ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್‌ ಪರೀಕ್ಷಾ ಅಕ್ರಮ ಆಧರಿಸಿ ಜೀ5ನಲ್ಲಿ ಹೊಸ ವೆಬ್‌ ಸರಣಿ: ಸಂಚಲನ ಮೂಡಿಸಿದ 'ದಿ ಸ್ಕ್ಯಾಮ್: ಲೀಕ್ಡ್' ಟೀಸರ್‌!

ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಹಗರಣ ಆಧರಿಸಿ ಜೀ5 ಒಟಿಟಿಯಲ್ಲಿ 'ದಿ ಸ್ಕ್ಯಾಮ್: ಲೀಕ್ಡ್' ಎಂಬ ವೆಬ್ ಸರಣಿ ನಿರ್ಮಾಣವಾಗುತ್ತಿದ್ದು, ಜುಲೈ 22 ರಂದು ಬಿಡುಗಡೆಯಾದ ಇದರ ಟೀಸರ್ ಭಾರಿ ಸಂಚಲನ ಮೂಡಿಸಿದೆ.

ನೀಟ್‌ ಸ್ಕ್ಯಾಮ್‌ ಕುರಿತು ಜೀ5ನಲ್ಲಿ ವೆಬ್‌ ಸೀರೀಸ್‌! ಟೀಸರ್‌ನಲ್ಲಿ ಏನಿದೆ?

-

Avinash GR
Avinash GR Jul 22, 2026 8:14 PM

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್‌ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಹಗರಣದ ಬೆನ್ನಲ್ಲೇ, ಈ ನೈಜ ಘಟನೆಗಳನ್ನು ಆಧರಿಸಿ ನಿರ್ಮಾಣಗೊಂಡಿರುವ ಹೊಸ ವೆಬ್‌ ಸರಣಿಯನ್ನು ಜೀ5 (ZEE5) ಒಟಿಟಿ ಸಂಸ್ಥೆ ಘೋಷಿಸಿದೆ. 'ದಿ ಸ್ಕ್ಯಾಮ್: ಲೀಕ್ಡ್' (The Scam: Leaked) ಹೆಸರಿನ ಈ ಬಹುನಿರೀಕ್ಷಿತ ಸರಣಿಯ ಟೀಸರ್ ಜುಲೈ 22 ರಂದು ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಭಾವುಕತೆ ಮತ್ತು ಸಸ್ಪೆನ್ಸ್‌ನಿಂದ ಕೂಡಿದ ಟೀಸರ್

"ಒಂದು ಪ್ರಶ್ನೆ ಪತ್ರಿಕೆ. ಕೋಟ್ಯಂತರ ಕನಸುಗಳು. ಒಂದು ಲೀಕ್. ಇಡೀ ದೇಶವೇ ಆಘಾತದಲ್ಲಿದೆ" ಎಂಬ ಶೀರ್ಷಿಕೆಯೊಂದಿಗೆ ಟೀಸರ್ ಹಂಚಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಸರಣಿ ಪ್ರಸಾರವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಅತ್ಯಂತ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಿ, ಗೌಪ್ಯ ಟ್ಯಾಗ್ ಹಾಕಿ ಸೀಲ್ ಮಾಡುವುದನ್ನು ತೋರಿಸಲಾಗಿದೆ. ಕಾರ್ಟನ್‌ಗಳಿಗೆ ಪ್ಯಾಕ್ ಮಾಡಿ ವಾಹನಕ್ಕೆ ಲೋಡ್ ಮಾಡುವ ಹಂತದಲ್ಲೇ ದುಷ್ಕರ್ಮಿಯೊಬ್ಬ ಪತ್ರಿಕೆಯನ್ನು ಪಡೆದು, ಮೊಬೈಲ್‌ನಲ್ಲಿ ಫೋಟೋ ತೆಗೆದು ಲೀಕ್ ಮಾಡುವುದನ್ನು ತೆರೆದಿಡಲಾಗಿದೆ.

ವಿದ್ಯಾರ್ಥಿಗಳೇ ಗಮನಿಸಿ; NEET-UG 2026 ಮರು ಪರೀಕ್ಷೆಯ ನಕಲಿ ಪ್ರವೇಶ ಪತ್ರದ ಬಗ್ಗೆ ಇರಲಿ ಎಚ್ಚರ, ಮಾಹಿತಿ ಹಂಚಿಕೊಂಡ NTA

ತದನಂತರ ಮಾಧ್ಯಮಗಳ ವರದಿಗಳು, ವಿದ್ಯಾರ್ಥಿಗಳ ಆಕ್ರೋಶ, ಖಾಲಿ ತರಗತಿಗಳು ಹಾಗೂ ಅಂತಿಮವಾಗಿ ಭವಿಷ್ಯ ಹಾಳಾಯಿತೆಂದು ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗುವ ಭಾವುಕ ದೃಶ್ಯದೊಂದಿಗೆ ಟೀಸರ್ ಮುಕ್ತಾಯಗೊಳ್ಳುತ್ತದೆ.

ದೆಹಲಿಯಲ್ಲಿ ತೀವ್ರಗೊಂಡ ನೀಟ್ ಪ್ರತಿಭಟನೆ

ಮತ್ತೊಂದೆಡೆ, ನೀಟ್ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಆಕ್ರೋಶ ಮುಗಿಲುಮುಟ್ಟಿದೆ. 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ಆರಂಭವಾದ ಈ ಹೋರಾಟಕ್ಕೆ ಸೋನಮ್ ವಾಂಗ್ಚುಕ್ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವ ಮೂಲಕ ಸಾಥ್ ನೀಡಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಪ್ರತಿಭಟನಾಕಾರರು 'ಸಂಸದ್ ಚಲೋ'ಗೆ ಕರೆ ನೀಡಿ ಮೆರವಣಿಗೆ ನಡೆಸಿದಾಗ ಪೊಲೀಸರೊಂದಿಗೆ ಘರ್ಷಣೆ ಉಂಟಾಗಿದೆ. ಲಾಠಿ ಪ್ರಹಾರ ಹಾಗೂ ಅರೆಸ್ಟ್‌ಗಳು ನಡೆದಿದ್ದು, ಹಲವು ವಿದ್ಯಾರ್ಥಿಗಳು ಮತ್ತು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

'ದಿ ಸ್ಕ್ಯಾಮ್: ಲೀಕ್ಡ್' ಟೀಸರ್



ಚಿತ್ರರಂಗದ ಪ್ರಮುಖರ ಬೆಂಬಲ

ವಿದ್ಯಾರ್ಥಿಗಳ ಈ ಹೋರಾಟಕ್ಕೆ ಚಿತ್ರರಂಗದ ಪ್ರಮುಖರು ಧ್ವನಿಯಾಗಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಖ್ಯಾತ ನಟರಾದ ಶಬಾನಾ ಆಜ್ಮಿ ಮತ್ತು ಪ್ರಕಾಶ್ ರಾಜ್ ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ಉಳಿದಂತೆ ಸೋನು ಸೂದ್, ವೀರ್ ದಾಸ್, ದಿಯಾ ಮಿರ್ಜಾ, ಸೋಹಾ ಅಲಿ ಖಾನ್, ಅದಿತಿ ರಾವ್ ಹೈದರಿ, ರಿತೇಶ್ ದೇಶ್‌ಮುಖ್, ಜೆನಿಲಿಯಾ ದೇಶ್‌ಮುಖ್, ಭೂಮಿ ಪಡ್ನೇಕರ್, ಹುಮಾ ಖುರೇಷಿ, ನಂದಿತಾ ದಾಸ್, ಆಯುಷ್ ಶರ್ಮಾ ಹಾಗೂ ಪ್ರೀತಿ ಜಿಂಟಾ ಮುಂತಾದ ಹಲವು ಕಲಾವಿದರು ಆನ್‌ಲೈನ್ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದಾರೆ.