ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಲ್ರಿಗಿಂತ ಮುಂಚೆ ʻವಿಜಯ್‌ ಸಿಎಂ ಆಗ್ತಾರೆʼ ಎಂದಿದ್ದ GOAT ನಿರ್ದೇಶಕ ವೆಂಕಟ್‌ ಪ್ರಭು; ದಳಪತಿಗೆ ಸಿಕ್ತು ಸ್ಪೆಷಲ್ ನಂಬರ್ ಪ್ಲೇಟ್ ಗಿಫ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ದಳಪತಿ ವಿಜಯ್ ಅವರನ್ನು 'GOAT' ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಭೇಟಿಯಾಗಿ ಶುಭ ಕೋರಿದ್ದಾರೆ. GOAT ಸಿನಿಮಾದ ದೃಶ್ಯವೊಂದರಲ್ಲಿ ‘TN07 CM 2026’ ನಂಬರ್ ಪ್ಲೇಟ್ ಕಾರು ಬಳಸುವ ಮೂಲಕ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವೆಂಕಟ್ ಪ್ರಭು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.

ವಿಜಯ್ CM ಆಗ್ತಾರೆ ಅಂತ 2 ವರ್ಷ ಮುಂಚೆಯೇ ಭವಿಷ್ಯ ನುಡಿದಿದ್ದ ನಿರ್ದೇಶಕ!

-

Avinash GR
Avinash GR May 19, 2026 1:32 PM

ನಟ ದಳಪತಿ ವಿಜಯ್ ಈಗ ತಮಿಳುನಾಡು ರಾಜಕಾರಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸಿನಿಮಾಗಳನ್ನು ಬದಿಗಿಟ್ಟು ರಾಜಕೀಯಕ್ಕೆ ಧುಮುಕಿದ್ದ ಅವರು, ತಮ್ಮ ಮೊದಲ ಚುನಾವಣೆಯಲ್ಲೇ ಭರ್ಜರಿ ಜಯ ಸಾಧಿಸಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮಧ್ಯೆ 2024ರಲ್ಲೇ ವಿಜಯ್‌ ಸಿಎಂ ಆಗುತ್ತಾರೆ ಎಂಬ ಸುಳಿವನ್ನು ನೀಡಿದ್ದರು ನಿರ್ದೇಶಕ ವೆಂಕಟ್‌ ಪ್ರಭು. ಈಚೆಗೆ ಅವರು ವಿಜಯ್‌ರನ್ನು ಭೇಟಿಯಾಗಿದ್ದಾರೆ

TN 07 CM 2026 ವಿಶೇಷ ನಂಬರ್ ಪ್ಲೇಟ್ ಗಿಫ್ಟ್‌

ಸಿಎಂ ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಿ ಶುಭ ಕೋರಿದ ವೆಂಕಟ್ ಪ್ರಭು, ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ‘TN07 CM 2026’ ನಂಬರ್ ಪ್ಲೇಟ್ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಅಪರೂಪದ ಕ್ಷಣದ ಫೋಟೋಗಳನ್ನು ನಿರ್ದೇಶಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ವೆಂಕಟ್‌ ಪ್ರಭು.

Thalapathy Vijay: ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ವೆಂಕಟ್ ಪ್ರಭು ಹೇಳಿದ್ದೇನು?

"ಇತಿಹಾಸ ಸೃಷ್ಟಿಯಾಗಿದೆ.. ಒಂದು ಸಣ್ಣ ಆಲೋಚನೆಯಾಗಿ ಆರಂಭವಾಗಿ, ಒಂದು ದೊಡ್ಡ ವಿಷನ್ ಆಗಿ ಬದಲಾಗಿ, ಇಂದು ಈ ಅದ್ಭುತ ಕ್ಷಣವಾಗಿ ನಮ್ಮ ಕಣ್ಣಮುಂದೆ ನಿಂತಿದೆ. ನಮ್ಮ ಗೌರವಾನ್ವಿತ ಮುಖ್ಯಮಂತ್ರಿ ವಿಜಯ್ ಅಣ್ಣ ಅವರನ್ನು ಇಂದು ಭೇಟಿಯಾಗಿ, ‘GOAT’ ಸಿನಿಮಾಗೆ ಸಂಬಂಧಿಸಿದ ಮೊದಲ ಸ್ಮರಣಿಕೆಯನ್ನು ಅವರಿಗೆ ಉಡುಗೊರೆಯಾಗಿ ನೀಡಲು ತುಂಬಾ ಸಂತೋಷವಾಗುತ್ತಿದೆ. ಇದು ಕೇವಲ ಆರಂಭವಷ್ಟೇ! TN07CM2026" ಎಂದು ವೆಂಕಟ್ ಪ್ರಭು ಬರೆದುಕೊಂಡಿದ್ದಾರೆ.

2 ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ವೆಂಕಟ್ ಪ್ರಭು

ವೆಂಕಟ್ ಪ್ರಭು ನಿರ್ದೇಶನದಲ್ಲಿ ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದ 'ಗೋಟ್' (GOAT - The Greatest Of All Time) ಸಿನಿಮಾವು 2024ರಲ್ಲಿ ರಿಲೀಸ್‌ ಆಗಿತ್ತು. ಈ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ಅವಧಿಯಲ್ಲೇ ವಿಜಯ್ ಅವರ ರಾಜಕೀಯಕ್ಕೆ ಕಾಲಿಡಲಿದ್ದಾರೆ ಎಂಬ ವಿಚಾರ ಗೊತ್ತಾಗಿತ್ತು. ವಿಶೇಷವೆಂದರೆ, ಆ ಸಿನಿಮಾದ ದೃಶ್ಯವೊಂದರಲ್ಲಿ ವಿಜಯ್ 'TN 07 CM 2026' ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರನ್ನು ಚಲಾಯಿಸುವಂತೆ ತೋರಿಸಲಾಗಿತ್ತು. ಕಟ್ ಮಾಡಿದರೆ, ಇಂದು ಅವರು ನಿಜ ಜೀವನದಲ್ಲೂ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ!

ವೆಂಕಟ್‌ ಪ್ರಭು ಅವರ ಪೋಸ್ಟ್‌



ಅಂದಹಾಗೆ, TN 07 ಎಂಬುದು ತಮಿಳುನಾಡಿನ ದಕ್ಷಿಣ ಚೆನ್ನೈನ ಆರ್‌ಟಿಓ ಕೋಡ್‌ ಆಗಿದೆ. CM 2026 ಎಂದರೆ, 2026ರಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹಿಂಟ್‌ ಅನ್ನು ಕಾರಿನ ನಂಬರ್‌ ಪ್ಲೇಟ್‌ನಲ್ಲಿಯೇ ವೆಂಕಟ್‌ ನೀಡಿದ್ದರು. ಅಂದು ಸಿನಿಮಾ ರಿಲೀಸ್ ಆದಾಗ ಜನರು ಈ ನಂಬರ್ ಪ್ಲೇಟ್ ಅನ್ನು ಅಷ್ಟಾಗಿ ಗಮನಿಸಿರಲಿಲ್ಲ. ಆದರೆ ವಿಜಯ್ ಚುನಾವಣೆಯಲ್ಲಿ ಗೆದ್ದು ಸಿಎಂ ಆದ ತಕ್ಷಣ ಆ ಸಿನಿಮಾದ ಕಾರಿನ ವಿಡಿಯೋ ಸಖತ್ ವೈರಲ್ ಆಗಿದೆ. ವಿಜಯ್ 2026ರಲ್ಲಿ ವರ್ಷ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದನ್ನು ವೆಂಕಟ್ ಪ್ರಭು ಎರಡು ವರ್ಷಗಳ ಹಿಂದೆಯೇ ಊಹಿಸಿ ಈ ಸೀನ್ ಇಟ್ಟಿದ್ದರು ಎಂದು ದಳಪತಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.