ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WI vs IND 1st Test: ಮೊಹಮ್ಮದ್‌ ಸಿರಾಜ್‌ ದಾಳಿಗೆ ವಿಂಡೀಸ್‌ ಆಲೌಟ್‌

ಸಿರಾಜ್‌ ಮತ್ತು ಬುಮ್ರಾ ಜಿದ್ದಿಗೆ ಬಿದ್ದಂತೆ ವಿಂಡೀಸ್‌ ಬ್ಯಾಟರ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ಗೆ ಅಟ್ಟಿದರು. ಸಿರಾಜ್‌ 14 ಓವರ್‌ ಎಸೆದು 40 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರೆ, ಜಸ್‌ಪ್ರೀತ್‌ ಬುಮ್ರಾ 42 ರನ್‌ಗೆ 3 ವಿಕೆಟ್‌ ಪಡೆದರು. ಎರಡು ವಿಕೆಟ್‌ ಕುಲ್‌ದೀಪ್‌ ಪಾಲಾಯಿತು. ಸುಂದರ್‌ ಒಂದು ವಿಕೆಟ್‌ ಕಿತ್ತರು.

ಸಿರಾಜ್‌ ಘಾತಕ ಬೌಲಿಂಗ್‌ ದಾಳಿ; ವಿಂಡೀಸ್‌ 162ಕ್ಕೆ ಆಲೌಟ್‌

-

Abhilash BC Abhilash BC Oct 2, 2025 2:18 PM

ಅಹಮದಾಬಾದ್‌: ವೇಗಿಳಾದ ಮೊಹಮ್ಮದ್‌ ಸಿರಾಜ್‌(Mohammed Siraj) ಮತ್ತು ಜಸ್‌ಪ್ರೀತ್‌ ಬುಮ್ರಾ(Jasprit Bumrah) ದಾಳಿಗೆ ನಲುಗಿದ ವೆಸ್ಟ್‌ ಇಂಡೀಸ್‌ ತಂಡ ಭಾರತ ವಿರುದ್ಧ ಗುರುವಾರ ಆರಂಭಗೊಂಡ ಮೊದಲ ಟೆಸ್ಟ್‌ನ ಮೊದಲ ದಿನದಾಟದಲ್ಲಿಯೇ 162ರನ್‌ಗೆ ಆಲೌಟ್‌ ಆಗಿದೆ.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭಗೊಂಡ ಈ ಟೆಸ್ಟ್‌ನಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಿಂಡೀಸ್‌ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ವಿಫಲವಾಯಿತು. 20 ರನ್‌ ಆಗುಷವಷ್ಟರಲ್ಲಿ ಆರಂಭಿಕರಿಬ್ಬರ ವಿಕೆಟ್‌ ಕಳೆದುಕೊಂಡಿತು. ಆ ಬಳಿಕವೂ ಕೂಡ ವಿಂಡೀಸ್‌ ಚೇತರಿಕೆ ಕಾಣಲಿಲ್ಲ. ಸತತವಾಗಿ ವಿಕೆಟ್‌ ಕಳೆದುಕೊಂಡಿತು.

ಸಿರಾಜ್‌ ಮತ್ತು ಬುಮ್ರಾ ಜಿದ್ದಿಗೆ ಬಿದ್ದಂತೆ ವಿಂಡೀಸ್‌ ಬ್ಯಾಟರ್‌ಗಳನ್ನು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ಗೆ ಅಟ್ಟಿದರು. ಸಿರಾಜ್‌ 14 ಓವರ್‌ ಎಸೆದು 40 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರೆ, ಜಸ್‌ಪ್ರೀತ್‌ ಬುಮ್ರಾ 42 ರನ್‌ಗೆ 3 ವಿಕೆಟ್‌ ಪಡೆದರು. ಎರಡು ವಿಕೆಟ್‌ ಕುಲ್‌ದೀಪ್‌ ಪಾಲಾಯಿತು. ಸುಂದರ್‌ ಒಂದು ವಿಕೆಟ್‌ ಕಿತ್ತರು.

ಇದನ್ನೂ ಓದಿ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್: ಭಾರತದ 14 ಸದಸ್ಯರ ತಂಡಕ್ಕೆ ಚಾನು ಸಾರಥ್ಯ

ವಿಂಡೀಸ್‌ ಪರ ಜಸ್ಟಿನ್ ಗ್ರೀವ್ಸ್(32) ಅವರದ್ದೇ ಅತ್ಯಧಿಕ ಗಳಿಕೆ. ಇವರನ್ನು ಹೊರತುಪಡಿಸಿದರೆ 2021ರ ಬಳಿಕ ಟೆಸ್ಟ್‌ ಆಡಲಿಳಿದ ಶಾಯ್ ಹೋಪ್ 26 ಮತ್ತು ನಾಯಕ ರೋಸ್ಟನ್ ಚೇಸ್ 24 ರನ್‌ ಗಳಿಸಿದರು. 21 ರನ್‌ ಇತರ ರೂಪದಲ್ಲಿ ದಾಖಲಾಯಿತು.