Shine Shetty: ಶೈನ್ ಶೆಟ್ಟಿ ದಿಢೀರ್ ಗಲ್ಲಿ ಕಿಚನ್ ಮಾರಿದ್ದೇಕೆ?: ಅವರೇ ಹೇಳಿದ್ದಾರೆ ನೋಡಿ
ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಈ ಫುಡ್ ಟ್ರಕ್ ಆರಂಭಿಸಿದ್ದರು. ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಅವರ ತಾಯಿ ಇದನ್ನು ನಡೆಸಿಕೊಂಡಿದ್ದರು. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ನಟ ಶೈನ್ ಶೆಟ್ಟಿ ಗುಡ್‌ಬೈ ಹೇಳಿದರು. ಈ ಬಗ್ಗೆ ಇತ್ತೀಚೆಗೆ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೈನ್ ಗಲ್ಲಿ ಕಿಚನ್ ಸೇಲ್ ಮಾಡಲು ನೈಜ್ಯ ಕಾರಣ ತಿಳಿಸಿದ್ದಾರೆ.

Shine Shetty Galli Kitchen

ಬಿಗ್ ಬಾಸ್ ಕನ್ನಡ ಸೀಸನ್ 7ರ (Bigg Boss Kannada 7) ಸ್ಪರ್ಧಿ ಶೈನ್ ಶೆಟ್ಟಿ ನಟನಾಗಿ ಮಾತ್ರವಲ್ಲದೆ ಹೋಟೆಲ್ ಉದ್ಯಮ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡು ಇದರಲ್ಲಿ ಯಶಸ್ಸು ಕಂಡವರು. ಚಿಕ್ಕದಾಗಿ ಶುರು ಮಾಡಿದ್ದ ಗಲ್ಲಿ ಕಿಚನ್ ನೋಡ ನೋಡುತ್ತಲೇ ದೊಡ್ಡದಾಗಿ ಬೆಳೆದಿತ್ತು. ಸಿನಿಮಾ ನಾಯಕನಾಗಬೇಕೆಂದು ಸೀರಿಯಲ್ ಬಿಟ್ಟು ಹೊರ ಬಂದವನಿಗೆ ಸಿನಿಮಾ ನಾಯಕನಾಗುವ ಅವಕಾಶ ಸಿಗದೇ ಇದ್ದಾಗ ಕೈ ಹಿಡಿದದ್ದು ಗಲ್ಲಿ ಕಿಚನ್. ಗಲ್ಲಿ ಕಿಚನ್ ಒಂದು ಫುಡ್ ಟ್ರಕ್ ಆಗಿದ್ದು, ಅವಕಾಶಗಳು ಸಿಗದೆ ಕಂಗಾಲಾಗಿದ್ದ ಶೈನ್ ಕೈ ಹಿಡಿಯಿತು. ಆದರೆ, ಇತ್ತೀಚೆಗೆ ದಿಢೀರನೆ ಗಲ್ಲಿ ಕಿಚನ್ ಅನ್ನು ಶೈನ್ ಮಾರಿಬಿಟ್ಟರು.
ಆರಂಭದಲ್ಲಿ ಶೈನ್ ಶೆಟ್ಟಿ ಬೆಂಗಳೂರಿನ ಬನಶಂಕರಿಯಲ್ಲಿ ಈ ಫುಡ್ ಟ್ರಕ್ ಆರಂಭಿಸಿದ್ದರು. ಬಿಗ್ ಬಾಸ್ ಗೆ ಹೋಗಿದ್ದ ಸಮಯದಲ್ಲಿ ಅವರ ತಾಯಿ ಇದನ್ನು ನಡೆಸಿಕೊಂಡಿದ್ದರು. ಗಲ್ಲಿ ಕಿಚನ್ ಎರಡು ಬ್ರಾಂಚ್‌ಗಳು ಬೆಂಗಳೂರಿನಲ್ಲಿತ್ತು. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್‌ಗೆ ನಟ ಶೈನ್ ಶೆಟ್ಟಿ ಗುಡ್‌ಬೈ ಹೇಳಿದರು.
ಈ ಬಗ್ಗೆ ಇತ್ತೀಚೆಗೆ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೈನ್ ಗಲ್ಲಿ ಕಿಚನ್ ಸೇಲ್ ಮಾಡಲು ನೈಜ್ಯ ಕಾರಣ ತಿಳಿಸಿದ್ದಾರೆ. ‘‘ನಾನು ಗಲ್ಲಿ ಕಿಚನ್ ಬಿಡುವ ನಿರ್ಧಾರವನ್ನು ಸರಿಯಾದ ಸಮಯಕ್ಕೆ ತಗೊಂಡೆ. ಆರು ವರ್ಷಗಳ ಕಾಲ ಹೋಟೆಲ್ ನಡೆಸಿದೆ. ಗಲ್ಲಿ ಕಿಚನ್ ಆದ್ಮೇಲೆ ನನಗೆ ಬಿಗ್ ಬಾಸ್ ಅವಕಾಶ ಸಿಗ್ತು, ಸಿನಿಮಾಗಳು ಬಂತು. ಏನೂ ಇಲ್ಲದಿದ್ದಾಗ ನಮ್ಮ ಜೀವನಕ್ಕೆ ಗಲ್ಲಿ ಕಿಚನ್ ನೆರವಾಗಿತ್ತು. ಒಂದು ಹಂತದ ನಂತರ ಇದು ಇನ್ನೊಬ್ಬರ ಕೈ ಹಿಡಿದರೆ ಅವರ ಜೀವನವನ್ನು ನಡೆಕೊಂಡು ಹೋಗುತ್ತೆ ಅನ್ನುವಂತ ಒಂದು ಒಳ್ಳೆ ಉದ್ದೇಶದಿಂದಲೇ ನಾನು ಅದನ್ನು ಬೇರೆಯವರಿಗೆ ಕೊಟ್ಟೆ. ನಮ್ಮ ಸಿನಿಮಾಕ್ಕೆ ಬೇರೆಯವರು ಹಣ ಹಾಕಿರುತ್ತಾರೆ, ಸಿನಿಮಾಕ್ಕೆ ಸಂಪೂರ್ಣ ಗಮನ ಕೊಡಲೇಬೇಕು. ಇದು ತುಂಬ ಮುಖ್ಯ ಆಗಿರುವುದರಿಂದ ಗಲ್ಲಿ ಕಿಚನ್ ಮಾರಿದೆ’’ ಎಂದು ಶೈನ್ ಶೆಟ್ಟಿ ಹೇಳಿದ್ದಾರೆ.
Mike Tyson: ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ನೀವು ಯಾರೂ ಊಹಿಸಿರದ ಈ ದಿಗ್ಗಜ ವ್ಯಕ್ತಿ
‘‘ಹೀರೋ ಆಗಿ ನನ್ನನ್ನು ನಾನು ನೋಡಬೇಕು ಅನ್ನೋದಕ್ಕಿಂತನೂ ನನಗೆ ಒಬ್ಬ ನಟನಾಗಿ ನನ್ನನ್ನು ನೋಡಬೇಕು, ಪ್ರಶಂಸೆ ಸಿಗಬೇಕು, ಅವಕಾಶಗಳು ಬರಬೇಕು ಅನ್ನೋದು ಜಾಸ್ತಿ ಇತ್ತು. ನಾನು ಮೊಬೈಲ್ ಕ್ಯಾಂಟೀನ್ ಬಂದ್ ಮಾಡಿದೆ ಅಂತ ಜನರು ನೆಗೆಟಿವ್ ಆಗಿ ಮಾತಾಡ್ತಾರೆ, ಶೈನ್ ಶೆಟ್ಟಿಗೆ ದುರಹಂಕಾರ ಬಂತು ಅಂತ. ನಾನು ಕಾಮೆಂಟ್ಸ್‌ಗಳನ್ನು ಓದೋಕೆ ಹೋಗೋದಿಲ್ಲ. ನನ್ನ ನಿರ್ಧಾರಗಳು ಯಾಕೆ ತಗೊಂಡೆ ಅನ್ನುವಂತ ಕ್ಲಾರಿಟಿ ನನಗೆ ಇರಬೇಕಾದ್ರೆ, ಇನ್ನೊಬ್ಬರ ಅಭಿಪ್ರಾಯವು ಮ್ಯಾಟರ್ ಆಗಬಾರದು’’ ಎಂಬುದು ಶೈನ್ ಮಾತು.