Vijay kumar: 'ಮಂಗಳಗೌರಿ ಮದುವೆ' ಸೀರಿಯಲ್ ಖ್ಯಾತಿಯ ನಟ ಇನ್ನಿಲ್ಲ
Vijay kumar: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಮಂಟೆಸ್ವಾಮಿ ಕಥಾ ಪ್ರಸಂಗ ಹಾಗೂ ಸುಪ್ರಸಿದ್ಧ ರಂಗಗೀತೆಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದರು. ವಿಜಯ್ ಕುಮಾರ್ ಜಿತೂರಿ ಅವರು ಮಂಗಳಗೌರಿ ಸೀರಿಯಲ್ನ ಗಗನ್ ಚಿನ್ನಪ್ಪ ಅವರ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಆಗಿ ನಟಿಸಿದ್ದರು.
ವಿಜಯ್ ಕುಮಾರ್ -
ಖ್ಯಾತ ಕಿರುತೆರೆ ನಟ ಹಾಗೂ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಜಿತೂರಿ (Vijay kumar jithoori) ನಿಧನರಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಮಂಟೆಸ್ವಾಮಿ ಕಥಾ ಪ್ರಸಂಗ ಹಾಗೂ ಸುಪ್ರಸಿದ್ಧ ರಂಗಗೀತೆಗಳ ಗಾಯನದಲ್ಲಿ ತೊಡಗಿಸಿಕೊಂಡಿದ್ದರು. ವಿಜಯ್ ಕುಮಾರ್ ಜಿತೂರಿ ಅವರು ಮಂಗಳಗೌರಿ ಸೀರಿಯಲ್ನ ಗಗನ್ ಚಿನ್ನಪ್ಪ ಅವರ ಪೊಲೀಸ್ ಪಾತ್ರದ ಜೊತೆ ಕಾನ್ಸ್ಟೇಬಲ್ ಆಗಿ ನಟಿಸಿದ್ದರು.
ಇದನ್ನೂ ಓದಿ: Ram Gopal Varma: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ಈ ನಟ!
'ಮಿಲನ' ಹಾಗೂ 'ಮಂಗಳಗೌರಿ ಮದುವೆ' ಮುಂತಾದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಇದೀಗ ಅನೇಕ ವೀಕ್ಷಕರು, ಕಲಾವಿದರು ಕಂಬನಿ ಮಿಡಿದಿದ್ದಾರೆ. ಮಂಟೆಸ್ವಾಮಿ ಕಥಾ ಪ್ರಸಂಗದ ಹಾಡುಗಾರಿಕೆ ನೋಡಿ ಶಂಕರ್ ನಾಗ್ ಸ್ವತಃ ಆಯ್ಕೆ ಮಾಡಿಕೊಂಡಿದ್ದ ಗಾಯಕ ವಿಜಯ್ ಕುಮಾರ್ ಜಿತೂರಿ.
ಗದಗಿನ ಬೆಟ್ಟಗೇರಿಯಿಂದ ಬೆಂಗಳೂರಿನ ಕಲಾಕ್ಷೇತ್ರದವರೆಗೆ, ಟೆಕ್ಸ್ಟೈಲ್ ಡಿಸೈನ್ ಮಾಡುತ್ತಲೇ ರಂಗಭೂಮಿ ಪ್ರೀತಿಗಾಗಿ ಹೋರಾಡಿದ ಪೋಷಕ ನಟ ವಿಜಯ್ ಕುಮಾರ್ ಜಿತೂರಿ . ಮಂಟೆಸ್ವಾಮಿ ಕಥಾ ಪ್ರಸಂಗದ 550ಕ್ಕೂ ಹೆಚ್ಚು ಪ್ರದರ್ಶನಗಳು ನೀಡಿದ್ದಾರೆ.