ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ʻಟಾಕ್ಸಿಕ್ʼ ಚಿತ್ರದ ರಿಲೀಸ್ ಡೇಟ್ ಕೊನೆಗೂ ಫಿಕ್ಸ್; ಇನ್ನೆರಡು ತಿಂಗಳಲ್ಲಿ ಬರ್ತಾನೆ ʻರಾಯʼ!
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರ ಬುಧವಾರ ವಿಶ್ವದಾದ್ಯಂತ 6 ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಯಶ್ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
'ಕೆಜಿಎಫ್' ಸರಣಿಯ ಭರ್ಜರಿ ಯಶಸ್ಸಿನ ನಂತರ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಮುಂದಿನ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic: A Fairy Tale for Grown-Ups) ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಈ ಪ್ಯಾನ್-ಇಂಡಿಯಾ ಸಿನಿಮಾವು ಆಗಸ್ಟ್ 26ರ ಬುಧವಾರದಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ.
'ರಾಯ ಮತ್ತು ಟಿಕೆಟ್': ಯಶ್ ದ್ವಿಪಾತ್ರದ ಝಲಕ್!
ದಿನಾಂಕ ಪ್ರಕಟಣೆಯ ಜೊತೆಗೆ ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಇದು ಸಿನಿಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಹೊಸ ಪೋಸ್ಟರ್‌ನಲ್ಲಿ ಯಶ್ ಅವರ ಎರಡು ವಿಭಿನ್ನ ಅವತಾರಗಳಾದ 'ರಾಯ' (Raya) ಮತ್ತು 'ಟಿಕೆಟ್' (Ticket) ಪಾತ್ರಗಳನ್ನು ಪರಿಚಯಿಸಲಾಗಿದೆ. ಇದು ಸಾಮಾನ್ಯ ತಂದೆ-ಮಗನ ಸೆಂಟಿಮೆಂಟ್ ಕಥೆಯಲ್ಲ, ಬದಲಿಗೆ ಇಬ್ಬರ ನಡುವಿನ ತೀವ್ರ ಪೈಪೋಟಿಯ ಕಥೆ ಎಂಬುದನ್ನು ಪೋಸ್ಟರ್ ಸೂಚಿಸುತ್ತಿದೆ. ಯಶ್ ಅವರ ಈ ಹೊಸ ಲುಕ್ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
Actor Yash: ಜೂನ್ 8ಕ್ಕೆ ಸಿಗಲಿದೆ ‘ಟಾಕ್ಸಿಕ್’ನಿಂದ ಬಿಗ್ ಸರ್‌ಪ್ರೈಸ್? ವಿಶೇಷ ಏನು?
ಹಬ್ಬಗಳ ಸೀಸನ್ ಮೇಲೆ ಕಣ್ಣಿಟ್ಟ 'ಟಾಕ್ಸಿಕ್'!
'ಟಾಕ್ಸಿಕ್' ಚಿತ್ರವನ್ನು ಬುಧವಾರ (ಆಗಸ್ಟ್ 26) ಬಿಡುಗಡೆ ಮಾಡುತ್ತಿರುವುದರ ಹಿಂದೆ ಚಿತ್ರತಂಡದ ದೊಡ್ಡ ತಂತ್ರವಿದೆ. ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ವರಮಹಾಲಕ್ಷ್ಮಿ ಹಬ್ಬ, ಓಣಂ, ಈದ್ ಮತ್ತು ರಕ್ಷಾಬಂಧನ ಸಾಲು ಸಾಲಾಗಿ ಬರುವುದರಿಂದ, ಸುದೀರ್ಘ ರಜಾದಿನಗಳ ಲಾಭ ಈ ಚಿತ್ರಕ್ಕೆ ಸಿಗಲಿದೆ. ಈ ಹಬ್ಬದ ಸೀಸನ್ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆಯಲು 'ಟಾಕ್ಸಿಕ್' ಚಿತ್ರಕ್ಕೆ ಒಳ್ಳೆಯ ವೇದಿಕೆ ಹಾಕಿಕೊಡಲಿದೆ.
Toxic Movie: ಗೀತು ಮೋಹನ್‌ದಾಸ್ ಹುಟ್ಟುಹಬ್ಬ; ‘ಟಾಕ್ಸಿಕ್’ ಮೇಕಿಂಗ್ ವಿಡಿಯೋ ಔಟ್!
ನಿರ್ದೇಶಕಿ ಗೀತು ಮೋಹನ್‌ದಾಸ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಹೆಚ್ಚು ಬಂಡವಾಳ ಹೂಡಲಾದ ಚಿತ್ರಗಳಲ್ಲಿ ಇದು ಒಂದಾಗಿದೆ. ವಿಶೇಷವೆಂದರೆ, ಈ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಜಾಗತಿಕ ಮಟ್ಟದ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಕನ್ನಡ, ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಟಾಕ್ಸಿಕ್ ಸಿನಿಮಾವನ್ನು ರಿಲೀಸ್ ಮಾಡುವ ಪ್ಲ್ಯಾನ್ ಇದೆ.
ವಿಶ್ವತಂದೆಯಂದಿರ ದಿನದಂದು ರಿಲೀಸ್ ಡೇಟ್ ಘೋಷಣೆ
Honour Thy Father...#Toxic In Cinemas Worldwide from 26-08-2026#ToxicTheMovie#Nayanthara @advani_kiara #TaraSutaria@humasqureshi @rukminitweets #GeetuMohandas @VishalMMishra #RajeevRavi #UjwalKulkarni #TPAbid #MohanBKere #SandeepSadashiva #PrashantDileepHardikar… pic.twitter.com/oAlW0JdldO
— Yash (@TheNameIsYash) June 21, 2026
'ಟಾಕ್ಸಿಕ್' ಚಿತ್ರದಲ್ಲಿ ಭಾರತೀಯ ಚಿತ್ರರಂಗದ ಸ್ಟಾರ್ ನಟಿಯರ ದಂಡೇ ಇದೆ. ಲೇಡಿ ಸೂಪರ್‌ಸ್ಟಾರ್ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ, ಸುದೇವ್ ನಾಯರ್, ಬಾಲಾಜಿ ಮನೋಹರ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದ್ದು, ಟಾಕ್ಸಿಕ್ ರಿಲೀಸ್‌ಗೆ ಇನ್ನೆರಡು ತಿಂಗಳು ಬಾಕಿ ಇದೆ. ಅಭಿಮಾನಿಗಳ ಕಾತರ ಈಗಿನಿಂದಲೇ ಆರಂಭವಾಗಿದೆ.