Shah Rukh Khan: ಶ್ರೀಮಂತ ನಟರ ಪಟ್ಟಿಯಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್‌ಗೆ ಅಗ್ರಸ್ಥಾನ!
Shah Rukh Khan: ಅಕ್ಟೋಬರ್ 1ರಂದು ಹರೂನ್ ಇಂಡಿಯಾ ರಿಚ್ ಲಿಸ್ಟ್ 2025ರಲ್ಲಿ ಭಾರತದ ಶತ ಕೋಟಿ ಆಸ್ತಿ ಹೊಂದಿರುವವರ ಹೆಸರುಗಳ ಲೀಸ್ಟ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬಾಲಿವುಡ್ ಖ್ಯಾತನಟರಾದ ಶಾರುಖ್ ಖಾನ್ ಅವರ ಹೆಸರು ಕೂಡ ಇದೆ. 1.4 ಬಿಲಿಯನ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 12,490 ಕೋಟಿ ರೂಪಾಯಿ ನಿವ್ವಳ ಆದಾಯವನ್ನು ಹೊಂದುವ ಮೂಲಕ ವಿಶ್ಚದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

Shah Rukh Khan -

ನವದೆಹಲಿ: ಬಾಲಿವುಡ್ ಸಿನಿಮಾ ರಂಗದಲ್ಲಿ ಕಿಂಗ್ ಖಾನ್ ಎಂದೇ ಖ್ಯಾತರಾದ ನಟ ಶಾರುಖ್ ಖಾನ್ (Shah Rukh Khan) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. 1980ರ ದಶಕದಲ್ಲಿ 'ಫೌಜಿ' ಎಂಬ ದೂರದರ್ಶನ ಧಾರವಾಹಿ ಮೂಲಕ ನಟನೆಯನ್ನು ಪ್ರಾರಂಭಿಸಿದ ಇವರು ಬಳಿಕ1992 ರಲ್ಲಿ ದೀವಾನಾ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಾಜಿಗರ್, ಡರ್, ಕಭಿ ಖುಷಿ ಕಭಿ ಗಮ್, ಕುಚ್ ಕುಚ್ ಹೋತಾ ಹೈ ಸೇರಿದಂತೆ ಅನೇಕ ಹಿಟ್ ಸಿನಿಮಾದಲ್ಲಿ ತಮ್ಮ ಅದ್ಭುತ ಅಭಿನಯದಿಂದ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ನಟರಾಗಿದ್ದಾರೆ. ಇವರ ಅಭಿನಯಕ್ಕೆ ಫಿಲ್ಮ್‌ಫೇರ್ , ಇತರ ಪ್ರಶಸ್ತಿಗಳ ಜೊತೆಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ. ಇಷ್ಟೆಲ್ಲ ಹೆಗ್ಗಳಿಕೆಯ ಜೊತೆಗೆ 1.4 ಬಿಲಿಯನ್ ಡಾಲರ್ ನಿವ್ವಳ ಆದಾಯ ಹೊಂದುವ ಮೂಲಕ ವಿಶ್ಚದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರೆಂಬ ಖ್ಯಾತಿ ಪಡೆದಿದ್ದಾರೆ.
ಅಕ್ಟೋಬರ್ 1ರಂದು ಹರೂನ್ ಇಂಡಿಯಾ ರಿಚ್ ಲಿಸ್ಟ್ 2025ರಲ್ಲಿ ಭಾರತದ ಶತಕೋಟಿ ಆಸ್ತಿ ಹೊಂದಿರುವವರ ಹೆಸರುಗಳ ಲಿಸ್ಟ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಬಾಲಿವುಡ್ ಖ್ಯಾತ ನಟರಾದ ಶಾರುಖ್ ಖಾನ್ ಅವರ ಹೆಸರು ಕೂಡ ಇದೆ. 1.4 ಬಿಲಿಯನ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು 12,490 ಕೋಟಿ ರೂಪಾಯಿ ನಿವ್ವಳ ಆದಾಯವನ್ನು ಹೊಂದುವ ಮೂಲಕ ವಿಶ್ಚದ ಅತ್ಯಂತ ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈ ಮೂಲಕ ಬಾಲಿವುಡ್ ಸೂಪರ್ ಸ್ಟಾರ್ ಚಲನಚಿತ್ರೋದ್ಯಮದಲ್ಲಿ 33ವರ್ಷದ ತನಕ ಶ್ರೀಮಂತ ನಟ ಎಂಬ ಪಟ್ಟ ಯಾರಿಗೂ ಸಿಕ್ಕಿರಲಿಲ್ಲ. ಇದೀಗ ನಟ ಶಾರುಖ್ ಖಾನ್ ಅವರು ಶ್ರೀಮಂತ ನಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ನಟ ಶಾರುಖ್ ಖಾನ್ ಅವರು ಚಲನಚಿತ್ರಗಳಲ್ಲಿ ನಟಸುವ ಜೊತೆಗೆ ನಿರ್ಮಾಣ ಸಂಸ್ಥೆ ಹಾಗೂ ಜಾಹೀರಾತಿನಿಂದಲೂ ಆದಾಯಗಳನ್ನು ಗಳಿಸುತ್ತಿದ್ದಾರೆ. ಅವರು ರೆಡ್ ಚಿಲ್ಲೀಸ್ ಎಂಬ ಚಿತ್ರ ತಯಾರಿಕಾ ಸಂಸ್ಥೆ ಹೊಂದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಲೀಕರು ಕೂಡ ಆಗಿದ್ದು ಅದು ಕೂಡ ಅವರ ಆದಾಯ ಮೂಲವೇ ಆಗಿದೆ. ಈ ಮೂಲಕ ಅವರ ಒಟ್ಟಾರೆ ಆಸ್ತಿ ಮೌಲ್ಯ 12,490 ಕೋಟಿ ರೂ. ಎಂದು ಹರೂನ್ ಇಂಡಿಯಾ ರಿಚ್ ಲಿಸ್ಟ್ 2025ರಲ್ಲಿ ಉಲ್ಲೇಖಿಸಲಾಗಿದೆ.
ನಟ ಶಾರುಖ್ ಖಾನ್ ಅವರ ಸಂಪತ್ತು ಕಳೆದ ವರ್ಷ 870 ಬಿಲಿಯನ್ ಆಗಿತ್ತು ಇದೀಗ 1.4 ಬಿಲಿಯನ್‌ಗೆ ಏರಿದೆ. ಈಗ ಹಲವಾರು ಅಂತಾ ರಾಷ್ಟ್ರೀಯ ಸೆಲೆಬ್ರಿಟಿಗಳ ಸಂಪತ್ತನ್ನು ಕೂಡ ಮೀರಿಸುವಂತಿದೆ. ಟೇಲರ್ ಸ್ವಿಫ್ಟ್ ಅವರ ನಿವ್ವಳ ಆದಾಯವು 1.3 ಬಿಲಿಯನ್, ಆರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರದ್ದು 1.2 ಬಿಲಿಯನ್, ಜೆರ್ರಿ ಸೀನ್‌ಫೆಲ್ಡ್ ಅವರದ್ದು 1.2 ಬಿಲಿಯನ್, ಮತ್ತು ಸೆಲೆನಾ ಗೊಮೆಜ್ $720 ಮಿಲಿಯನ್ ಆದಾಯ ಹೊಂದಿದ್ದಾರೆ ಎಂಬುದು ಪಟ್ಟಿಯಲ್ಲಿ ತಿಳಿದುಬಂದಿದೆ.
ಇದನ್ನು ಓದಿ:Kantara Chapter 1 Movie: ʼಕಾಂತಾರ: ಚಾಪ್ಟರ್ 1ʼ ಚಿತ್ರ ಯಾಕಾಗಿ ನೋಡಬೇಕು? ಇಲ್ಲಿದೆ 5 ಕಾರಣಗಳು
ಜೂಹಿ ಚಾವ್ಲಾ ಹಾಗೂ ಅವರ ಕುಟುಂಬದ ಆಸ್ತಿ 7,790 ಕೋಟಿ ರೂ. ಇದ್ದು, ಹೃತಿಕ್ ರೋಷನ್ ಅವರ ಒಟ್ಟಾರೆ ಆಸ್ತಿ ಮೌಲ್ಯ 2,160 ಕೋಟಿ ರೂ. ಇದೆ. ಕರಣ್ ಜೋಹರ್ ಅವರ ಆಸ್ತಿ ಮೌಲ್ಯ 1,880 ಕೋಟಿ ರೂ. ಇದೆ. ಅಮಿತಾಭ್ ಬಚ್ಚನ್ ಅವರ ಆಸ್ತಿ ಮೌಲ್ಯ 1,630 ಕೋಟಿ ರೂ. ನಿವ್ವಳ ಆದಾಯ ಹೊಂದಿರುವುದಾಗಿ ಪಟ್ಟಿಯಲ್ಲಿ ತಿಳಿದುಬಂದಿದೆ. ಸದ್ಯ ನಟ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಮತ್ತು ಸುಹಾನಾ ಖಾನ್ ಅವರೊಂದಿಗೆ 'ಕಿಂಗ್' ಎಂಬ ಬಹು ನಿರೀಕ್ಷಿತ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಅವರ ಫಸ್ಟ್ ಲುಕ್ ಫೋಟೊ ಕೂಡ ವೈರಲ್ ಆಗಿತ್ತು. ಈ ಮೂಲಕ ಕಿಂಗ್ ಸಿನಿಮಾ ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸುತ್ತಿದೆ.