ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚೀನಾ ಮಾಸ್ಟರ್ಸ್‌; ಕ್ವಾರ್ಟರ್ ತಲುಪಿದ ಶ್ರೀಕಾಂತ್, ಅಶ್ಮಿತಾ ಚಲಿಹಾ

China Masters: 16ನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ವಿಶ್ವದ 9ನೇ ಶ್ರೇಯಾಂಕಿತ ಟೊಮೊಕಾ ಮಿಯಾಜಾಕಿ ವಿರುದ್ಧ 66 ನಿಮಿಷಗಳ ರೋಮಾಂಚಕ ಹೋರಾಟದ ನಂತರ ತನ್ವಿ ಶರ್ಮಾ 17-21, 21-18, 16-21 ಗೇಮ್‌ಗಳಿಂದ ಸೋತು ಹೊರಬಿದ್ದರು.

ಚೀನಾ ಮಾಸ್ಟರ್ಸ್‌; ಕ್ವಾರ್ಟರ್ ತಲುಪಿದ ಶ್ರೀಕಾಂತ್, ಅಶ್ಮಿತಾ ಚಲಿಹಾ

Kidambi Srikanth -

Abhilash BC
Abhilash BC Sep 3, 2026 12:08 PM

ನವದೆಹಲಿ, ಸೆ.3: ಗುರುವಾರ ನಡೆದ ಚೀನಾ ಮಾಸ್ಟರ್ಸ್‌ನಲ್ಲಿ ವಿಶ್ವದ 9 ನೇ ಶ್ರೇಯಾಂಕಿತ ಆಟಗಾರ ವಿಕ್ಟರ್ ಲೈ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿ ಕಿದಂಬಿ ಶ್ರೀಕಾಂತ್ ಕ್ವಾರ್ಟರ್ ಸುತ್ತಿಗೆ ಮುನ್ನಡೆದರು. ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕದ ಅಶ್ಮಿತಾ ಚಲಿಹಾ ಕೂಡ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‌ ತಲುಪಿದರು.

ಬಿಡಬ್ಲ್ಯೂಎಫ್ ಸೂಪರ್ 750 ಟೂರ್ನಮೆಂಟ್‌ನಲ್ಲಿ ಮಾಜಿ ವಿಶ್ವ ನಂ. 1 ಆಟಗಾರ ಲೈ ಅವರನ್ನು 21-18, 21-19 ಗೇಮ್‌ಗಳಿಂದ ಸೋಲಿಸುವ ಮೂಲಕ ಶ್ರೀಕಾಂತ್‌ ಉತ್ತಮ ಪ್ರದರ್ಶನ ನೀಡಿದರು. ಮುಂದಿನ ಸುತ್ತಿನಲ್ಲಿ ಹಾಂಗ್ ಕಾಂಗ್ ಚೀನಾದ ಲೀ ಚೆಯುಕ್ ಯಿಯು ಅವರನ್ನು ಎದುರಿಸಲಿದ್ದಾರೆ.

ಲೈ ಅವರ ಇತ್ತೀಚಿನ ಫಾರ್ಮ್ ಅನ್ನು ಗಮನಿಸಿದರೆ ಈ ಗೆಲುವು ವಿಶೇಷವಾಗಿ ಪ್ರಭಾವಶಾಲಿಯಾಗಿತ್ತು. ಕೆನಡಾದ ಆಟಗಾರ ಭಾರತದ ಲಕ್ಷ್ಯ ಸೇನ್ ಅವರನ್ನು ಆರಂಭಿಕ ಸುತ್ತಿನಲ್ಲಿ ಸೋಲಿಸಿದ್ದರು. ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಚೀನಾ ಮಾಸ್ಟರ್ಸ್‌ಗೆ ಪ್ರವೇಶಿಸಿದ್ದರು.

ಏಷ್ಯನ್ ಗೇಮ್ಸ್: 246 ಸಹಾಯಕ ಸಿಬ್ಬಂದಿ ಅನುಮೋದಿಸಿದ ಕ್ರೀಡಾ ಸಚಿವಾಲಯ

ಮಹಿಳಾ ಸಿಂಗಲ್ಸ್‌ನಲ್ಲಿ ಅಶ್ಮಿತಾ ಚಲಿಹಾ ಮಲೇಷ್ಯಾದ ಗೋ ಜಿನ್ ವೀ ವಿರುದ್ಧ 10-21, 21-10, 21-17 ಅಂತರದಲ್ಲಿ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಕಳೆದ ತಿಂಗಳು, ಅಸಾನ್‌ನಲ್ಲಿ ನಡೆದ ಕೊರಿಯಾ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಚಲಿಹಾ ನಾಲ್ಕನೇ ಶ್ರೇಯಾಂಕದ ಚೀನಾದ ಹಾನ್ ಕಿಯಾನ್ ಕ್ಸಿ ವಿರುದ್ಧ ಹೋರಾಟದ ಜಯ ಸಾಧಿಸುವ ಮೂಲಕ ತನ್ನ ಮೊದಲ ಬಿಡಬ್ಲ್ಯೂಎಫ್ ವಿಶ್ವ ಟೂರ್‌ ಪ್ರಶಸ್ತಿಯನ್ನು ಗೆದ್ದಿದ್ದರು.

16ನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ವಿಶ್ವದ 9ನೇ ಶ್ರೇಯಾಂಕಿತ ಟೊಮೊಕಾ ಮಿಯಾಜಾಕಿ ವಿರುದ್ಧ 66 ನಿಮಿಷಗಳ ರೋಮಾಂಚಕ ಹೋರಾಟದ ನಂತರ ತನ್ವಿ ಶರ್ಮಾ 17-21, 21-18, 16-21 ಗೇಮ್‌ಗಳಿಂದ ಸೋತು ಹೊರಬಿದ್ದರು.

ಪುರುಷರ ಸಿಂಗಲ್ಸ್‌ನ 16ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಕ್ಸುವಾನ್ ಚೆನ್ ಝು ವಿರುದ್ಧ ಎಚ್.ಎಸ್. ಪ್ರಣಯ್ ಸೋಲು ಕಂಡು ತಮ್ಮ ಅಭಿಯಾನ ಮುಗಿಸಿದರು. ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ 32ನೇ ಸುತ್ತಿನ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಪ್ರಣಯ್, ಚೈನೀಸ್ ತೈಪೆಯ ಲಿಯಾವೊ ಜುವೊ-ಫು ವಿರುದ್ಧ ಒಂದು ಗಂಟೆ ನಾಲ್ಕು ನಿಮಿಷಗಳ ಹೋರಾಟದಲ್ಲಿ 18-21, 21-15, 21-19 ಅಂತರದಲ್ಲಿ ಜಯ ಸಾಧಿಸಿ ಕೊನೆಯ 16ರ ಘಟ್ಟಕ್ಕೆ ಪ್ರವೇಶಿಸಿದ್ದರು.