ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆದಿತ್ಯ ರಾಯ್‌ ಕಪೂರ್‌ ಜೊತೆ ಡೇಟಿಂಗ್‌ ಆರಂಭಿಸಿದ ʻಟಾಕ್ಸಿಕ್‌ʼ ಸುಂದರಿ ತಾರಾ ಸುತಾರಿಯಾ; ಹಳೇ ಬಾಯ್‌ಫ್ರೆಂಡ್‌ ಕಥೆ ಏನು?

ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಮತ್ತು ನಟ ಆದಿತ್ಯ ರಾಯ್ ಕಪೂರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ವೀರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದ ತಾರಾ, ಅವರೊಂದಿಗೆ ಬ್ರೇಕಪ್ ಮಾಡಿಕೊಂಡು ಈಗ ಆದಿತ್ಯ ರಾಯ್ ಜೊತೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ.

ಆದಿತ್ಯ ರಾಯ್ ಕಪೂರ್ ಜೊತೆ ʻಟಾಕ್ಸಿಕ್‌ʼ ನಟಿ ತಾರಾ ಸುತಾರಿಯಾ ಹೊಸ ಪ್ರೇಮಾಯಣ

-

Avinash GR
Avinash GR May 3, 2026 12:51 PM

ಬಾಲಿವುಡ್‌ ನಟಿ ತಾರಾ ಸುತಾರಿಯಾ ಮತ್ತು ನಟ ಆದಿತ್ಯ ರಾಯ್ ಕಪೂರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಹೊಸ ಸುದ್ದಿ ವೈರಲ್‌ ಆಗಿದೆ. ತಾರಾ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನವರೆಗೂ ಅನನ್ಯ ಪಾಂಡೆ ಜೊತೆ ಗುರುತಿಸಿಕೊಂಡಿದ್ದ ಆದಿತ್ಯ ಈಗ ತಾರಾ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ಕುರಿತ ಚರ್ಚೆಗಳು ಶುರುವಾಗಿವೆ, ಆದರೆ ಇಬ್ಬರು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತಾರಾಗೆ ಬ್ರೇಕ್‌ ಅಪ್‌ ಆಯ್ತಾ?

ಆದಿತ್ಯ ರಾಯ್‌ ಕಪೂರ್‌ ಅವರ ಜೊತೆಗೆ ತಾರಾ ಸುತಾರಿಯಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವಿಚಾರ ವೈರಲ್‌ ಆಗುತ್ತಿದ್ದಂತೆಯೇ, ತಾರಾ ಅವರ ಹಿಂದಿನ ಲವ್‌ ಸ್ಟೋರಿಗೆ ಈಗ ಜೀವ ಬಂದಿದೆ. ಹೌದು, ವೀರ್‌ ಪಹಾರಿಯಾ ಜೊತೆಗೆ ತಾರಾ ಡೇಟಿಂಗ್‌ ಮಾಡುತ್ತಿದ್ದರು. ಆದರೆ, ಅವರೀಗ ಬೇರೆ ಆಗಿದ್ದಾರಾ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ವರ್ಷದ ಕೊನೆಯಲ್ಲಿ ಮುಂಬೈನಲ್ಲಿ ನಡೆದ ಎಪಿ ಧಿಲ್ಲೋನ್ ಅವರ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ತಾರಾ ಮತ್ತು ವೀರ್ ವಿವಾದದ ಕೇಂದ್ರಬಿಂದುವಾಗಿದ್ದರು.

Toxic Movie: ಯಶ್ 'ಟಾಕ್ಸಿಕ್' ಸಿನಿಮಾಗೆ ಬಾಲಿವುಡ್ ಬ್ಯೂಟಿ ಎಂಟ್ರಿ: ರೆಬೆಕಾ ಆಗಿ ತಾರಾ ಸುತಾರಿಯಾ ಫಸ್ಟ್ ಲುಕ್ ವೈರಲ್!

ಅಂದು ವೇದಿಕೆಯ ಮೇಲಿದ್ದ ಗಾಯಕನೊಂದಿಗೆ ತಾರಾ ಆತ್ಮೀಯವಾಗಿ ಮಾತನಾಡಿದ್ದರು. ಆಗ ಪ್ರೇಕ್ಷಕರ ಸಾಲಿನಲ್ಲಿದ್ದ ವೀರ್ ಅವರ ಮುಖಭಾವವನ್ನು ನೋಡಿ ಅವರು ಅಸಮಾಧಾನಗೊಂಡಿದ್ದಾರೆ ಎಂದು ನೆಟ್ಟಿಗರು ವ್ಯಾಖ್ಯಾನಿಸಿದ್ದರು. ಆದರೆ, ತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದ ತಾರಾ, "ಇದು ಸುಳ್ಳು", "ಪೇಯ್ಡ್ ಪಿಆರ್" ಎಂದು ಹೇಳಿ ವದಂತಿಗಳಿಗೆ ತೆರೆ ಎಳೆದಿದ್ದರು. ಅತ್ತ ವೀರ್ ಕೂಡ ಆ ವೈರಲ್ ಕ್ಲಿಪ್ ಅನ್ನು ಜನರನ್ನು ದಾರಿತಪ್ಪಿಸಲು ಎಡಿಟ್ ಮಾಡಲಾಗಿದೆ ಎಂದಿದ್ದರು.

ಎಲ್ಲವೂ ಸರಿಹೋಗಿತ್ತು, ಆದರೆ..

ಸೋಶಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌ ಪ್ರಭಾವಿ ಓರ್ಹಾನ್ ಅವತ್ರಮಣಿ (ಓರಿ) ಕೂಡ ಆ ಮ್ಯೂಸಿಕ್‌ ಕಾನ್ಸರ್ಟ್‌ನ ಎಡಿಟ್ ಮಾಡದ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಾರಾ ಮತ್ತು ಎಪಿ ಧಿಲ್ಲೋನ್ ಮಾತನಾಡುವ ವೀರ್ ಉತ್ಸಾಹದಿಂದ ಪ್ರೋತ್ಸಾಹಿಸುತ್ತಿರುವುದು ಕಂಡುಬಂದಿತ್ತು. ವೀರ್ ಆ ಕ್ಲಿಪ್ ಅನ್ನು ಮರುಹಂಚಿಕೆ ಮಾಡಿ, "ಸತ್ಯಕ್ಕೆ ಯಾವಾಗಲೂ ಜಯ" ಎಂದು ಬರೆದುಕೊಂಡಿದ್ದರು.

ಆದಿತ್ಯ - ತಾರಾ ಡೇಟಿಂಗ್‌ನಲ್ಲಿ ಬ್ಯುಸಿ

ಇಷ್ಟೆಲ್ಲಾ ಆದಮೇಲೆ ಎಲ್ಲವೂ ಸರಿಹೋಯ್ತು, ತಾರಾ ಮತ್ತು ವೀರ್‌ ಜೋಡಿ ಮಧ್ಯೆ ಏನೂ ಸಮಸ್ಯೆ ಇಲ್ಲ ಅಂತ ಅಂದುಕೊಳ್ಳುತ್ತಿರುವಾಗಲೇ ಇದೀಗ ಇಬ್ಬರು ಬ್ರೇಕಪ್‌ ಮಾಡಿಕೊಂಡಿದ್ದಾರೆ, ತಾರಾಗೆ ಆದಿತ್ಯ ಮೇಲೆ ಲವ್‌ ಆಗಿದೆ ಎಂಬ ಹೊಸ ಸುದ್ದಿ ಕೇಳಿಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ, ತಾರಾ ಅಥವಾ ವೀರ್ ಅವರಿಂದ ಬ್ರೇಕ್-ಅಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಈಗ ಕೇಳಿಬಂದಿರುವ ವರದಿಯ ಪ್ರಕಾರ, ತಾರಾ ಮತ್ತು ಆದಿತ್ಯ ರಾಯ್ ಕಪೂರ್ ಡೇಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ.