ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'! ʼಟಾಕ್ಸಿಕ್‌ʼ ಟ್ರೈಲರ್‌ ಕಂಡು ದಂಗಾದ್ರು ಫ್ಯಾನ್ಸ್‌

Toxic Tailer Release: ಟಾಕ್ಸಿಕ್' (Toxic) ಚಿತ್ರದ ಟ್ರೈಲರ್ (Trailer Out) ಇಂದು (ಆಗಸ್ಟ್ 8) ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಚಿತ್ರದ ಟ್ರೈಲರ್‌ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವು 2026ರ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು. ಇದೀಗ ಟಾಕ್ಸಿಕ್‌ ಟ್ರೈಲರ್‌ ಔಟ್‌ ಆಗಿದೆ.

Toxic Tailer Out: ರಾಕಿಂಗ್ ಸ್ಟಾರ್ ಯಶ್ ಪಕ್ಕಾ 'ಕಿಂಗ್'!

ಟಾಕ್ಸಿಕ್‌ ಸಿನಿಮಾ -

Yashaswi Devadiga
Yashaswi Devadiga Aug 8, 2026 7:21 PM

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ, ಬಹುನಿರೀಕ್ಷಿತ ಗ್ಯಾಂಗ್‌ಸ್ಟರ್ ಕಥಾಹಂದರದ 'ಟಾಕ್ಸಿಕ್' (Toxic) ಚಿತ್ರದ ಟ್ರೈಲರ್ (Trailer Out) ಇಂದು (ಆಗಸ್ಟ್ 8) ಬಿಡುಗಡೆ ಆಗಿದೆ. ರಿಲೀಸ್ ಆಗಿರುವ ಚಿತ್ರದ ಟ್ರೈಲರ್‌ ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈ ಚಿತ್ರವು 2026ರ ಆಗಸ್ಟ್ 26 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಈವೆಂಟ್‌ಗೆ ಕನ್ನಡದ ಹಿರಿಯ ನಟ ಶಿವಣ್ಣ ಮುಖ್ಯ ಅತಿಥಿಯಾಗಿದ್ದರು.

ಅಂಡರ್‌ ವರ್ಲ್ಡ್‌ ಲೋಕದಲ್ಲಿ ಯಶ್‌ ಅಬ್ಬರ ಜೋರಾಗಿದೆ. ಮೂರು ಅವತಾರದಲ್ಲಿ ಅಬ್ಬರಿಸಿದ್ದಾರೆ ಯಶ್‌. ಅದರಲ್ಲೂ ಕಿಯಾರ, ನಯನತಾರಾ ಪ್ರಮುಖ ಹೈಲೈಟ್‌ ಆಗಿದ್ದಾರೆ. ಎಲ್ಲ ಭಾಷೆಗಳಲ್ಲಿಯೂ ಟ್ರೈಲರ್‌ ಔಟ್‌ ಆಗಿದೆ. ಗ್ಲ್ಯಾಮರ್‌ ಅವತಾರದಲ್ಲಿ ಕಿಯಾರಾ ಅಡ್ವಾಣಿ ಮಿಂಚಿದ್ದಾರೆ. ಸಿನಿಮಾನಲ್ಲಿ ಅಪ್ಪ-ಮಗನ ನಡುವಿನ ದ್ವೇಷದ ಕತೆ ಇದೆ. ಅಪ್ಪ-ಮಗ ಎರಡೂ ಪಾತ್ರಗಳಲ್ಲಿ ಯಶ್ ನಟಿಸಿದ್ದಾರೆ.

‘ಟಾಕ್ಸಿಕ್’ ಟ್ರೈಲರ್ ನಲ್ಲಿ ಯಶ್ ಅವರನ್ನು ಹಲವು ಆಕರ್ಷಕ ರೂಪಗಳಲ್ಲಿ ನೋಡಬಹುದು. ಕ್ರೈಮ್, ಅಧಿಕಾರ ಮತ್ತು ದ್ರೋಹದ ಅಪಾಯಕಾರಿ ಜಗತ್ತನ್ನು ತೋರಿಸುತ್ತದೆ. ಜೊತೆಗೆ ಸ್ಟೈಲಿಶ್ ಆಕ್ಷನ್ ಸೀನ್‌ಗಳೂ ಇವೆ. ಟ್ರೈಲರ್‌ನಲ್ಲಿ ರೊಮ್ಯಾಂಟಿಕ್ ಭಾಗವೂ ಇದೆ. ಕಥೆಯ ಬಗ್ಗೆ ಹೆಚ್ಚು ಬಿಟ್ಟುಕೊಟ್ಟಿಲ್ಲ. ಮುಖ್ಯ ವಿವರಗಳನ್ನು ರಹಸ್ಯವಾಗಿ ಇಟ್ಟು, ಟ್ರೈಲರ್ ಯಶ್‌ನ ಪಾತ್ರ ಮತ್ತು ಅವರ ಜಗತ್ತಿನ ಬಗ್ಗೆ ಕುತೂಹಲ ಹುಟ್ಟಿಸುತ್ತದೆ. ಗ್ಯಾಂಗ್‌ಸ್ಟರ್ ಡ್ರಾಮಾ, ರೊಮ್ಯಾನ್ಸ್ ಮತ್ತು ದೊಡ್ಡ ಆಕ್ಷನ್ ಸೇರಿ, ಟಾಕ್ಸಿಕ್ ಯಶ್‌ನ ಹಿಂದಿನ ಚಿತ್ರಗಳಿಗಿಂತ ತುಂಬಾ ವಿಭಿನ್ನವಾಗಿ ಕಂಡಿದ್ದಾರೆ.

ಯಶ್ ಅವರು ಈ ವಿಶೇಷ ದಿನಕ್ಕಾಗಿ ಆಗಸ್ಟ್ 8 ರನ್ನೇ ಆಯ್ಕೆ ಮಾಡಿಕೊಳ್ಳಲು ಒಂದು ಮುಖ್ಯ ಕಾರಣವಿದೆ. ಅವರ ಜನ್ಮದಿನಾಂಕ ಜನವರಿ 8 ಆಗಿರುವುದರಿಂದ, '8' ಅವರ ಲಕ್ಕಿ ನಂಬರ್ ಆಗಿದೆ.ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಮಾಡಲಾಗಿದೆ.

1940 ರಿಂದ 1970ರ ದಶಕದ ಗೋವಾದ ಕರಾವಳಿ ತೀರದ ಹಿನ್ನೆಲೆಯನ್ನು ಹೊಂದಿದೆ. ಚಿತ್ರದಲ್ಲಿ ಯಶ್ ಅವರು ಅಂತಾರಾಷ್ಟ್ರೀಯ ಮಟ್ಟದ ಕ್ರಿಮಿನಲ್ ಸಾಮ್ರಾಜ್ಯವನ್ನು ಕಟ್ಟುವ 'ರಾಯಾ' ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಯರಾದ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.



ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: Toxic Trailer: ʻಟಾಕ್ಸಿಕ್‌ʼ ಟ್ರೇಲರ್‌ ರಿಲೀಸ್‌ ಇವೆಂಟ್‌! ಶಿವಣ್ಣ ಮುಖ್ಯ ಅತಿಥಿ

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಹಾಗೂ ಉಜ್ವಲ್ ಕುಲಕರ್ಣಿ ಸಂಕಲನ ಒದಗಿಸಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.