Sreejith Ravi: ಪೋಕ್ಸೊ ಪ್ರಕರಣದಲ್ಲಿ ನಟ ಶ್ರೀಜಿತ್ ರವಿಗೆ ಒಂದು ವರ್ಷ ಕಠಿಣ ಜೈಲು!
Sreejith Ravi:ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಶ್ರೀಜಿತ್ ರವಿ (Sreejith Ravi) ಗೆ ಕೇರಳದ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತ ಮಕ್ಕಳ ಎದುರು ಅಸಭ್ಯವಾಗಿ ವರ್ತಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ನಟನಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2005ರಿಂದ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ (Tamil Movies) ಪೋಷಕ ಹಾಗೂ ಖಳನಾಯಕನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
ಶ್ರೀಜಿತ್ ರವಿ -
ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ
ಶ್ರೀಜಿತ್ ರವಿ (Sreejith Ravi) ಕೇರಳದ ನ್ಯಾಯಾಲಯ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಪ್ರಾಪ್ತ ಮಕ್ಕಳ ಎದುರು ಅಸಭ್ಯವಾಗಿ ವರ್ತಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ನಟನಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2005ರಿಂದ ಮಲಯಾಳಂ ಮತ್ತು ತಮಿಳು ಸಿನಿಮಾಗಳಲ್ಲಿ (Tamil Movies) ಪೋಷಕ ಹಾಗೂ ಖಳನಾಯಕನ ಪಾತ್ರಗಳ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
2022ರಲ್ಲಿ ತ್ರಿಶೂರ್ನಲ್ಲಿ ನಡೆದಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆ (POCSO Act, 2012) ಅಡಿಯಲ್ಲಿ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಕಟಿಸಿದೆ.
ಇದನ್ನೂ ಓದಿ: Bigg Boss Kannada 13: ಜಗ್ಗ ಮಮ್ಮಿ ʻಗಂಡಸ್ತನʼ ಪ್ರಶ್ನಿಸಿದ ಮಂಜನಿಗೆ ಕಿಚ್ಚನ ಕ್ಲಾಸ್!
ತ್ರಿಶೂರ್ನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ-IIರ ನ್ಯಾಯಾಧೀಶೆ ರಮ್ಯಾ ಮೆನನ್ ಅವರು, ಪೋಕ್ಸೋ ಕಾಯ್ದೆಯ ಸೆಕ್ಷನ್ 12 ಹಾಗೂ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 509ರ ಅಡಿಯಲ್ಲಿ
ಶ್ರೀಜಿತ್ ರವಿ ಅವರನ್ನು ದೋಷಿ ಎಂದು ಘೋಷಿಸಿದ್ದಾರೆ. ಸ್ರೀಜಿತ್ ಟಿ.ಆರ್. ಎಂದೂ ಗುರುತಿಸಿಕೊಂಡಿರುವ ಅವರು ಹಿರಿಯ ನಟ ಟಿ.ಜಿ. ರವಿ ಅವರ ಪುತ್ರರಾಗಿದ್ದಾರೆ.
ಇಬ್ಬರು ಬಾಲಕಿಯರ ಸಾಕ್ಷ್ಯಕ್ಕೆ ಮಹತ್ವ
ಘಟನೆ ನಡೆದ ಸಂದರ್ಭದಲ್ಲಿ ಬಾಲಕಿಯರಿಗೆ ಕ್ರಮವಾಗಿ 14 ಮತ್ತು 10 ವರ್ಷ ವಯಸ್ಸಾಗಿತ್ತು. ಇಬ್ಬರು ಬಾಲಕಿಯರು ನ್ಯಾಯಾಲಯದಲ್ಲಿ ನೀಡಿದ ಸ್ಥಿರ ಹಾಗೂ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಪರಿಗಣಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.
2022ರ ಜುಲೈ 4ರಂದು ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಬಾಲಕಿಯರು ತ್ರಿಶೂರ್ನ ಅರನಾಟ್ಟುಕರದಲ್ಲಿರುವ ತಮ್ಮ ಅಪಾರ್ಟ್ಮೆಂಟ್ಗೆ ತೆರಳುತ್ತಿದ್ದರು. ಈ ವೇಳೆ
ಶ್ರೀಜಿತ್ ರವಿ ಕಾರಿನಲ್ಲಿ ಅವರನ್ನು ಹಿಂಬಾಲಿಸಿ, ಅಪಾರ್ಟ್ಮೆಂಟ್ನ ಕಾರ್ ಪಾರ್ಕಿಂಗ್ ಪ್ರದೇಶದಲ್ಲಿ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದರು ಎಂಬುದು ಪ್ರಾಸಿಕ್ಯೂಷನ್ ಆರೋಪವಾಗಿತ್ತು.
ವಿಚಾರಣೆ ವೇಳೆ ಇಬ್ಬರು ಬಾಲಕಿಯರು ಆರೋಪಿಯನ್ನು ಗುರುತಿಸಿದ್ದರು. ಆದರೆ,
ಶ್ರೀಜಿತ್ ರವಿ ಖ್ಯಾತ ಚಲನಚಿತ್ರ ನಟರಾಗಿದ್ದರೂ ಬಾಲಕಿಯರು ಅವರ ಹೆಸರನ್ನು ಗುರುತಿಸಲು ವಿಫಲರಾಗಿದ್ದರು ಎಂದು ಆರೋಪಿಯ ಪರ ವಕೀಲರು ವಾದಿಸಿದ್ದರು.
ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಬಾಲಕಿಯರು ಆರೋಪಿಯ ದೈಹಿಕ ಚಹರೆ ಹಾಗೂ ಹಾಜರಾತಿಯನ್ನು ನಿರಂತರವಾಗಿ ಗುರುತಿಸಿದ್ದು, ಹೆಸರನ್ನು ಹೇಳದಿರುವುದರಿಂದ ಅವರ ಸಾಕ್ಷ್ಯದ ವಿಶ್ವಾಸಾರ್ಹತೆ ಕಡಿಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಬಾಲಕಿಯರ ಸಾಕ್ಷ್ಯಗಳು ಸ್ಪಷ್ಟವಾಗಿದ್ದು, ನಂಬಿಕೆಗೆ ಅರ್ಹವಾಗಿವೆ. ಆರೋಪಿಯ ವಿರುದ್ಧದ ಆರೋಪಗಳು ಸಂಶಯಕ್ಕೆ ಎಡೆಯಿಲ್ಲದಂತೆ ಸಾಬೀತಾಗಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಪೊಲೀಸ್ ತನಿಖೆಯ ಲೋಪಗಳ ಬಗ್ಗೆಯೂ ಉಲ್ಲೇಖ
ಪ್ರಕರಣದ ತನಿಖೆಯಲ್ಲಿ ಕೆಲವು ಲೋಪಗಳಿದ್ದವು ಎಂದು ನ್ಯಾಯಾಲಯ ಗಮನಿಸಿದೆ. ವಿಶೇಷವಾಗಿ, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸದಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸಿದೆ.
ಆದರೆ, ತನಿಖೆಯಲ್ಲಿನ ಇಂತಹ ಲೋಪಗಳು ಬಾಲಕಿಯರು ನೀಡಿದ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ತಳ್ಳಿಹಾಕಲು ಕಾರಣವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಶಿಕ್ಷೆಯಲ್ಲಿ ರಿಯಾಯಿತಿಗೆ ಮನವಿ ತಿರಸ್ಕಾರ
ಆರೋಪಿಗೆ ಈ ಹಿಂದೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಮತ್ತು ಪ್ರಕರಣದಿಂದಾಗಿ ಅವರ ನಟನಾ ವೃತ್ತಿಜೀವನಕ್ಕೆ ಹಾನಿಯಾಗಿದೆ ಎಂಬ ಕಾರಣಗಳನ್ನು ಮುಂದಿಟ್ಟು ರಕ್ಷಣಾ ವಕೀಲರು ಶಿಕ್ಷೆಯಲ್ಲಿ ರಿಯಾಯಿತಿ ನೀಡುವಂತೆ ಮನವಿ ಮಾಡಿದ್ದರು.
ಆದರೆ, ಇಬ್ಬರು ಶಾಲಾ ಬಾಲಕಿಯರನ್ನು ಗುರಿಯಾಗಿಸಿಕೊಂಡು ನಡೆಸಿದ ಕೃತ್ಯವು ಅವರ ಮನಸ್ಸಿನ ಮೇಲೆ ದೀರ್ಘಕಾಲದ ಪರಿಣಾಮ ಬೀರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹೀಗಾಗಿ ಶಿಕ್ಷೆಯಲ್ಲಿ ರಿಯಾಯಿತಿ ನೀಡುವ ಮನವಿಯನ್ನು ತಿರಸ್ಕರಿಸಿತು.
ಅಲ್ಲದೆ, ಆರೋಪಿಯಿಂದ ದಂಡದ ಮೊತ್ತ ವಸೂಲಿಯಾದರೆ ಅದನ್ನು ಇಬ್ಬರು ಸಂತ್ರಸ್ತ ಬಾಲಕಿಯರಿಗೆ ಸಮಾನವಾಗಿ ಪರಿಹಾರ ರೂಪದಲ್ಲಿ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: Bigg Boss Kannada 13: ಇಡೀ ಸೀಸನ್ ನಾಮಿನೇಟ್ ಆಗೋದು ಯಾರು? ಬಿಗ್ ಟ್ವಿಸ್ಟ್!
ಮೇಲ್ಮನವಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ
ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ
ಶ್ರೀಜಿತ್ ರವಿ ತಿಳಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಒಂದು ತಿಂಗಳ ಅವಧಿಗೆ ಶಿಕ್ಷೆಯನ್ನು ಅಮಾನತುಗೊಳಿಸಿದೆ.
₹50,000 ಮೊತ್ತದ ಬಾಂಡ್ ಹಾಗೂ ಇಬ್ಬರು ಜಾಮೀನುದಾರರ ಭದ್ರತೆಯೊಂದಿಗೆ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. 2026ರ ಡಿಸೆಂಬರ್ 23ರಂದು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.