ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sooraj Pancholi: ʼಕೇಸರಿ ವೀರ್: ಲೆಜೆಂಡ್ಸ್ ಆಫ್ ಸೋಮನಾಥʼ ಚಿತ್ರದ ಟ್ರೈಲರ್‌ ಬಿಡುಗಡೆ ವೇಳೆ ನಟ ಸೂರಜ್ ಕಣ್ಣೀರು ಹಾಕಿದ್ಯಾಕೆ?

ʼಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ʼ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ನಟ ಸೂರಜ್ ಬಾಲಿವುಡ್‌ನ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ಈಗಾಗಲೇ ಚಿತ್ರ ನಿರೀಕ್ಷೆ ಹುಟ್ಟು ಹಾಕಿದೆ. ಇತ್ತೀಚೆಗಷ್ಟೇ ಈ ಸಿನಿಮಾದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ನಡೆದಿದ್ದು ನಟ ಸೂರಜ್ ಭಾವನಾತ್ಮಕವಾಗಿ ಮಾತನಾಡಿದ್ದ ವಿಡಿಯೊವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಟ್ರೈಲರ್‌ ರಿಲೀಸ್‌ ವೇಳೆ ನಟ ಸೂರಜ್ ಭಾವುಕ

Sooraj Pancholi

Profile Pushpa Kumari Apr 30, 2025 9:37 PM

ಮುಂಬೈ: ಬಾಲಿವುಡ್‌ನಲ್ಲಿ ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣವು 2013ರಲ್ಲಿ ಸಂಚಲನ ಉಂಟು ಮಾಡಿತ್ತು. ಬಾಲಿವುಡ್ ನಟ ಸೂರಜ್ ಪಂಚೋಲಿ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿದ್ದರು. ಇತ್ತೀಚೆಗಷ್ಟೇ ಸಿಬಿಐ ಕೋರ್ಟ್ ತೀರ್ಪು ಪ್ರಕಟಿಸಿದ್ದು ಸಾಕ್ಷಾಧಾರಗಳ ಕೊರತೆಯಿಂದ ನಟ ಸೂರಜ್ ಪಾಂಚೋಲಿ ಅವರನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಿಂದ ವಜಾ ಮಾಡಲಾಗಿದೆ. ಇದರ ಬೆನ್ನಲ್ಲೆ ನಟ ಸೂರಜ್ ಪಾಂಚೋಲಿ (Sooraj Pancholi) ಅವರ ಸಿನಿ ಕೆರಿಯರ್ ಈಗ ಮತ್ತೆ ರೀ ಎಂಟ್ರಿ ಪಡೆಯುತ್ತಿದೆ. ʼಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ʼ ಚಿತ್ರದಲ್ಲಿ ಲೀಡ್ ರೋಲ್‌ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಹೊಸ ಭರವಸೆ ಮೂಡಿದೆ. ಇತ್ತೀಚೆ ಗಷ್ಟೇ ಈ ಸಿನಿಮಾದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ನಡೆದಿದ್ದು ನಟ ಸೂರಜ್ ಭಾವನಾತ್ಮಕವಾಗಿ ಮಾತನಾಡಿದ್ದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ʼಟೈಮ್ ಟು ಡ್ಯಾನ್ಸ್ʼ, ʼಹೀರೋʼ ಸಿನಿಮಾ ಖ್ಯಾತಿಯ ನಟ ಸೂರಜ್ ಪಂಚೋಲಿ ವೃತ್ತಿ ಬದುಕಲ್ಲಿ ಯಶಸ್ಸು ಕಾಣಬೇಕು ಅನ್ನುವಾಗಲೆ ನಟಿ ಜಿಯಾ ಖಾನ್ ಕೇಸ್‌ನಲ್ಲಿ ಸಿಲುಕಬೇಕಾಯ್ತು. ಹೀಗಾಗಿ ನಿರ್ಮಾಪಕರು ನಟನನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಳ್ಳುವುದನ್ನು ನಿಲ್ಲಿಸಿದರು. ಈಗ ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಮತ್ತು ಆಕಾಂಕ್ಷಾ ಶರ್ಮಾ ಅವರೊಂದಿಗೆ ʼಕೇಸರಿ ವೀರ್: ಲೆಜೆಂಡ್ ಆಫ್ ಸೋಮನಾಥ್ʼ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಚಿತ್ರದ ಟ್ರೈಲರ್‌ ಬಿಡುಗಡೆ ಸಮಾರಂಭದಲ್ಲಿ ಕೂಡ ಭಾಗಿಯಾಗಿದ್ದರು.

ಸಿನಿಮಾ ಬಗ್ಗೆ ನಟ ಸೂರಜ್ ಭಾವುಕರಾಗಿ ಮಾತನಾಡಿ, ನನಗೆ ಅವಕಾಶ ನೀಡಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಎಂದು ಭಾವುಕರಾಗಿದ್ದಾರೆ. ನಟ ಸೂರಜ್ ನಿರ್ಮಾಪಕರಿಗೆ ಧನ್ಯವಾದ ಹೇಳುತ್ತಾ ಕಣ್ಣೀರು ಹಾಕಿದಾಗ ನಟ ಸುನೀಲ್ ಶೆಟ್ಟಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವ ದೃಶ್ಯ ವೈರಲ್ ವಿಡಿಯೊದಲ್ಲಿ ಕಾಣಬಹುದು.

ನಟ ಸುನೀಲ್ ಶೆಟ್ಟಿ ಮಾತನಾಡಿ, ಸೂರಜ್ ಜೀವನದಲ್ಲಿ ಬಹಳಷ್ಟು ಕಷ್ಟ ನೋಡಿದ್ದಾರೆ. ಈಗ, ಅವರಿಗೆ ಸಿನಿ ಕೆರಿಯರ್‌ನ ಎರಡನೇ ಅವಕಾಶ ಸಿಕ್ಕಿದೆ. ಈ ಸಿನಿಮಾ ಅವರ ಕೆರಿಯರ್‌ನಲ್ಲೇ ಬಿಗ್ ಟರ್ನಿಂಗ್ ಪಾಯಿಂಟ್‌ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸೋಮನಾಥ ದೇವಾಲಯವನ್ನು ರಕ್ಷಿಸಲು ತುಘಲಕ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಧೈರ್ಯಶಾಲಿ ಯೋಧ ಹಮೀರ್ಜಿ ಗೋಹಿಲ್ ಅವರ ಸಾಹಸಗಾಥೆಯೇ ʼಕೇಸರಿ ವೀರ್: ಲೆಜೆಂಡ್ಸ್ ಆಫ್ ಸೋಮನಾಥʼ ಸಿನಿಮಾದ ಕಥೆ. ಪ್ರಿನ್ಸ್ ಧಿಮಾನ್ ನಿರ್ದೇಶಿಸಿದ್ದು, ಕಾನು ಚೌಹಾಣ್ ನಿರ್ಮಿಸಿದ್ದಾರೆ. ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ಧರ್ಮವನ್ನು ಎತ್ತಿಹಿಡಿಯಲು ಶ್ರಮಿಸುವ ನಿರ್ಭೀತ ಯೋಧ ವೇಗ್ಡಾ ಜಿ ಪಾತ್ರದಲ್ಲಿ ನಟಿಸಿದ್ದಾರೆ. ಸೂರಜ್ ಪಂಚೋಲಿ ವೀರ್ ಹಮೀರ್ಜಿ ಗೋಹಿಲ್ ಆಗಿ ಕಾಣಿಸಿ ಕೊಂಡಿದ್ದಾರೆ

ಇದನ್ನು ಓದಿ: Kothalavadi Movie: ರಾಕಿಂಗ್ ಸ್ಟಾರ್ ಯಶ್ ತಾಯಿ ನಿರ್ಮಾಣದ ಮೊದಲ ಚಿತ್ರಕ್ಕೆ ʼಕೊತ್ತಲವಾಡಿʼ ಶೀರ್ಷಿಕೆ; ಮಾಸ್ ಅವತಾರದಲ್ಲಿ ಪೃಥ್ವಿ ಅಂಬರ್

ನಟಿ ಜಿಯಾ ಖಾನ್ ಅವರು 2013 ರ ಜೂನ್ 3ರಂದು ಮುಂಬೈನ ಜುಹುದಲ್ಲಿರುವ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದರು. ಪ್ರೀತಿಯ ಹೆಸರಿನಲ್ಲಿ ಸೂರಜ್ ಪಾಂಚೋಲಿ ತನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದರು ಎಂದು ಉಲ್ಲೇಖಿಸಿದ್ದ 6 ಪುಟಗಳ ಡೆತ್ ನೋಟ್ ಕೂಡ ಮೃತದೇಹದ ಪಕ್ಕದಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದ ಅಡಿಯಲ್ಲಿ‌ ಅನೇಕ ವರ್ಷ ನಟ ಸೂರಜ್ ಇದೇ ಕೇಸ್‌ ನಲ್ಲಿ ಸಿಲುಕಬೇಕಾಗಿ ಬಂದಿತ್ತು. ಇದೀಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.