ಬಿಟ್ಟರೆ, ಉಳಿದ ಟಾಸ್ಕ್‌ಗಳಲ್ಲಿ ಹಿಂದೆ ಬಿದ್ದಿದ್ದರು. ಎಪಿಸೋಡ್‌ಗಳಲ್ಲೂ ಡಾಗ್ ಸತೀಶ್ ಹೆಚ್ಚು ಫೋಕಸ್ ಆಗುತ್ತಿರಲಿಲ್ಲ. ಹೀಗಾಗಿ ಇವರು ಬೇಗನೆ ಎಲಿಮಿನೇಟ್ ಆದರು.
ಸತೀಶ್ ಅವರು ಹೊರ ಪ್ರಪಂಚದಲ್ಲಿ ಮಗನ ಜೊತೆ ಮಾತ್ರ ಇದ್ದಾರೆ. ಅವರನ್ನು ದೊಡ್ಡ ಹೀರೋ ಮಾಡಬೇಕು ಎಂಬುದು ಅವರ ಕನಸು. ಇದೀಗ ಸತೀಶ್ ಅವರು ವಿಶ್ವವಾಣಿ ಜೊತೆಗಿನ ಸಂದರ್ಶನದಲ್ಲಿ ತಮ್ಮ ಮಗನ ವಿಚಾರವಾಗಿ ಮಾತನಾಡಿದ್ದಾರೆ. ನನ್ನ ಮಗನೇ ನನಗೆ ಜೀವ, ತಾಯಿ ಇಲ್ಲದಿದ್ರೂ ಅವನನ್ನ ಅಷ್ಟು ಚೆನ್ನಾಗಿ ಸಾಕಿದ್ದೇನೆ. ಅವನನ್ನು ಇಂಡಿಯಾಕ್ಕೆ ನಂಬರ್ 2 ಹೀರೋ ಮಾಡ್ತೇನೆ. ನಂಬರ್ ಒನ್ ಮಾಡಿದ್ರೆ ದುರಹಂಕಾರ ಬರುತ್ತೆ ಹಾಗಾಗಿ ನಂಬರ್ 2 ಹೀರೋ ಮಾಡ್ತೇನೆ. ಅವನಿಗೆ ಮಿಸ್ಟರ್ ಹ್ಯಾಡ್ಸಮ್ ಅಂತ ಅವಾರ್ಡ್ ಎಲ್ಲ ಬಂದಿದೆ ಎಂದು ಹೇಳಿದ್ದಾರೆ.
ನನ್ನ ಮಗನನ್ನು ಕೊರಿಯನ್ ಸಿಂಗರ್ ಥರಾ ಇದ್ದಾನೆ ಅಂತ ಅನೇಕರು ಹೇಳಿದ್ದಾರೆ. ಅವನಿಗೆ ಈಗ 2 ಲಕ್ಷ ಹುಡುಗಿಯರು ಫ್ಯಾನ್ಸ್ ಇದ್ದಾರೆ. ಯಾವುದಾದ್ರು ಹುಡುಗಿಯರ ಕಾಲೇಜ್ಗೆ ಫ್ಯಾಷನ್ ಶೋ ಮಾಡೋಕೆ ಹೋದ್ರೆ ಅಲ್ಲಿರುವ ಹುಡುಗಿಯರೆಲ್ಲ ಇವನ ಹೆಸರನ್ನೇ ಕೂಗುತ್ತಾರೆ. ಅವನಿಗೆ ಒಂದೇ ಒಂದು ಕೆಟ್ಟ ಬುದ್ದಿ ಇಲ್ಲ.. ಯಾರಿಗೂ ಬೈದವನಲ್ಲ, ಹಲ್ಕಾ ಮಾತು ಆಡಲ್ಲ.. ಡ್ರಿಕ್ಸ್ ಮಾಡಲ್ಲ, ಸಿಗರೇಟ್ ಸೇದಲ್ಲ. ಅವನಿಗೆ ಇಷ್ಟರವರೆಗೆ ಒಂದೇ ಒಂದು ಮಾತು ನಾನು ಬೈದಿಲ್ಲ.. ರಾತ್ರಿ ಮಲಗೋವಾಗ್ಲೂ ಅವನು ನನ್ನ ಜೊತೆನೇ ಮಲಗೋದು ಎಂದು ಹೇಳಿದ್ದಾರೆ.
BBK 12: ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ