Rashmika Mandanna: ಫ್ಯಾನ್ಸ್ ಹೃದಯ ಗೆದ್ದ ನ್ಯಾಶನಲ್ ಕ್ರಶ್ ಅಭಿನಯ! ದೀಕ್ಷಿತ್, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್' ಮೂವಿ ನೋಡಿದವರು ಹೇಳಿದಿಷ್ಟು
'ದಿ ಗರ್ಲ್‌ಫ್ರೆಂಡ್' (The Girlfriend) ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಬಿಡುಗಡೆಯಾಗಿದೆ (Release). ಮೊದಲ ದಿನ ಮತ್ತು ಮೊದಲ ಪ್ರದರ್ಶನಕ್ಕೆ ಹಾಜರಾದ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ (Allu Arvind) ಅವರ ನಿರೂಪಣೆಯಲ್ಲಿ ನಿರ್ಮಿಸಿವೆ.
ರಶ್ಮಿಕಾ ಮಂದಣ್ಣ -
ರಾಹುಲ್ ರವೀಂದ್ರನ್ ನಿರ್ದೇಶನದ ರಶ್ಮಿಕಾ ಮಂದಣ್ಣ (Rashmika Mandanna ) ಅವರ ಬಹುನಿರೀಕ್ಷಿತ ಸಿನಿಮಾ 'ದಿ ಗರ್ಲ್‌ಫ್ರೆಂಡ್' (The Girlfriend) ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಇಂದು (ನವೆಂಬರ್ 7) ಬಿಡುಗಡೆಯಾಗಿದೆ (Release). ಮೊದಲ ದಿನ ಮತ್ತು ಮೊದಲ ಪ್ರದರ್ಶನಕ್ಕೆ ಹಾಜರಾದ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನಾಯಕಿಯ ಅಭಿನಯ ಮತ್ತು ನಿರ್ದೇಶಕರ (Director) ನಿರೂಪಣೆಯನ್ನು ಶ್ಲಾಘಿಸುತ್ತಿದ್ದಾರೆ. ಈ ಚಿತ್ರವನ್ನು ಗೀತಾ ಆರ್ಟ್ಸ್ ಮತ್ತು ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ಪ್ರಸಿದ್ಧ ನಿರ್ಮಾಪಕ ಅಲ್ಲು ಅರವಿಂದ್ (Allu Arvind) ಅವರ ನಿರೂಪಣೆಯಲ್ಲಿ ನಿರ್ಮಿಸಿವೆ.
ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ!
ಇನ್ನು ಎಕ್ಸ್ ಖಾತೆಯಲ್ಲಿ ಸಿನಿಮಾ ನೋಡುಗರು ಭಾರಿ ಮೆಚ್ಚುಗೆ ವ್ಯಕ್ತಪಿಡಿಸಿದ್ದಾರೆ. ವಿಮರ್ಶಕರೊಬ್ಬರು X ಖಾತೆಯಲ್ಲಿ ಬರೆದುಕೊಂಡಿದ್ದು ಹೀಗೆ ಸಾಕಷ್ಟು ನಿಧಾನವಾದ ನಿರೂಪಣೆಯನ್ನು ಹೊಂದಿರುವ ಗ್ರೌಂಡ್ಡ್ ಡ್ರಾಮಾ, ಆದರೆ ಕೆಲವು ದೃಶ್ಯಗಳೊಂದಿಗೆ ಪ್ರೀ-ಮಧ್ಯಂತರ ಭಾಗಗಳಿಂದ ಉತ್ತಮವಾಗಿ ನಿರ್ಮಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.
ರಶ್ಮಿಕಾ ನಟನೆಯೇ ಅಮೋಘ
ಮತ್ತೊಬ್ಬರು ಬರೆದಿದ್ದಾರೆ, "ಮೊದಲಾರ್ಧ ಸ್ವಲ್ಪ ನಿಧಾನ ಇದೆ.. ಪ್ರಮುಖ ಪಾತ್ರಧಾರಿಗಳಾದ ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ ಮತ್ತು ಅನು ಎಮ್ಯಾನುಯೆಲ್ ಅವರ ಅದ್ಭುತ ಅಭಿನಯ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರವನ್ನು ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನದ ಅತ್ಯುತ್ತಮ ಅಭಿನಯ ಎಂದು ಕರೆದಿದ್ದಾರೆ. ಭೂಮಾ ಪಾತ್ರವು ಪ್ರಶಂಸೆಗಳನ್ನು ಪಡೆಯುತ್ತಿದೆ. "ಇಲ್ಲಿಯವರೆಗಿನ ಕಥೆಯು ಉತ್ತಮ ಸಂಗೀತ, ಉತ್ತಮವಾಗಿ ಬರೆಯಲ್ಪಟ್ಟ ಸಂಭಾಷಣೆಗಳು ಮತ್ತು ಉತ್ತಮ ನಿರ್ದೇಶನದ ಪೂರ್ವ-ಮಧ್ಯಂತರದ ಅನುಕ್ರಮದೊಂದಿಗೆ ಬಹಳ ನಿಧಾನಗತಿಯಲ್ಲಿ ನಡೆಯಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮೇಲೆ ಸಿಡಿದೆದ್ದು ಕೂಗಾಡಿದ ಧ್ರುವಂತ್! ಸಾಥ್ ಕೊಟ್ಟ ಅಶ್ವಿನಿ ಗೌಡ
And yes these scenes stand out 👏🏻
— Karthik Rao (@Cric_Karthikk) November 7, 2025
( 📸 from GA official page/trailer link)#TheGirlFriend pic.twitter.com/UImIQ40m1v
ಹಾಡುಗಳು ಚೆನ್ನಾಗಿವೆ
"#TheGirlFriend ಸಂಗೀತ ಸಂಪೂರ್ಣವಾಗಿ ಮಿಶ್ರಣವಾಗಿದೆ ಮತ್ತು ಹಾಡುಗಳು ಚೆನ್ನಾಗಿವೆ. ದೀಕ್ಷಿತ್ ಶೆಟ್ಟಿ ಕೂಡ ಅಷ್ಟೇ ಚೆನ್ನಾಗಿದ್ದಾರೆ. ಅನು ಎಮ್ಯಾನುಯೆಲ್ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ಅಂತಿಮವಾಗಿ ರಶ್ಮಿಕಾ ಮಂದಣ್ಣ ಎಲ್ಲರ ಗಮನ ಸೆಳೆಯುವವರು ಎಂದು ಬರೆದಿದ್ದಾರೆ.
ರಾಹುಲ್ ರವೀಂದ್ರನ್ ಅವರ ಬರವಣಿಗೆ ಹೃದಯಗಳನ್ನು ಗೆಲ್ಲುತ್ತದೆ. ರಶ್ಮಿಕಾ ಮಂದಣ್ಣ ಅವರ ಅಭಿನಯ, ಕೊನೆಯ 30 ನಿಮಿಷ ಅದ್ಭುತವಾಗಿದೆ. ದೀಕ್ಷಿತ್ ಶೆಟ್ಟಿ ಅವರ ನಟನೆ ತುಂಬಾ ಚೆನ್ನಾಗಿತ್ತು, ಅದ್ಭುತ ಸಂಗೀತ ಮಾಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ, ದೀಕ್ಷಿತ್ ಶೆಟ್ಟಿ, ಅನು ಎಮ್ಯಾನುಯೆಲ್, ರಾವ್ ರಮೇಶ್ ಮತ್ತು ಇತರರು ನಟಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಇದೇ ನಿಜವಾದ ಸ್ನೇಹ! ಕಾವುಗೋಸ್ಕರ ಪತ್ರ ತ್ಯಾಗ ಮಾಡಿದ ಗಿಲ್ಲಿ
ದೀಕ್ಷಿತ್ ಶೆಟ್ಟಿ ತಮ್ಮ ಪಾತ್ರದಲ್ಲಿ ಮಿಂಚಿದ್ದಾರೆ. ರೋಹಿಣಿ, ರಾವ್ ರಮೇಶ್ ಮತ್ತು ಅನು ಇಮ್ಯಾನುಯೆಲ್ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎಂದು ಸೆನ್ಸಾರ್ ಮಂಡಳಿ ಅಭಿಪ್ರಾಯ ಪಟ್ಟಿದೆ ಎನ್ನಲಾಗಿದೆ. ಈ ಸಿನಿಮಾ ಸದ್ಯ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಮೆಲೋಡಿ ಹಾಡುಗಳ ಸೆನ್ಸೇಷನ್ ಹೇಮ ಅಬ್ದುಲ್ ವಹಾಬ್ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.